ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಕೃಷಿಭೂಮಿಗೆ ಮರುಜೀವ!

By Kannadaprabha NewsFirst Published Jul 7, 2020, 8:45 AM IST
Highlights

ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ, ಉಪ್ಪು ನೀರಿನ ಹಾವಳಿಯಿಂದಾಗಿ ಕೃಷಿಕರು ತಮ್ಮ ಕೃಷಿಭೂಮಿಯನ್ನು ಬೇಸಾಯ ಮಾಡದೆ ಹಾಗೆಯೇ ಹಡಿಲು ಬಿಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕೃಷಿಕ ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಎಕರೆಗಟ್ಟಲೆ ಕೃಷಿಭೂಮಿಯನ್ನು ಗೇಣಿ ಪಡೆದು, ಕೃಷಿ ಕಾರ್ಯ ನಡೆಸಿ ಎಲ್ಲರೂ ಮಾದರಿಯಾಗಿದ್ದಾರೆ.

ಕುಂದಾಪುರ(ಜು.07): ಇತ್ತೀಚಿನ ದಿನಗಳಲ್ಲಿ ಕೂಲಿಯಾಳುಗಳ ಸಮಸ್ಯೆ, ಉಪ್ಪು ನೀರಿನ ಹಾವಳಿಯಿಂದಾಗಿ ಕೃಷಿಕರು ತಮ್ಮ ಕೃಷಿಭೂಮಿಯನ್ನು ಬೇಸಾಯ ಮಾಡದೆ ಹಾಗೆಯೇ ಹಡಿಲು ಬಿಡುತ್ತಿದ್ದಾರೆ. ಆದರೆ ಇಲ್ಲೊಬ್ಬ ಕೃಷಿಕ ಹಡಿಲು ಬೀಳುವ ಸ್ಥಿತಿಯಲ್ಲಿದ್ದ ಎಕರೆಗಟ್ಟಲೆ ಕೃಷಿಭೂಮಿಯನ್ನು ಗೇಣಿ ಪಡೆದು, ಕೃಷಿ ಕಾರ್ಯ ನಡೆಸಿ ಎಲ್ಲರೂ ಮಾದರಿಯಾಗಿದ್ದಾರೆ.

ಇಲ್ಲಿನ ಕೋಡಿ ಶಿವಾಲಯ ಸಮೀಪದ ನಿವಾಸಿ ಕೆ. ಗಂಗಾಧರ ಪೂಜಾರಿ ಕೋಡಿ ಚಕ್ರೇಶ್ವರಿ ದೇವಸ್ಥಾನದ ಆಸುಪಾಸಿನ ಸುಮಾರು 18 ಎಕರೆಯಷ್ಟು ಸರಿಸುಮಾರು 60ಕ್ಕೂ ಅಧಿಕ ಗದ್ದೆಗಳನ್ನು ಗೇಣಿ ಪಡೆದು ಕಳೆದ 17 ವರ್ಷಗಳಿಂದ ಭತ್ತ ಬೇಸಾಯ ನಡೆಸುತ್ತಿದ್ದಾರೆ.

ವಿಐಎಸ್‌ಎಲ್‌ ಕೋವಿಡ್‌ ಆಸ್ಪತ್ರೆಯಾಗಿ ರೂಪಾಂತರ

ಗಂಗಾಧರ ಪೂಜಾರಿ ಹಂಗಳೂರಿನಲ್ಲಿ ಡೆಕೋರೇಶನ್‌ ಉದ್ಯಮ ನಡೆಸುವುದರ ಜೊತೆಗೆ ಮಳೆಗಾಲದ ಬಿಡುವಿನ ವೇಳೆಯಲ್ಲಿ ಪ್ರತೀ ವರ್ಷವೂ ನಾಟಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತಾರೆ. ಸ್ವತಃ ಟಿಲ್ಲರ್‌ ಮೇಲೆ ಕೂತು ಗದ್ದೆ ಉಳುಮೆ ಮಾಡುವುದರಿಂದ ಹಿಡಿದು ಭತ್ತದ ನಾಟಿಗೆ ಪೂರಕವಾದ ಎಲ್ಲಾ ಕೆಲಸವನ್ನೂ ಮಾಡುವ ಗಂಗಾಧರ ಪೂಜಾರಿ ಕೃಷಿ ಕಾಯಕಕ್ಕೆ ಅವರ ಚಿಕ್ಕಪ್ಪ ಶಂಕರ ಪೂಜಾರಿ ಹಾಗೂ ಸಹೋದರ ಗೋವಿಂದ ಪೂಜಾರಿ ಕೈಜೋಡಿಸುತ್ತಿದ್ದಾರೆ.

ತಂದೆಯ ಕಾಯಕವೇ ಸ್ಫೂರ್ತಿ: ಅವರ ತಂದೆ ತೊಪ್ಲು ಗಣಪ ಪೂಜಾರಿ ವೃತ್ತಿಪರ ಕೃಷಿಕರಾಗಿ ಕೋಡಿ ಭಾಗದಲ್ಲಿ ಹೆಸರು ಮಾಡಿದವರು. ತಮ್ಮ ಮನೆಯ ಒಂದು ಎಕರೆ ಕೃಷಿಭೂಮಿಯಲ್ಲಿ ಕೃಷಿ ಕಾಯಕ ನಡೆಸಿ ತಮ್ಮ ಏಳೂ ಮಕ್ಕಳಿಗೂ ಎಸೆಸ್ಸೆಲ್ಸಿ ತನಕ ವಿದ್ಯಾಭ್ಯಾಸ ಕೊಡಿಸಿದ್ದಾರೆ. ತಂದೆಯ ನೆಚ್ಚಿನ ಕಾಯಕವಾಗಿರುವ ಕೃಷಿಯನ್ನು ಅವರ ನಿಧನ ನಂತರ ಪುತ್ರ ಗಂಗಾಧರ ಪೂಜಾರಿ ಮುಂದುವರಿಸಿದ್ದಾರೆ. ತಮ್ಮ ಒಂದು ಎಕರೆ ಕೃಷಿಭೂಮಿಯೂ ಸೇರಿದಂತೆ ತಮ್ಮ ಮನೆಯ ಸುತ್ತಮುತ್ತಲಿನ ಕೃಷಿಭೂಮಿಯನ್ನೂ ಗೇಣಿ ಪಡೆದು ನಾಟಿ ಮಾಡುತ್ತಿದ್ದಾರೆ.

ಹೊಟೇಲ್‌, ಅಂಗಡಿಯಿಂದ ಸ್ಥಳೀಯರಿಗೆ ಸೋಂಕು ಪ್ರಸಾರ!

ಪ್ರತೀ ವರ್ಷವೂ 30ಕ್ಕೂ ಅಧಿಕ ಮಹಿಳೆಯರಿಂದ ಹತ್ತು ದಿನಗಳಲ್ಲಿ ನಾಟಿ ಕಾರ್ಯ ಮುಗಿಸುತ್ತೇವೆ. ಮಳೆಗಾಲದಲ್ಲಿ ಡೆಕೊರೇಶನ್‌ ಕೆಲಸ ಇಲ್ಲವಾದ್ದರಿಂದ ಮನೆಯಲ್ಲಿ ಕೂರುವ ಬದಲು ಮಳೆಗಾಲದ ಮೂರು ತಿಂಗಳು ಕೃಷಿಯಲ್ಲಿ ತೊಗಿಸಿಕೊಳ್ಳುತ್ತೇನೆ. ನನ್ನ ಈ ಕೆಲಸಕ್ಕೆ ತಂದೆಯೇ ಸ್ಫೂರ್ತಿ ಎಂದು ಕೃಷಿಕ ಗಂಗಾಧರ ಪೂಜಾರಿ ತಿಳಿಸಿದ್ದಾರೆ.

click me!