ಮಿಸ್ಟರ್ ಏಷ್ಯಾ ಆಗಿ ಮಿಂಚಿದ ಮೈಸೂರಿನ ರೈತನ ಮಗ

Kannadaprabha News   | Asianet News
Published : Feb 11, 2020, 12:15 PM IST
ಮಿಸ್ಟರ್ ಏಷ್ಯಾ ಆಗಿ ಮಿಂಚಿದ ಮೈಸೂರಿನ ರೈತನ ಮಗ

ಸಾರಾಂಶ

ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಆಗಿ ಹೊರಹೊಮ್ಮಿದ್ದಾರೆ.

ಮೈಸೂರು(ಫೆ.11): ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಆಗಿ ಹೊರಹೊಮ್ಮಿದ್ದಾರೆ.

ನೇಪಾಳದ ಕಠ್ಮಂಡುವಿನಲ್ಲಿ ಮಂಜರಿ ನೇಪಾಲ್‌ ಪ್ರೈ. ಲಿಮಿಟೆಡ್‌ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಟ್ಟದ ಮಿಸ್ಟರ್‌ ಏಷ್ಯಾ 2020 ಮಾಡೆಲ್‌ಗಳ ಸ್ಪರ್ಧೆಯಲ್ಲಿ ನಂಜನಗೂಡು ತಾಲೂಕಿನ ದೇವನೂರು ಗ್ರಾಮದ ಡಿ.ಸಿ. ನಾಗೇಶ್‌ ಮಿಸ್ಟರ್‌ ಏಷ್ಯಾ ಅಡ್ವೆಂಚರ್‌, ಏಷ್ಯಾ ಕಲ್ಚರ್‌ ಹಾಗೂ ಏಷ್ಯಾ ಸೌತ್‌ ಇಂಡಿಯಾದಲ್ಲಿ ವಿಜೇತರಾಗಿದ್ದಾರೆ.

ಇವರು ದೇವನೂರು ಗ್ರಾಮದ ರೈತ ಚಿನ್ನಬುದ್ದಿ ಮತ್ತು ರೇಣುಕ ಅವರ ಪುತ್ರ. ನಾಗೇಶ್‌ ಈ ಹಿಂದೆ ರೈತರ ವೇಷಭೂಷಣದಲ್ಲೂ ಗಮನ ಸೆಳೆದಿದ್ದಾರೆ. ರೈತರ ವೇಷಭೂಷಣ ಥೀಮ್‌ ಅನ್ನು ಫ್ಯಾಷನ್‌ ಜಗತ್ತಿಗೆ ತರಲು ಬಯಸುವುದಾಗಿ ನಾಗೇಶ್‌ ತಿಳಿಸಿದ್ದಾರೆ.

PREV
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ