ನೀರಾವರಿಯಿಂದಲೇ ರೈತರ ಅಭಿವೃದ್ಧಿ ಸಾಧ್ಯ: ಸಚಿವ ಕಾರಜೋಳ

By Kannadaprabha News  |  First Published Mar 9, 2023, 9:00 PM IST

ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು 15 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಗಳು ಅನುಷ್ಠಾನಗೊಂಡಿವೆ: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ 


ಚಡಚಣ(ಮಾ.09):  ನೀರಾವರಿ ಯೋಜನೆಗಳ ಅನುಷ್ಠಾನದಿಂದ ರೈತರು ಆರ್ಥಿಕವಾಗಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು. ಸ್ಥಳೀಯ ಶ್ರೀ ಸಂಗಮೇಶ್ವರ ದೇವಾಲಯದ ಆವರಣದಲ್ಲಿ ಸೋಮವಾರ 14 ಕೋಟಿ ವೆಚ್ಚದ ವಿವಿಧ ಕಾಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿ, ವಿಜಯಪುರ, ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಸುಮಾರು .15 ಸಾವಿರ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳ ಕಾಮಗಾರಿಗಳು ಅನುಷ್ಠಾನಗೊಂಡಿವೆ. ವಿಜಯಪುರ ಜಿಲ್ಲೆಗೆ 4 ಸಾವಿರ ಕೋಟಿ ವಿಶೇಷವಾಗಿ ನೀರಾವರಿ ಯೋಜನೆಗೆ ಅನುದಾನ ಒದಗಿಸಲಾಗಿದೆ. ಮಾಚ್‌ರ್‍ 9ರಂದು ಹೊರ್ತಿಯಲ್ಲಿ ರೇವಣಸಿದ್ಧೇಶ್ವರ ಏತನೀರಾವರಿ ಯೋಜನೆಗೆ ಮುಖ್ಯಮಂತ್ರಿ ಬೊಮ್ಮಾಯಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಿಜೆಪಿಗೆ ಹೀಗೆಯೇ ಜನಬೆಂಬಲ ಮುಂದುವರಿದರೆ ಇಂಥ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯಲಿವೆ ಎಂದರು.

ಸಂಸದ ರಮೇಶ ಜಿಗಜಿಣಗಿ ಮಾತನಾಡಿ, ಸಚಿವ ಕಾರಜೋಳ ಹಾಗೂ ನಾನು ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟುಅನುದಾನ ತಂದಿದ್ದೇವೆ. ಹಲವಾರು ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇವೆ. ನನ್ನ ಅಧಿಕಾರ ಅವಧಿಯಲ್ಲಿ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ಕೋಟಿ ರೂಪಾಯಿ ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದರು.

Latest Videos

undefined

ರೈತರ ಸ್ವಾವಲಂಬನೆಗೆ ಬಿಜೆಪಿ ಸರ್ಕಾರ ಬದ್ಧ: ಈರಣ್ಣ ಕಡಾಡಿ

ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯರಾದ ಶ್ರೀಶೈಲಗೌಡ ಬಿರಾದಾರ, ಭೀಮಾಶಂಕರ ಬಿರಾದಾರ, ಶಿವಾನಂದ ಭೈರಗೊಂಡ, ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ರಾಜು ಝಳಕಿ, ಮುಖಂಡರಾದ ಕಾಂತುಗೌಡ ಪಾಟೀಲ, ಬಾಬುಗೌಡ ಪಾಟೀಲ, ಜಿ.ಡಿ.ಪಾವಲೆ, ತಹಸೀಲ್ದಾರ ಹಣಮಂತ ಶಿರಹಟ್ಟಿ, ಬಿಜೆಪಿ ಮಂಡಳ ಅಧ್ಯಕ್ಷ ರಾಮ ಅವಟಿ, ರಾಜೇಂದ್ರ ಮುತ್ತೀನ್‌ ಇದ್ದರು.

ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ:

163 ಲಕ್ಷ ವೆಚ್ಚದಲ್ಲಿ ಚಡಚಣದ ಶ್ರೀ ಸಂಗಮೇಶ್ವರ ದೇವಾಲಯದ ಮುಂಭಾಗದ ಬಾಂದಾರ ಕಂ ಬ್ರಿಡ್ಜ್‌ ನವೀಕರಣ, ಉಮರಜ ಗ್ರಾಮದಿಂದ ನಂದೂರವರೆಗೆ .150 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾಮಗಾರಿ, ನಿವರಗಿ ಗ್ರಾಮದಿಂದ ಭೀಮಾ ನದಿ ತೀರದಲ್ಲಿರುವ ಸಂಗಮೇಶ್ವರ ದೇವಾಲಯದವರೆಗೆ ಸುಮಾರು .180 ಲಕ್ಷ ವೆಚ್ಚದಲ್ಲಿ ರಸ್ತೆ ನಿರ್ಮಾಣ, ದಸೂರ ಕ್ರಾಸ್‌ನಿಂದ ನಿವರಗಿವರೆಗೆ .206 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ ಕಾಮಗಾರಿ, ಕನ್ನೂರ ಗ್ರಾಮದಿಂದ ಸಾವಳಸಂಗವರೆಗೆ .50 ಲಕ್ಷ ವೆಚ್ಚದಲ್ಲಿ ಸಂಪರ್ಕ ರಸ್ತೆ ನಿರ್ಮಾಣ ಹಾಗೂ ನಿವರಗಿ ಗ್ರಾಮದಿಂದ ಹತ್ತಳ್ಳಿವರೆಗೆ .168 ಲಕ್ಷ ವೆಚ್ಚದಲ್ಲಿ ರಸ್ತೆ ದುರಸ್ತಿ, .140 ಲಕ್ಷ ರೂಪಾಯಿ ವೆಚ್ಚದ ಧೂಳಖೇಡದ ಭೀಮಾಶಂಕರ ದೇವಾಲಯದ ಮೆಟ್ಟಲುಗಳ ನಿರ್ಮಾಣ ಕಾಮಗಾರಿ ಕಾಮಗಾರಿ, ಲೋಣಿ ಬಿಕೆ ಗ್ರಾಮದಿಂದ ಕಂಚನಾಳವರೆಗೆ .250 ಲಕ್ಷ ವೆಚ್ಚದಲ್ಲಿ 2.2 ಕಿ.ಮೀ ರಸ್ತೆ ದುರಸ್ತಿ ಕಾಮಗಾರಿಗಳಿಗೆ ಸಚಿವರು, ಸಂಸದರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

click me!