Davanagere; ರೈತರ ಗಮನ ಸೆಳೆದ ಅಡಿಕೆ ಕೃಷಿ ಯಂತ್ರ ಮೇಳ

By Suvarna News  |  First Published Sep 19, 2022, 8:47 PM IST

ಆಧುನಿಕ ತಂತ್ರಜ್ಞಾನದ ಮೂಲಕ ಅಡಿಕೆ ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ದಾವಣಗೆರೆಯಲ್ಲಿ ಅಡಿಕೆ ಕೃಷಿ ಯಂತ್ರ ಮೇಳ ನಡೆದಿದೆ.  ವಿವಿಧ ಕಂಪನಿಗಳ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟ ರೈತರು ಸಾರ್ವಜನಿಕರ ಗಮನ ಸೆಳೆದಿದೆ.


ದಾವಣಗೆರೆ (ಸೆ.19):  ಆಧುನಿಕ ತಂತ್ರಜ್ಞಾನದ ಮೂಲಕ ಅಡಿಕೆ ಕೃಷಿಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ನಗರದಲ್ಲಿ ಅಡಿಕೆ ಕೃಷಿ ಯಂತ್ರ ಮೇಳ ನಡೆದಿದೆ. ನಗರದ ಡಾ. ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪ ಆವರಣದಲ್ಲಿ ದಾಮ್ ಕೋರ್ಸ್ ಹಾಗೂ ಟೆಂಡರ್ ಟುಡೇ ಸಂಸ್ಥೆ ಸಹಯೋಗದಲ್ಲಿ ಸೋಮವಾರ ಮತ್ತು ಮಂಗಳವಾರ  ಅಡಿಕೆ ಕೃಷಿ ಯಂತ್ರಮೇಳ 2022 ಹಮ್ಮಿಕೊಳ್ಳಲಾಗಿದೆ. ಮೇಳದಲ್ಲಿ ವಿವಿಧ ಕಂಪನಿಗಳ ಯಂತ್ರೋಪಕರಣಗಳ ಪ್ರದರ್ಶನ ಹಾಗೂ ಮಾರಾಟ ರೈತರು ಸಾರ್ವಜನಿಕರ ಗಮನ ಸೆಳೆದಿದೆ. ಸುಮಾರು 32 ಮಳಿಗೆಗಳಲ್ಲಿ ತರೀಕೆರೆ, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಾವಣಗೆರೆ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಯಂತ್ರೋಪಕರಣಗಳ ಸಂಸ್ಥೆಗಳು ತಮ್ಮದೆ ಆವಿಷ್ಕಾರದ ಉತ್ಪನ್ನಗಳನ್ನು ಪ್ರದರ್ಶನಕ್ಕಿಟ್ಟಿದ್ದು, ಮಾಹಿತಿ ಜೊತೆಗೆ ಯಂತ್ರ ಕಾರ್ಯನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆಗಳನ್ನು ನೀಡಿದರು. ಪ್ರದರ್ಶನದಲ್ಲಿ  ಅಡಿಕೆ ಸುಲಿಯುವ ಯಂತ್ರಗಳು, ಕ್ಲೀನಿಂಗ್ ಮೆಷಿನ್, ಗೊರಬಲು (ಪಾಲಿಶ್) ಮಿಷನ್, ಪವರ್ ಹೆಡರ್, ಅಡಿಕೆ ಗುಣಿಸುತ್ತು  ಡ್ರಿಲ್ಲಿಂಗ್ ಮೆಷಿನ್, ಮರ ಕಡಿಯುವ ಯಂತ್ರ, ಪವರ್ ಟಿಲ್ಲರ್, ಗೇರ್ ಬಾಕ್ಸ್, ಪಿವಿಸಿ ಟೈಪ್ಸ್, ಹನಿ ನೀರಾವರಿ ಸಂಬಂಧಿತ ಉಪಕರಣಗಳು ಅಲ್ಲದೆ, ಲ್ಯಾಂಡರ್(ಏಣಿ) ಗಳು ಮಳಿಗೆ ಕೂಡ ಇತ್ತು.

ಹೆಚ್ಚಾಗಿ ಒಣ ಅಡಿಕೆ ಸುಲಿಯುವ ಹಾಗೂ ಹಸಿ ಅಡಿಕೆ ಸುಲಿಯುವ ಯಂತ್ರಗಳು ಪ್ರತ್ಯೇಕ ವಾಗಿತ್ತು. ಆದರೆ ಉಡುಪಿಯಿಂದ ಆಗಮಿಸಿದ್ದವರ ಮಳಿಗೆಯಲ್ಲಿ ಒಣ ಹಾಗೂ ಹಸಿ ಎರಡನ್ನೂ ಒಂದೇ ಯಂತ್ರದಲ್ಲಿ ಸುಲಿಯುವ ತಂತ್ರಜ್ಞಾನವನ್ನು ಅಳವಡಿಸಿದ್ದು ವಿಶೇಷವಾಗಿತ್ತು.
ಜೊತೆಗೆ  ಉಳಿದ ಮಳಿಗೆಗಳಲ್ಲಿ ಗೇರ್ ಯಂತ್ರಗಳ ಪ್ರದರ್ಶನ  ಮಾತ್ರ ಇದ್ದು, ನಮ್ಮಲ್ಲಿ ಗೇರ್ ಬಾಕ್ಸ್, ಬೆಲ್ಟ್ ಹಾಗೂ ಕ್ಯಾಮ್ ಲೆಸ್ ಕೂಡ ಲಭ್ಯವಿದೆ ಎಂದು ಮಳಿಗೆ ಮಾಲೀಕರು ಮಾಹಿತಿ ನೀಡಿದರು.

Tap to resize

Latest Videos

Uttara Kannada ; 11,000 ಹೆಕ್ಟೇರ್‌ ಅಡಕೆಗೆ ಕೊಳೆ ರೋಗ!

ರೈತರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಸುಕೋ ಹಾಗೂ ಫೆಡರಲ್ ಬ್ಯಾಂಕ್ ವತಿಯಿಂದ ಸಬ್ಸಿಡಿ ಸಾಲ ನೀಡುವ ಸೌಲಭ್ಯವನ್ನು ಕಲ್ಪಿಸಲಾಗಿತ್ತು. ಮೇಳದ ನಿಮಿತ್ತ ಯಂತ್ರಗಳ ದರದಲ್ಲಿ ರಿಯಾಯ್ತಿ ಕೂಡ ನೀಡಲಾಗಿತ್ತು.

ಅಡಿಕೆ ಜಿಎಸ್‌ಟಿ ರದ್ದತಿಗೆ ಕೇಂದ್ರಕ್ಕೆ ಒತ್ತಡ ಹೇರಿ: ಸಿದ್ದರಾಮಯ್ಯ

ಇದಲ್ಲದೆ, ಪ್ರದರ್ಶನದಲ್ಲಿ ಹೆಲ್ತ್ ಅಂಡ್  ಫಿಟ್ನೆಸ್ ಸಂಬಂಧಿಸಿದ ಉಪಕರಣಗಳು, ಸ್ನಾಕ್ಸ್ ಮೇಕರ್ಸ್, ಕಿಟಕಿ, ಬಾಗಿಲುಗಳಿಗೆ ಸೊಳ್ಳೆಪರದೆ ಅಳವಡಿಕೆ, ಟೀಕ್ ವುಡ್ ಪೀಠೋಪಕರಣಗಳ ಮಳಿಗೆ ಹೀಗೆ ಇತರೆ ಉತ್ಪನ್ನಗಳ ಮಳಿಗೆಗಳು ಮೇಳದಲ್ಲಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿತ್ತು. ಜಿಲ್ಲೆಯ ಅಡಿಕೆ ಕೃಷಿಕ  ರೈತ ಬಾಂಧವರು, ಸಾರ್ವಜನಿಕರು  ಮೇಳಕ್ಕೆ ಭೇಟಿ ನೀಡುತ್ತಿದ್ದು, ಎರಡು ದಿನಗಳ ಮೇಳಕ್ಕೆ  ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

click me!