
ಚಿಕ್ಕೋಡಿ (ಬೆಳಗಾವಿ): ಈಗಿನ ಕಾಲದಲ್ಲಿ ಏನಿದ್ದರೂ ಜನರ ಕಣ್ಣು ಬೈಕು, ಕಾರು ಹಾಗೂ ಜಮೀನು ಮತ್ತು ಮನೆ ಮೇಲೆ. ಕೋಟಿ ಕೋಟಿ ಆಸ್ತಿ ಸಂಪಾದಿಸಿ ಬಂಗಲೆ ಮೇಲೆ ಬಂಗಲೆ ಕಟ್ಟಿಸಿ ಅಟ್ಟದ ಮೇಲೆ ರೊಕ್ಕ ಸರಿದಿಡುವ ಕನಸು ಕಾಣೋರೇ ಹೆಚ್ಚು. ಆದರೆ ಇಲ್ಲೊಬ್ಬರು ಬರೋಬ್ಬರಿ 61 ಲಕ್ಷ ರೂಪಾಯಿ ಹಣ ನೀಡಿ ಎತ್ತು ಖರೀದಿಸಿ ಗಮನ ಸೆಳೆದಿದ್ದಾರೆ.
61 ಸಾವಿರ ರೂಪಾಯಿ ನೀಡಿ ಎತ್ತು ಖರೀದಿಸಿರೋದು ಬೇರೆ ಎಲ್ಲೂ ಅಲ್ಲ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ. ಅಥಣಿ ತಾಲೂಕಿನ ಸಿರೂರು ಗ್ರಾಮದ ರೈತ ಬಾಳು ಹಜಾರೆ ಅನ್ನೋದು 61 ಸಾವಿರ ಮೌಲ್ಯದ ಎತ್ತನ್ನು ಖರೀದಿಸಿ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಂದ್ಹಾಗೆ ಇವರು.. ಮಹಾರಾಷ್ಟ್ರದ ಭೀಲವಡಿ ಗ್ರಾಮದ ರಾಜು ಪಾಟೀಲ ಅವರಿಂದ ‘ಬ್ರೇಕ್ ಫೇಲ್ ಬೈಜಾ’ ಎತ್ತನ್ನು ಖರೀದಿಸಿದ್ದಾರೆ. ಹಿಂದಿನ ಮಾಲೀಕರಾದ ಮಾಹಾರಾಷ್ಟ್ರದ ಸಂಗ್ಲಾಯಾದ ರಾಜುದಾರಾ ಪಾಟೀಲ್ ಬಿಲವಂಡಿ ಎಂಬವವರಿಂದ ಖಡತ್ ಎತ್ತು ಖರೀದಿ ಮಾಡಿದ್ದಾರೆ. ಈ ಎತ್ತು ಓಟದ ಸ್ಪರ್ಧೆಯಲ್ಲಿ ತುಂಬಾನೇ ಖ್ಯಾತಿ ಪಡೆದಿವೆ. ಇವುಗಳನ್ನ ‘ಬ್ರೇಕ್ ಫೇಲ್ ಬೈಜಾ’ ಅಥವಾ ಹೆಲಿಕಾಪ್ಟರ್ ಬೈಜಾ ಎಂದು ಕರೆಯಲಾಗುತ್ತದೆ. ಆಕರ್ಷಕ ನೋಟ ಮತ್ತು ಅವುಗಳ ತಾಖತ್ತಿನಿಂದಾಗಿ ಜಾನುವಾರು ಪ್ರಿಯರ ಗಮನ ಸೆಳೆಯುತ್ತವೆ..
ಬಾಳು ಹಜಾರೆ ಒಬ್ಬ ಗೋವುಗಳ ಪ್ರೇಮಿ. ಇವರಿಗೆ ದನ, ಕರು ಅಂದ್ರೆ ಎಲ್ಲಿಲ್ಲದ ಪ್ರೀತಿ. ಇವರು ಎತ್ತಿನ ಓಟದಲ್ಲಿ ತುಂಬಾನೇ ಫೇಮಸ್ ಆಗಿದ್ದಾರೆ. ಈಗಾಗಲೇ ‘ಹೆಲಿಕ್ಯಾಪ್ಟರ್ ಬೈಜಾ’ ಮೂಲಕ ಎತ್ತಿನ ಓಟದಲ್ಲಿ ಖ್ಯಾತಿ ಗಳಿಸಿದ್ದಾರೆ. ಅವರ ಮನೆಯಲ್ಲಿ ಇಟ್ಟುರುವ ನೂರಾರು ಪ್ರಶಸ್ತಿಗಳೇ ಬಾಳು ಹಜಾರೆ ಯಾರು ಅನ್ನೋದನ್ನು ತಿಳಿಸುತ್ತಿವೆ. ಇದೀಗ ಅದರ ಓಟದ ಜೋಡಿಯಾಗಿದ್ದ ‘ಬ್ರೇಕ್ ಫೇಲ್ ಬೈಜಾ’ವನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಎತ್ತಿನ ಮೇಲಿನ ಪ್ರೀತಿ, ಅದರ ಸಾಮರ್ಥ್ಯದ ಮೇಲಿನ ವಿಶ್ವಾಸಕ್ಕೆ ಅಷ್ಟೊಂದು ಹಣವನ್ನು ನೀಡಿ ಖರೀದಿಸಿದ್ದಾರೆ. ಇದೀಗ ಎತ್ತಿನ ಓಟದ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇವು ಮುಂದೆ ಯಾವ ರೀತಿ ಪ್ರದರ್ಶನ ನೀಡುತ್ತವೆ ಅನ್ನೋದು ಕೂಡ ಕುತೂಹಲ ಮೂಡಿಸಿದೆ.
ಬಾಳು ಹಜಾರೆ 61 ಸಾವಿರ ರೂಪಾಯಿ ನೀಡಿ ಎತ್ತುಗಳನ್ನ ಖರೀದಿಸಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿರುವ ಸಿದ್ದಗೌಡ ಪಾಟೀಲ್.. ಬಾಳು ಅವರ ಎತ್ತುಗಳನ್ನ ಖರೀದಿಸುವ ಪ್ಲಾನ್ ಮಾಡಿದಾಗಲೇ ನಾವು ಎಕ್ಸೈಟ್ ಆಗಿದ್ವಿ. ನಾವು ಕೂಡ ಎತ್ತುಗಳ ಪ್ರೇಮಿ. ಮೈದಾನದಲ್ಲಿ ಬೈಜಾ ಎತ್ತುಗಳು ಇಲ್ಲ ಅಂದ್ರೆ ಅಭಿಮಾನಿಗಳಿಗೆ ತುಂಬಾ ನಿರಾಸೆ ಮಾಡ್ಕೋತಾರೆ. ಎತ್ತುಗಳ ಓಟದಲ್ಲಿ ಬೈಜಾ ಪ್ರೇಮಿಗಳೇ ಹೆಚ್ಚು. ಅವು ಇಲ್ಲ ಅಂದ್ರೆ ನಮಗೂ ಸ್ವಲ್ಪ ನರ್ವಸ್ ಆಗುತ್ತದೆ. ಮೈದಾನದಲ್ಲಿ ಎತ್ತು ಇದೆ ಅಂದ್ರೆ ನಮ್ಮ ಗತ್ತು ಕೂಡ ಬದಲಾಗುತ್ತದೆ. ಈಗ ಖರೀದಿ ಮಾಡಿರುವ ಎತ್ತುಗಳು ರಗಡ್ ಲುಕ್‌ನೊಂದಿಗೆ ಇವೆ.
ಇಷ್ಟೊಂದು ಹಣ ನೀಡಿ ಎತ್ತು ಖರೀದಿ ಮಾಡಿದಾಗ.. ರೊಕ್ಕ ಮಾಡಬಹುದು ಅಂದುಕೊಳ್ತಾರೆ. ರೊಕ್ಕ ಮಾಡಬಹುದು ನಿಜ. ಆದರೆ ಅವರು ಅದರಲ್ಲಿ ಯಾವುದೇ ಬ್ಯುಸಿನೆಸ್ ಮಾಡಲ್ಲ. ಅವರಿಗೆ ಮತ್ತೆ ನಮಗೆ ಎತ್ತುಗಳು ಅಂದ್ರೆ ಹೆಮ್ಮೆ. ಕರ್ನಾಟಕ ಆಗಿರಬಹುದು, ಮಹಾರಾಷ್ಟ್ರ ಆಗಿರಬಹುದು. ಎಲ್ಲಿಯೇ ಸ್ಪರ್ಧೆ ನಡೆದರೂ ನಾವು ಭಾಗವಹಿಸುತ್ತೇವೆ. ಎತ್ತುಗಳ ಓಟ ನೋಡೋದು, ಪ್ರಶಸ್ತಿ ಗೆಲ್ಲೋದನ್ನ ನೋಡಿ ಆನಂದಿಸುವ ಅನುಭವವೇ ಬೇರೆ ಎಂದು ಸಿದ್ದಗೌಡ ಪಾಟೀಲ್ ಹೇಳಿದ್ದಾರೆ.