ಸೂತಕದ ಮನೆಗಳಿಗೆ ಹೋಗಿ ಸಾಂತ್ವನ ಹೇಳದ ಉಸ್ತುವಾರಿ ಮಂತ್ರಿ, ನೆಟೆರೋಗಕ್ಕೆ ತೊಗರಿ ಹಾನಿ, ರೈತರು ನೇಣಿಗೆ ಶರಣ, ನಮ್ಮ ಜನನಾಯಕರು ಎಲ್ಲಿದ್ದಾರೋ ಗೊತ್ತಿಲ್ಲ?. ತೊಗರಿ ರೈತರನ್ನು ಕಾಡುತ್ತಿರುವ ಸಂಕಷ್ಟಕ್ಕೆ ಉಸ್ತುವಾರಿ ಸಚಿವ, ಸಂಸದ- ಶಾಸಕರು ಡೋಂಟ್ ಕೇರ್.
ಶೇಷಮೂರ್ತಿ ಅವಧಾನಿ
ಕಲಬುರಗಿ(ಜ.07): ತೊಗರಿ ಕಣಜ ಕಲಬುರಗಿಯಲ್ಲಿ ಇದೇ ಮೊದಲ ಬಾರಿಗೆ ರೈತರ ಸಂಕಷ್ಟಕ್ಕೆ ಡೋಂಟ್ ಕೇರ್ ಎನ್ನುವ ಪರಿಸ್ಥಿತಿ ಮೂಡಿದೆ!. ತೊಗರಿ ಕಾಯಿ ಕಟ್ಟೋ ಹಂತದಲ್ಲಿ ನೆಟರೋಗ, ಬೇರು ಒಣಗಿ, ಹೂವು ಉದುರಿ ಸತ್ಯಾನಾಶವಾಗಿದೆ. ಇದರಿಂದ ಕಂಗಾಆಗಿ ಜಿಲ್ಲೆಯ ಐವರು ರೈರು ಅದಾಗಲೇ ಸಾವಿನ ಮನೆ ಸೇರಿದ್ದಾರೆ. ಇನ್ನೂ ಅನೇಕರು ರೈತರು ಸಾಲದ ಸೂಲಕ್ಕೆ ಬೆದರಿ ಬೆಚ್ಚಿ ಮನೆ ಸೇರಿದ್ದಾರೆ. ಇಂತಹ ಆಯೋಮಯ ಪರಿಸ್ಥಿತಿಯಲ್ಲಿ ಪರಿಹಾರದ ಕೂಗು ಎಲ್ಲಾಕಡೆ ಕೇಳಿಬರುತ್ತಿದ್ದರೂ ಆಡಳಿತಾರೂಢ ಸರ್ಕಾರ, ಸಚಿವರು ಯಾರೊಬ್ಬರೂ ರೈತರ ಕೂಗು, ಗೋಳಿಗೆ ಸ್ಪಂದಿಸುತ್ತಿಇಲ್ಲ. ಹೀಗಾಗಿ ರೈತ ಸಮೂಹಲ್ಲಿ ಇನ್ನಷ್ಟು ಆತಂಕ ಕಾಡಲಾರಂಭಿಸಿದೆ.
undefined
ಹಿಂದೆಲ್ಲಾ ರೈತರ ಆತ್ಮಹತ್ಯೆ ತುಂಬ ಗಂಭೀರವಾಗಿ ಪರಿಗಣಿಸಲಾಗುತ್ತಿತ್ತು. ಇಲ್ಲಾ ಉಸ್ತುವಾರಿ ಸಚಿವರಾದವರು ಆತ್ಮಹತೆ ಮಾಡಿಕೊಂಡ ರೈತರ ಮನೆಗಳಿಗೆ ಹೋಗಿ ಬಂದು ಕುಟುಂಬದವರಿಗೆ ಸಾಂತ್ವನ ಹೇಳುತ್ತಿದ್ದರು. ಆದರೆ ಈಗ ಇದೆಲ್ಲ ಮಾನವೀಯತೆ, ಅನುಕಪಂದ ನಡೆಗಳು ಜಿಲ್ಲೆಯಲ್ಲಿ ಯಾವ ಮಂತ್ರಿ, ಶಾಸಕರು, ಸಂಸದರಿಂದಲೂ ಕಂಡಿಲ್ಲ. ಇದುವರೆಗೂ ತೊರಿ ನೆಟೆ ರೋಗದಿಂದಲೇ ಹಾನಿ ಅನುಭಿಸಿ ಎದೆ ಡೆದುಕೊಂಡೋ, ಸಾಲಗಾರರ ಕಿರಿಕಿಗೆ ಬೆಚ್ಚಿಯೋ ಐವರು ರೈತರು ಆತ್ಮಹತ್ಯೆ ದಾರಿ ತುಳಿದರೂ ಅವರ ಕುಟುಂಬ ಬೀದಿ ಪಾಲಾದರೂ ಕೇಳೋರಿಲ್ಲದಂತಾಗಿದೆ.
Kalaburagi: ನೆಟೆರೋಗದಿಂದ ತೊಗರಿ ಬೆಳೆ ಹಾನಿ: 500 ಕೋಟಿ ರೂ. ಪ್ಯಾಕೇಜ್ ಘೋಷಣೆಗೆ ಪ್ರಿಯಾಂಕ್ ಖರ್ಗೆ ಆಗ್ರಹ
ನೆಟೆ ರೋಗಕ್ಕೆ ತೊಗರಿ ಹಾನಿ- ಎದೆ ಒಡೆದು 5 ರೈತರ ಆತ್ಮಹತ್ಯೆ
ಕಾಳಗಿ ತಾಲೂಕಿನ ಕೊಡೂರಿನ ಬಸ್ಸಪ್ಪ ಚಿನ್ನಾ (60), ಆಳಂದ ತಾಲೂಕು ಖಜೂರಿಯ ರೈತ ಚಿದಾನಂದ ಬಸಪ್ಪ ಜಾಬಶೆಟ್ಟಿ(53)ಚಿಂಚಳಿ ತಾಲೂಕಿನ ಹೊಡೆ ಬೀರನಹಳ್ಳಿ ರೈತ ಸೈಬಣ್ಣ ಪೂಜಾರಿ, ರಟಕಲ್ ರೈತ ಮೈನೋದ್ದೀನ್ ಗುಡುಬಾಯಿ ಹಾಗೂ ಅಫಜಲ್ಪುರ ತಾಲೂಕಿನ ತೊರಿ ರೈತ ಸೇರಿದಂತೆ ಈಗಾಗಲೇ ನೆಟೆ ರೋಗದಿಂದ ಆಗಿರುವ ಹಾನಿಗೇ ಇವರೆಲ್ಲರೂ ನೇಣು ಬಿಗಿದುಕೊಂಡೋ, ವಿಷ ಕುಡಿದೋ ಪ್ರಾಣ ಬಿಟ್ಟಿದ್ದಾರೆ.
ಇವರೆಲ್ಲರೂ ಲಕ್ಷಾಂತರ ರುಪಾಯಿ ಸಾಲ ಮಾಡಿದವರು. ಜೊತೆಗೇ ಅನೇಕ ರೈತರು ಅನ್ಯರ ಹೊಲಗದ್ದೆ ಹಾಕಿಕೊಂಡು ಬೇಸಾ ಮಾಡಿದವರು. ಮಳೆಗೆ ಮುಂಆರು ಹಾನಿಯಾಗಿತ್ತು. ಇನ್ನೇನು ತೊಗರಿಯಲ್ಲಿ ಲಾಭ ಪಡೆಯೋಣವೆಂದು 2 ಬಾರಿ ತೊಗರಿ ಬಿತ್ತಿ ಸಾಕಷ್ಟುವೆಚ್ಚ ಮಾಡಿಕೊಂಡವರು. ತೊಗರಿಯೂ ಕಾಯಿ ಕಟ್ಟೋ ಹಂತದಲ್ಲಿ ನೆಟೆ ರೋಗಕ್ಕೆ ತುತ್ತಾಗಿ ಒಣಗಿ ನಿಂತಿರೋದು ಇವರನ್ನು ಕಂಗಾಲಾಗಿಸಿದ್ದಲ್ಲದೆ ಸಾವಿನ ಮನೆ ದಾರಿಯನ್ನೇ ಹಿಡಿಯುವಂತೆ ಮಾಡಿದೆ ಎಂಬುದು ದುಃಖ ವಿಚಾರ.
ಇಂತಹ ಹಾಹಾಕಾರ, ಆಕ್ರಂದನದ ದುರವಸ್ಥೆ, ಸಂಕಷ್ಟದ ಸ್ಥಿತಿ ತೊಗರಿ ಕಣಜದಲ್ಲಿ ಕಳೆದ 1 ತಿಂಗಳಿಂ ಗೋಚರಿಸಿದ್ದೂರ ಕೂಡಾ ಜಿಲ್ಲಾ ಉಸುವಾರಿ ಸಚಿವ ಮುರುಗೇಶ ನಿರಾಣಿಯವರಾಗಲಿ, ಸಂಸದ ಡಾ. ಉಮೇಶ ಜಾಧವ್ ಅವರಾಗಲಿ, ಶಾಸಕರು ಆಯಾ ಕ್ಷೇತ್ರದಲ್ಲಿದ್ದವರು ತಮ್ಮ ಕ್ಷೇತ್ರದಲ್ಲಿ ನಡೆಂತಹ ರೈತರ ಆತ್ಮಹತ್ಯೆ ಸುದ್ದಿ ಅರಿತು ರೈತರ ಸೂತಕದ ಮನೆಗಳಿಗೆ ಹೋಗಿ ಭೇಟಿ ನೀಡಿಲ್ಲ, ಕುಟುಂಬ ಸದಸ್ಯರಿಗೆ ಸಾಂತ್ವನ ಹಳುವ ಗೋಜಿಗೂ ಹೋಗಿಲ್ಲ!
ತೊಗರಿ ಕಣಜದಲ್ಲಿ ನೆಟೆ ರೋಗ ಅದಾಗಲೇ ಹಾಹಾಕಾರಕ್ಕೆ ಕಾರಣವಾದರೆ, ಇಲ್ಲಿನ ಜನನಾಯಕರ ಇಂತಹ ಅಮಾನವೀಯ ನಡೆ ನೆಟೆ ರೋಗಕ್ಕಿಂತಲೂ ಭಯಂಕರ ವಾತಾವರಣ ಹುಟ್ಟು ಹಾಕಿದೆ. ಹೀಊಗಾಗಿ ರೈತ ಸಮೂಹ ಜಿಲ್ಲಾದ್ಯಂತ ಆತ್ಮವಿಶ್ವಾಸವನ್ನೇ ಕಲೆದುಕೊಂಡು ಚಿಂತೆಯಲ್ಲಿ ಮುಳುಗಿದೆ.
1 ಲಕ್ಷಕ್ಕೂ ಹೆಚ್ಚು ಹೆಕ್ಟರ್ ನೆಟೆರೋಗದಿಂದ ಹಾನಿ
ಈ ಬಾರಿ ಬಿತ್ತನೆಯಾದ 4. 75 ಲಕ್ಷ ಹೆಕ್ಟರ್ ತೊಗರಿಯಲ್ಲಿ 1 ಲಕ್ಷಕ್ಕೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ತೊಗರಿ ನೆಟೆರೋಗಕ್ಕೆ ತುತ್ತಾಗಿದೆ. ರೈತರ ಪ್ರಕಾರ ಸೇ. 70 ರಷ್ಟುತೊಗರಿ ರೋಗದಿಂದ ಹಾಳಾಗಿದೆ. ಇದರಿಂದಾಗಿ ತೊಗರಿ ಕಣಜದಲ್ಲಿ ಹಾಹಾಕಾರದ ಪರಿಸ್ಥಿತಿ ಕಂಡರೂ ಜನನಾಯಕರು ರೈತರ ನೆರವಿಗೆ ಧಾವಿಸೋದು ಬಿಟ್ಟು ಪಕ್ಷ ಸಂಘಟನೆ, ಚುನಾವಣೆ, ಪ್ರಚಾರದಲ್ಲಿ ಕಾಲಹರಣ ಮಾಡುತ್ತಿದ್ದಾರೆ.
ಕಳೆದ ನಾಲ್ಕೈದು ತಿಂಗಳಿಂದ ಜಿಲ್ಲೆಯಲ್ಲಿ ಕೆಡಿಪಿ ಸಭೆಗಳಾಗಿಲ್ಲ. ಕೃಷಿ ಇಲಾಖೆಯವರು ಅದೇನು ಸಮಕ್ಷೆ ಮಾಡಿದ್ದಾರೆ? ಅದೆಷ್ಟುರೈತರ ತೊಗರಿ ಹಾಳಾಗಿದೆ, ಮುಂಗಾರಲ್ಲಿ ಅದ್ಯಾರಿಗಲ್ಲಾ ಪರಿಹಾರ ಸಿಕ್ತು? ಇವೆಲ್ಲ ಸಂಗತಿಗಳನ್ನು ಪರಿಶೀಲಿಸಿ ರೈತರಿಗೆ ಪರಿಹಾರ ದೊರಕಿಸಿಕೊಡುವಲ್ಲಿ ಜನನಾಯಕರು ತೋರುತ್ತಿರುವ ಅಲಕ್ಷತನ ರೈತರನ್ನು ಕೆರಳುವಂತೆ ಮಾಡಿದೆ.
ಚಿಂಚೋಳಿ: ಐನಾಪುರ ಏತ ನೀರಾವರಿಗೆ ಸರ್ಕಾರ ಸಮ್ಮತಿ
ಸದನದಲಿ ನೆಟೆ ರೋಗದ ಚರ್ಚೆ ಹೆಸರಿಗೆ ಮಾತ್ರ ಎಂಬಂತಾಗಿದೆಯೇ ಹೊರತು ಅಸಲಿ ರೈತರ ಗೋಳು ಅಲ್ಲಿ ಪ್ರಸ್ತಾಪವಾಗಲೇ ಇಲ್ಲವೆಂಬ ಅಸಮಾಧಾನ ಇಲ್ಲಿನವರನ್ನು ಕಾಡುತ್ತಿದೆ. ವಿಶೇಷ ಪರಿಹಾರ ಪ್ಯಾಕೇಜ್ ಘೋಷಣೆಗೆ ರೈತರು ಆಗ್ರಹಿÓಸ್ತಿದ್ದರೂ ಆಳುವವರು ಜಾಣ ಕಿವುಡರಾಗಿದ್ದಾರೆ. ಏತನ್ಮಧ್ಯೆ ಜ. 17 ರಂದು ಕೆಪಿಆರ್‌ಎಸ್, ಎಐಕೆಎಸ್ ಸೇರಿದಂತೆ 6 ಕ್ಕೂ ಹೆಚ್ಚು ರೈತ, ಹಿಂದುಳಿದ ವರ್ಗ, ದಲಿತ ಪರ ಸಂಘಟನೆಯವರು ಸೇರಿಕೊಂಡು ಕಲಬುರಗಿ ಬಂದ್ ಕರೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಈ ಬಂದ್‌ಗೆ ಬೆಂಬಲಿಸೋದಾಗಿ ಹೇಳಿದೆ.
ತೊಗರಿ ನೆಟೆಯಿಂದ ಹಾಳಾಗಿದ್ದು ಕಂಡು ಸಾಲಕ್ಕೆ ಬೆದರಿ ಈಗಾಗಲೇ 5 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಷ್ಟಾದರೂ ಸರ್ಕಾರಕ್ಕೆ, ನಮ್ಮ ಜನನಾಯರಿಗೆ ವಿಷಯದ ಗಂಭೀರತೆ ಅರಿವಾಗುತ್ತಿಲ್ಲ. ಉಸ್ತುವಾರಿ ಸಚಿವರು ರೈತರತ್ತ ನೋಡಿಲ್ಲ, ಕೃ,ಇ ಸಚಿವರು ತೊಗರಿ ಬಗ್ಗೆ ಅಲಕ್ಷತನ ತೋರಿದ್ದಾರೆ. ಉಗ್ರ ಹೋರಾಟ ಮಾಡುತ್ತೇವೆ. ಇವರಿಗೆಲ್ಲರಿಗೂ ಪಾಠ ಕಲಿಸುತ್ತೇವೆ ಅಂತ ಕಲಬುರಗಿ ಪ್ರಾಂತ ರೈತ ಸಂಘದ ಸಂಚಾಲ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.