Belagavi: ಇಲ್ಲಿ ಇರಲಿ, ಬಿಡಲಿ ಈ ಅನುಬಂಧ ಶಾಶ್ವತ; 2.5 ವರ್ಷ ಸಾರ್ಥಕ ಸೇವೆ ಮುಗಿಸಿ ಭಾವುಕರಾದ ಡಿಸಿ ಮೊಹ್ಮದ್‌ ರೋಷನ್

Published : Oct 23, 2026, 08:06 PM IST
Mohammad Roshan

ಸಾರಾಂಶ

ಬೆಳಗಾವಿಯಲ್ಲಿ 2.5 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿರುವ ಜಿಲ್ಲಾಧಿಕಾರಿ ಮೊಹ್ಮದ್‌ ರೋಷನ್‌ ಅವರು ತಮ್ಮ ವರ್ಗಾವಣೆಯ ಮುನ್ಸೂಚನೆ ನೀಡಿ ಭಾವುಕರಾಗಿದ್ದಾರೆ. ರೈತ ಸ್ನೇಹಿ ಅಧಿಕಾರಿಯಾಗಿರುವ ಆಡಿರುವ ಸಂಪೂರ್ಣ ವಿವರ ಇಲ್ಲಿದೆ.

ಬೆಳಗಾವಿ ಎಂದರೆ ರಾಜ್ಯದ ಎರಡನೇ ರಾಜಧಾನಿ, ಮೊಹ್ಮದ್ ರೋಷನ್‌ ಡಿಸಿ ಆಗಿ ಕಾರ್ಯನಿರ್ವಹಿಸಿದಾಗ ಹಲವಾರು, ಹೋರಾಟ, ಸ್ಟ್ರೈಕ್‌ ಸೇರಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಆದರೆ, ಆ ಸವಾಲುಗಳನ್ನು ಸ್ವೀಕರಿಸುವಿಕೆ, ಅದನ್ನು ನಿಭಾಸುವಿಕೆ, ಜನರಿಗೆ ನೀಡುವ ಸ್ಪಂದನೆ, ರೈತರಿಗೆ ನೀಡಿದ ನೆರವು, ಅವರಿಗೆ ಒಂದು ಸೆಪರೇಟ್‌ ಫ್ಯಾನ್‌ ಬೇಸ್‌ ಅನ್ನು ಸೃಷ್ಟಿಸಿದೆ. ಅದು ಯಾವ ಮಟ್ಟಿಗೆ ಅಂದ್ರೆ, ಇಂಥ ಅಧಿಕಾರಿಯನ್ನು ಪಡೆಯಲು ನಾವ ಪುಣ್ಯ ಮಾಡಿವ್ರೀ, ಇದು ಕಬ್ಬು ಹೋರಾಟಗಾರರ ವಲಯದಲ್ಲಿ ಕೇಳಿ ಬಂದ ಮಾತಾಗಿದೆ. ಆದರೆ ಅವರು ಆ ಮಣ್ಣಿನಲ್ಲಿ ಸಲ್ಲಿಸಿದ 2.5 ವರ್ಷದ ಸಾರ್ಥಕ ಪಯಣಕ್ಕೆ ಫುಲ್‌ ಸ್ಟಾಪ್‌ ಇಡುವ ಮಾತನ್ನು ಆಡಿದ್ದಾರೆ. ಇಲ್ಲಿ ಅವರು ಹಂಚಿಕೊಂಡ ಭಾವುಕ ಮಾತನ್ನು ನೋಡೋಣ ಬನ್ನಿ.

ಜಿಲ್ಲಾಧಿಕಾರಿಗಳ ಸಾರ್ಥಕ ಪಯಣ!

ಬೆಳಗಾವಿಯಲ್ಲಿ ಇತ್ತೀಚೆಗೆ ನಡೆದ ಅಧಿಕೃತ ವೇದಿಕೆಯಲ್ಲಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಭಾವುಕ ಮಾತುಗಳನ್ನು ಆಡಿದ್ದಂತು ನಿಜ. ನಗುತ್ತಲೇ ಆಡಿದರೂ, ಆ ಮಾತಲ್ಲಿ ಅಭಿಮಾನವಿತ್ತು, ಕಳಕಳಿ ಇತ್ತು, ಅಷ್ಟೇ ಅಲ್ಲಿ ಒಂದು ಅನುಬಂಧ ಇದ್ದಂತು ಸತ್ಯ. ಬೆಳಗಾವಿ ಜಿಲ್ಲೆಯಲ್ಲಿ (ಹಿಂದೆ ಹೆಸ್ಕಾಂ ಎಂಡಿ, ಸಿಇಒ ಹಾಗೂ ಪ್ರಸ್ತುತ ಜಿಲ್ಲಾಧಿಕಾರಿಯಾಗಿ) ಒಟ್ಟು 2.5 ವರ್ಷಗಳ ಸಾರ್ಥಕ ಸೇವೆ ಸಲ್ಲಿಸಿದ್ದಾರೆ.

ವರ್ಗಾವಣೆ ಮುನ್ಸೂಚನೆ!

ಆಡಳಿತಾತ್ಮಕ ಪ್ರಕ್ರಿಯೆಯಾಗಿ ವರ್ಗಾವಣೆಯ ಸಮಯ ಹತ್ತಿರ ಬಂದಿರುವ ಹಿನ್ನೆಲೆಯಲ್ಲಿ ಜನರೊಂದಿಗಿನ ಬಾಂಧವ್ಯದ ನೆನಪನ್ನು ಮೆಲುಕು ಹಾಕಿದ್ದಾರೆ. ನಾನು ಇಲ್ಲಿ ಅಧಿಕಾರದಲ್ಲಿ ಇರಲಿ, ಬಿಡಲಿ, ಈ ಮಣ್ಣಿನೊಂದಿಗೆ ಹಾಗೂ ಇಲ್ಲಿನ ಜನರೊಂದಿಗೆ ಬೆಸೆದಿರುವ ಸಂಬಂಧ ಮತ್ತು ಅನುಬಂಧ ಸದಾ ನನ್ನ ಹೃದಯದಲ್ಲಿ ಹಸಿರಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಕರುನಾಡ ಮಣ್ಣಿನ ಋಣ!

ತಮಗೆ ಆಡಳಿತ ನಡೆಸಲು ಮತ್ತು ಜನರ ಸೇವೆ ಮಾಡಲು ಅವಕಾಶ ನೀಡಿದ ಕರ್ನಾಟಕದ ಮಣ್ಣಿನ ಋಣ ಎಂದಿಗೂ ತೀರಿಸಲು ಸಾಧ್ಯವಿಲ್ಲ ಎಂದು ಕೃತಜ್ಞತೆ ಸಲ್ಲಿಸಿದ್ದಾರೆ. ಸಮಯ ಬಂದಾಗ ಬದಲಾವಣೆ ಅನಿವಾರ್ಯ. ಸರ್ಕಾರ ನಮ್ಮನ್ನು ದೇಶದ ಯಾವುದೇ ಮೂಲೆಗೆ, ಯಾವುದೇ ಜವಾಬ್ದಾರಿಗೆ ನಿಯೋಜಿಸಿದರೂ ಅಲ್ಲಿ ಕರ್ತವ್ಯ ನಿಭಾಯಿಸಲು ನಾವು ಸದಾ ಸಿದ್ಧರಾಗಿದ್ದೇವೆ ಎಂಬ ಬದ್ಧತೆ. ತಮಗೆ ಸಿಗುವ ಮುಂದಿನ ಯಾವುದೇ ಹುದ್ದೆಯಲ್ಲೂ ತಮ್ಮ ಸಂಪೂರ್ಣ ಸಾಮರ್ಥ್ಯವನ್ನು ಧಾರೆ ಎರೆದು, ದೇಶ ಹೆಮ್ಮೆ ಪಡುವಂತೆ ಪ್ರಾಮಾಣಿಕವಾಗಿ ಕೆಲಸ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಭಾವೈಕ್ಯತೆ ಮತ್ತು ನಾಡಪ್ರೇಮ!

ಮಾತಿನ ಕೊನೆಯಲ್ಲಿ ಜೈ ಹಿಂದ್, ಜೈ ಕರ್ನಾಟಕ ಮಾತೆ ಎಂದು ಘೋಷಿಸುವ ಮೂಲಕ ತಾವು ಹುಟ್ಟಿ ಬೆಳೆದ ದೇಶ ಹಾಗೂ ಕರ್ತವ್ಯದ ಸೌಭಾಗ್ಯ ನೀಡಿದ ಕರುನಾಡಿನ ಮೇಲಿನ ಅಪಾರ ಗೌರವವನ್ನು ಐಎಎಸ್ ಅಧಿಕಾರಿ ವ್ಯಕ್ತಪಡಿಸಿದ್ದಾರೆ. ಬೆಳಗಾವಿಯ ಜ್ವಲಂತ ಬರಗಾಲದ ಪರಿಸ್ಥಿತಿ ನಿಭಾಯಿಸುವಲ್ಲಿ, ಪ್ರವಾಹ ಮುನ್ನೆಚ್ಚರಿಕೆ ಕೈಗೊಳ್ಳುವಲ್ಲಿ ಹಾಗೂ ಕಬ್ಬು ಬೆಳೆಗಾರರ ಮತ್ತು ರೈತರ ಪಾದಯಾತ್ರೆಯ ನೇರ ಸಂಕಷ್ಟಗಳಿಗೆ ಸ್ಪಂದಿಸುವಲ್ಲಿ ರೈತ ಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿದ್ದಾರೆ. ಮಣ್ಣಿನ ಋಣದ ಕುರಿತು ಅವರು ಆಡಿದ ಮಾತುಗಳು, ಕೇವಲ ಕಚೇರಿಗಷ್ಟೇ ಸೀಮಿತವಾಗದೆ ಜಿಲ್ಲೆಯ ಅನ್ನದಾತರೊಂದಿಗೆ ಅವರು ಹೊಂದಿದ್ದ ನಿಕಟ ಮತ್ತು ಆತ್ಮೀಯ ಒಡನಾಟಕ್ಕೆ ಕನ್ನಡಿ ಹಿಡಿದಿದೆ.

PREV
Read more Articles on
click me!

Recommended Stories

₹61 ಲಕ್ಷ ನೀಡಿ ಒಂದು ಎತ್ತು ಖರೀದಿ, ಈ ಕನ್ನಡಿಗನ ಎತ್ತುಗಳ ಮೇಲಿನ ಕಾಳಜಿ, ಸಹಾಸದ ಕತೆ ರೋಚಕ
ಮುಂದಿನ 3 ಗಂಟೆಗಳಲ್ಲಿ ಗುಡುಗು ಸಹಿತ ಭಾರಿ ಮಳೆ: ಕರಾವಳಿ, ಮಲೆನಾಡಿಗೆ 'ಎಲ್ಲೋ ಅಲರ್ಟ್' ನೀಡಿದ ಹವಾಮಾನ ಇಲಾಖೆ