Chikkamagaluru: ಸರ್ಕಾರದ ಯೋಜನೆಯಿಂದ ಗೊಂದಲ: ರೈತರ ಸ್ಥಿತಿ ಅತಂತ್ರ

By Girish Goudar  |  First Published Apr 13, 2022, 12:06 PM IST

*  ಒಬ್ಬರ ಮುಖ ಇನ್ನೊಬ್ಬರು ನೋಡದಂತ ಪರಿಸ್ಥಿತಿ 
*  ಅಧಿಕಾರಿಗಳು ಮಾಡಿದ ಯಡವಟ್ಟಿಗೆ ಪೋಡಿ ಮುಕ್ತ ಯೋಜನೆ ಹಳ್ಳಕ್ಕೆ 
*  ಬಯಲುಸೀಮೆ ಭಾಗದ ರೈತ ಸ್ಥಿತಿ ಅತಂತ್ರ
 


ಚಿಕ್ಕಮಗಳೂರು(ಏ.12): ಸರ್ಕಾರ ಪೋಡಿ ಮುಕ್ತ ಗ್ರಾಮ ಮಾಡೋ ಯೋಜನ್ನೆನೋ ಜಾರಿ ಮಾಡ್ತು. ಆದ್ರೆ ಆ ಯೋಜನೆ ರೈತರಿಗೆ ಅನುಕೂಲಕ್ಕಿಂತ ಮಾರಕವಾಗಿದ್ದೇ ಜಾಸ್ತಿಯಾಗಿದೆ. ತಲೆ-ತಲೆಮಾರುಗಳಿಂದ ಕೃಷಿ ಮಾಡಕೊಂಡ ಬಂದ ಜಮೀನಿನ(Land) ದಾಖಲೆಗಳೇ ಬೇರೆ ಕಡೆ ವರ್ಗಾವಣೆಯಾಗಿದೆ. ಗ್ರಾಮದಲ್ಲಿ ಅಣ್ಣ ತಮ್ಮಂದಿರಂತೆ ಬಾಳ್ತಿದ್ದ ರೈತರು(Farmers) ಈಗ ಒಬ್ಬರ ಮುಖ ಇನ್ನೊಬ್ಬರು ನೋಡದಂತ ಪರಿಸ್ಥಿತಿ ಎದುರಾಗಿದೆ. ಅಧಿಕಾರಿಗಳು ಮಾಡಿದ ಯಡವಟ್ಟಿಗೆ ಪೋಡಿ ಮುಕ್ತ ಯೋಜನೆ ಹಳ್ಳ ಹಿಡಿದಿದೆ. ತಾತ ಮುತ್ತಾತರ ಕಾಲದಿಂದ ಉಳುಮೆ ಮಾಡಿದ ಜಮೀನಿಗಾಗಿ ಕಚೇರಿ ಅಲೆಯುವ ಪರಿಸ್ಥಿತಿ ಎದುರಾಗಿದೆ.

Tap to resize

Latest Videos

ಬಯಲು ಸೀಮೆ ರೈತರಿಗೆ ಪೋಡಿ ಮುಕ್ತ ಯೋಜನೆಯಿಂದ ತೊಂದರೆ

ಪೋಡಿ ಮುಕ್ತ ಗ್ರಾಮ ಮಾಡಬೇಕು ಅನ್ನೋದು ಸರ್ಕಾರದ(Government of Karnataka) ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಆದ್ರೆ ಈ ಯೋಜನೆ ಕಾಫಿನಾಡಿನ ಬಯಲು ಸೀಮೆ ರೈತರಿಗೆ ವರದಾನವಾಗುವ ಬದಲು ಶಾಪವಾಗಿ ಪರಿಣಮಿಸಿದೆ. ಚಿಕ್ಕಮಗಳೂರು(Chikkamagaluru) ಜಿಲ್ಲೆಯ ಕಡೂರು ತಾಲೂಕಿನ ಕೆ.ದಾಸರಹಳ್ಳಿ, ಮರಹಳ್ಳಿ, ಉಕ್ಕಳಸೆ ರೈತರು ಜಮೀನು ಪತ್ರಕ್ಕಾಗಿ ಕಚೇರಿ ಅಲೆಯುವಂತಾಗಿದೆ. ಕಾರಣ ಅಧಿಕಾರಿಗಳು ಪೋಡಿ ಮಕ್ತ ಮಾಡ್ತಿವಿ ಅಂತ ಕಚೇರಿಯಲ್ಲಿ ಕುಳಿತು ಜಮೀನು ಸರ್ವೇ ಮಾಡದೇ ಪೋಡಿ ಮಾಡಿದ್ರು. ತಲೆ ತಲಾಂತರಿಂದ ಉಳುಮೆ ಮಾಡಕೊಂಡು ಬಂದ ಜಮೀನು ಇನ್ನೊಬ್ಬರ ಪಾಲಾಯ್ತು. ಈ ಭಾಗದ ಸುಮಾರು 300 ಎಕರೆ ಜಮೀನನ್ನ ಅಧಿಕಾರಿಗಳು ಪೋಡಿ ಮಾಡಿದ್ದಾರೆ. ಆದ್ರೆ ಯಾವೊಬ್ಬ ರೈತರನ್ನ ಜಮೀನಿಗೆ ಕರೆದಿಲ್ಲ. ಎಲ್ಲೋ ಕೂತು ಪೋಡ್ ಮಾಡಿದ ಪರಿಣಾಮ ಪಿತ್ರಾರ್ಜಿತ ಜಮೀನುಗಳೇ ಅದಲು ಬದಲಾಗಿವೆ. ರೈತರು ಜಮೀನಿನ ಖಾತೆ ಸರಿಪಡಿಸಲು ತಾಲೂಕು ಕಚೇರಿ. ಡಿಡಿಎಲ್.ಆರ್ ಕಚೇರಿಗೆ ಅಲೆದಾಡುವ ಪರಿಸ್ಥಿತಿ ರೈತರದ್ದಾಗಿದೆ. ಜಮೀನು ಖಾತೆ ಸರಿಪಡಿಸಿಕೊಡಿ ಅಂತ ಅಧಿಕಾರಿಗಳನ್ನ ಕೇಳಿದ್ರೆ ಉಡಾಫೆಯ ಉತ್ತರ ನೀಡ್ತಾರೆ ಅಂತ ರೈತರಾದ ತಿಪ್ಪೇಶ್ ಆರೋಪಿಸಿದ್ದಾರೆ.

ಸರ್ಕಾರಿ ಸ್ಕೂಲ್‌ಗೆ ಹೊಸ ರೂಪ ನೀಡಿದ ಗ್ರಾಮಸ್ಥರು: ಮಾದರಿ ಶಾಲೆನ್ನಾಗಿ ಮಾಡಿದ ಹಳೆ ವಿದ್ಯಾರ್ಥಿಗಳು..!

ಅಧಿಕಾರಿಗಳ ಬೇಜವಾಬ್ದಾರಿ ಕೆಲಸಕ್ಕೆ ರೈತರಿಗೆ ಬಂದ ಸಂಕಷ್ಟ 

ಈ ಭಾಗದ ರೈತರು ಇರೋ ಅಲ್ಪ ಸ್ವಲ್ಪ ಜಮೀನಿನಲ್ಲಿಯೇ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿದ್ರು. ಅಧಿಕಾರಿಗಳು ಪೋಡಿ ಮಾಡ್ತಿವಿ ಅಂತ ಇರೋ ಜಮೀನನ್ನು ಸಹ ಹದಗೆಡಿಸಿ ಹೋಗಿದ್ದಾರೆ. ಪೋಡ್‌ನಿಂದ ದಾಖಲೆಗಳು ಸರಿಪಡಿಸುವುದು, ಆಸ್ತಿಯನ್ನು ವಿಭಾಗಮಾಡಿ ಕುಟುಂಬದವರಿಗೆ ಹಂಚಿಕೆ ಮಾಡುವುದು ಸರ್ಕಾರದ ಉದ್ದೇಶವಾಗಿತ್ತು. ಇದೀಗ ಪೋಡ್ ಮುಕ್ತ ಗ್ರಾಮದ ಯೋಜನೆ ಬಯಲು ಸೀಮೆಯಲ್ಲಿ ಗೊಂದಲಕ್ಕೆ ಕಾರಣವಾಗಿದೆ. 

ಜಮೀನು ಮಾರಿ ಮಕ್ಕಳ ಮದುವೆ ಮಾಡೋಣ ಅಂದ್ರು ಆಗ್ತಿಲ್ಲ.ಈ ಹಿಂದೆ ನಮ್ಮ ಜಮೀನಿಗೆ ಸಿಂಗಲ್ ಪಾಣಿ ಬರ್ತಿತ್ತು.ಈಗ ಪಾಣಿಯಲ್ಲಿ ನಮ್ಮ ಕುಟುಂಬದ ಎಲ್ಲರ ಹೆಸರು ಬರ್ತಿದೆ. ಬ್ಯಾಂಕ್‌ನಲ್ಲಿ ಸಾಲ ಸಿಗ್ತಿಲ್ಲ. ಜಮೀನು ಖಾತೆ ಸರಿಪಡಿಸೋನಾ ಅಂದ್ರೆ ಪಯಣಿಗೂ ಸ್ಕೆಚ್‌ಗೂ ಟ್ಯಾಲಿ ಆಗ್ತಿಲ್ಲ ಅಂತ್ತಾರೆ ಅಧಿಕಾರಿಗಳು, ಪೋಡಿ ಮುಕ್ತ ಗ್ರಾಮ ಮಾಡ್ತಿವಿ ಅಂತ ಅಧಿಕಾರಿಗಳು ಮಾಡಿದ ಯಡವಟ್ಟಿಗೆ ಕೇಳಗಿನ ಜಮೀನು ಮೇಲಿನವರಿಗೆ. ಮೇಲಿನವರ ಜಮೀನು ಕೇಳಗಿನವರಿಗೆ ಅದಲು ಬದಲಾಗಿದೆ.

ಜಮೀನು ಕೃಷಿ ಮಾಡೋಣ ಅಂದ್ರೆ ನಮ್ಮ ಜಮೀನಿಗೆ ಬರಬೇಡಿ ಅಂತ ಜಗಳ ಮಾಡ್ತಾರೆ. ಊರಲ್ಲಿ ಅಣ್ಣ ತಮ್ಮಂದಿರಂತೆ ಬಾಳ್ತಿದ್ದ ಗ್ರಾಮಸ್ಥರು ಹೊಡೆದಾಟ ಮಾಡಕೊಳ್ಳೊ ಪರಿಸ್ಥಿತಿಗೆ ಅಧಿಕಾರಿಗಳು ತಂದೊಡಿದ್ದಾರೆ ಎಂದು ರೈತ ಚಂದ್ರ ಆರೋಪಿಸಿದ್ದಾರೆ. ಒಟ್ಟಾರೆ, ಸರ್ಕಾರದ ಯೋಜನೆ ರೈತರಿಗೆ ಸಹಕಾರಿಯಾಗಬೇಕು ನಿಜ. ಆದ್ರೆ ಕಾಫಿನಾಡಿನಲ್ಲಿ ಅಧಿಕಾರಿಗಳು ಪೋಡಿ ಮಾಡ್ತಿವಿ ಅಂತ ರೈತರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ. ಅಧಿಕಾರಿಗಳು ಮಾಡಿದ ಬೇಜವಾಬ್ದಾರಿ ಕೆಲಸಕ್ಕೆ ರೈತರು ಸಂಕಷ್ಟ ಪಡ್ತಿದ್ದಾರೆ. ಇನ್ನಾದ್ರು ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನು ಸರಿಪಡಿಸಿಕೊಳ್ಳಲು ಮುಂದಾಗ್ತಾರಾ ಎಂಬುದನ್ನ ಕಾದುನೋಡಬೇಕಿದೆ.
 

click me!