ಚಿತ್ರದುರ್ಗ: ಹಿರಿಯೂರಿನ ಸಕ್ಕರೆ ಕಾರ್ಖಾನೆ ಶೀಘ್ರವೇ ತೆರೆಯುವಂತೆ ರೈತರ ಆಗ್ರಹ

By Girish Goudar  |  First Published Sep 3, 2024, 8:08 PM IST

ಈ ಭಾಗದಲ್ಲಿ ಬಹುತೇಕ ಜನರು ಕೂಲಿ ಕಾರ್ಮಿಕರಿದ್ದು, ಪ್ರತಿವರ್ಷ ಉದ್ಯೋಗ ಹರಸಿ, ವಿವಿದೆಡೆಗೆ  ಗುಳೆ ಹೋಗ್ತಾರೆ. ಆದ್ದರಿಂದ ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸಕ್ಕರೆ ಕಾರ್ಖಾನೆ ರೀ ಓಪನ್ ಮಾಡಯುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ.


ವರದಿ: ಕಿರಣ್.ಎಲ್. ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ(ಸೆ.03): ಅದೊಂದು ಬರದನಾಡು ಎಂದು ಹಣೆಪಟ್ಟಿ ಪಡೆದಿರೋ ಪ್ರದೇಶ. ಅಲ್ಲಿನ ಜನರು ಹನಿ ನೀರಿಗೂ ಪರದಾಡ್ತಿದ್ರು‌, ಆದ್ರೆ ವಾಣಿವಿಲಾಸ ಸಾಗರ ಜಲಾಶಯ ಭರ್ತಿಯಾಗಿರೊ ಪರಿಣಾಮ ಅಲ್ಲಿನ ರೈತರಲ್ಲಿ ಕಬ್ಬು ಬೆಳೆಯುವ ಉತ್ಸಾಹ ಮೂಡಿದೆ. ಹೀಗಾಗಿ ಮುಚ್ಚಿರುವ ಶುಗರ್ ಫ್ಯಾಕ್ಟರಿಯನ್ನು ಆರಂಭಿಸುವಂತೆ ಸರ್ಕಾರದ ಆಗ್ರಹಿಸಿದ್ದಾರೆ.

Tap to resize

Latest Videos

undefined

ನೋಡಿ ಹೀಗೆ ಮುಚ್ಚಿರುವ ಸಕ್ಕರೆ ಕಾರ್ಖಾನೆ. ಸ್ವಚ್ಚತೆ ಕಾಣದೇ ಮುಳ್ಳಿನ ಗಿಡ ಬೆಳೆದ ಕಾರ್ಖಾನೆ ಆವರಣ. ಈ ದೃಶ್ಯಗಳಿಗೆ ಸಾಕ್ಷಿಯಾಗಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ನಗರದಲ್ಲಿನ ವಾಣಿ ವಿಲಾಸ ಸಕ್ಕರೆ ಕಾರ್ಖಾನೆ ಬಳಿ. ಹೌದು,1976 ರಲ್ಲಿ ಈ ಭಾಗದ ರೈತರ ಕೈ ಬಲಪಡಿಸಲು ಸರ್ಕಾರ  ಸಕ್ಕರೆ ಕಾರ್ಖಾನೆ ಆರಂಭಿಸಿತ್ತು. ಆದರೆ ಕಬ್ಬು ಪೂರೈಸಲಾಗದೇ 2002 ರಲ್ಲಿ ಮುಚ್ಚಲಾಯಿತು. ಅಂದಿನಿಂದ‌ ಇಂದಿನವರೆಗೆ ಈ ಭಾಗದಲ್ಲಿ‌ ಕಬ್ಬು ಬೆಳೆಯಲ್ಲ‌ವೆಂಬ ನೆಪವೊಡ್ಡಿ ಈ ಕಾರ್ಖಾನೆ ಆರಂಭಿಸಲು ಸರ್ಕಾರ ಮುಂದಾಗಿಲ್ಲ. ಹೀಗಾಗಿ ಈ ಭಾಗದ ರೈತರು‌ ಸತತ 10 ವರ್ಷಗಳಿಂದ  ಯಾವುದೇ ಬೆಳೆ ಬೆಳೆದರೂ, ತೀವ್ರ ನಷ್ಟ ಅನುಭವಿಸಿ ಸುಸ್ತಾಗಿದ್ದಾರೆ. ದಾಳಿಂಬೆ, ಅಡಿಕೆ ಸೇರಿದಂತೆ ಇತರೆ ಬೆಳೆಗಳು ರೈತರ ಕೈ ಸುಟ್ಟಿದ್ದೂ, ಕೋಟೆನಾಡಿನ ರೈತರನ್ನು ಸಾಲದ ಸುಳಿಗೆ ಸಿಲುಕಿಸಿವೆ. ಇಂತಹ ವೇಳೆ ವಾಣಿ ವಿಲಾಸ ಸಾಗರ ಜಲಾಶಯ ಭರ್ತಿಯಾಗಿರುವ ಹಿನ್ನಲೆಯಲ್ಲಿ  ರೈತರಲ್ಲಿ‌ ಕಬ್ಬು ಬೆಳೆಯುವ ಉತ್ಸಾಹ ಮೂಡಿದೆ‌.ಆದ್ದರಿಂದ ಸರ್ಕಾರವು ಸಕ್ಕರೆ ಕಾರ್ಖಾನೆಯನ್ನು ಮತ್ತೆ ಆರಂಭಿಸಿ,ಈ ಭಾಗದ ರೈತರನ್ನು ಸಂಕಷ್ಟದಿಂದ ಪಾರು ಮಾಡುವಂತೆ ಒತ್ತಾಯಿಸಿದ್ದಾರೆ.

ಇನ್ನು ರೈತರ‌ ಒತ್ತಡಕ್ಕೆ ಮಣಿದ ಮಾಜಿ ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ  ಶೀಘ್ರದಲ್ಲೇ ಹಿರಿಯೂರಿನ  ಸಕ್ಕರೆ‌ ಕಾರ್ಖಾನೆಯನ್ನು ಪುನರ್ ಆರಂಭಕ್ಕೆ ತಜ್ಞರ ಸಮಿತಿ ರಚಿಸುವುದಾಗಿ ಭರವಸೆ ನೀಡಿದ್ರು. ಆದ್ರೆ ಸರ್ಕಾರ ಬದಲಾದ ಪರಿಣಾಮ ಆ ಅಶ್ವಾಸನೆ ಈಡೇರಿಲ್ಲ. ಅಲ್ಲದೇ ಈ ಭಾಗದಲ್ಲಿ ಬಹುತೇಕ ಜನರು ಕೂಲಿ ಕಾರ್ಮಿಕರಿದ್ದು, ಪ್ರತಿವರ್ಷ ಉದ್ಯೋಗ ಹರಸಿ, ವಿವಿದೆಡೆಗೆ  ಗುಳೆ ಹೋಗ್ತಾರೆ. ಆದ್ದರಿಂದ ಅದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಸಕ್ಕರೆ ಕಾರ್ಖಾನೆ ರೀ ಓಪನ್ ಮಾಡಯುವಂತೆ ಹೋರಾಟಗಾರರು ಆಗ್ರಹಿಸಿದ್ದಾರೆ.

ಒಟ್ಟಾರೆ ವಾಣಿ ವಿಲಾಸ ಸಾಗರ ಭರ್ತಿಯಾಗಿ ನೀರು ಭೋರ್ಗರೆಯುತ್ತಿರುವ ಪರಿಣಾಮ ಹಿರಿಯೂರಿನ ರೈತರು ಕಬ್ಬು ಬೆಳೆಯುವ ಉತ್ಸಾಹದಲ್ಲಿದ್ದಾರೆ. ಹೀಗಾಗಿ ಇಲ್ಲಿನ ರೈತರ ಬವಣೆ ನೀಗಿಸಲು ಸಕ್ಕರೆ ಕಾರ್ಖಾನೆಯನ್ನು ಸರ್ಕಾರ ಪುನರ್ ಆರಂಭಿಸಿದ್ರೆ ಕೋಟೆ‌ನಾಡಿನ ಅನ್ನದಾತರಿಗೆ ಅನುಕೂಲವಾಗಲಿದೆ.

click me!