ವಿಜಯಪುರ: ಕರೆಂಟ್ ಕಾಟಕ್ಕೆ ಬೇಸತ್ತು ಹೆಸ್ಕಾಂ ಕಚೇರಿಗೆ‌ ಮೊಸಳೆ ತಂದು ಬಿಟ್ಟ ರೈತ..!

By Girish GoudarFirst Published Oct 20, 2023, 12:00 AM IST
Highlights

ಕರೆಂಟ್ ಪಡಿಪಾಟಲು ಎಲ್ಲಿಗೆ ಬಂದು ತಲುಪಿದೆ ಎಂದ್ರೆ ಯಾವಾಗ ಕರೆಂಟ್ ಸಿಗುತ್ತೆ ಎಂದು ರೈತರು ಜಮೀನುಗಳಲ್ಲಿ ಕಾಯ್ದೊಕೊಂಡು ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಕರೆಂಟ್ ಕಾಟಕ್ಕೆ ಬೇಸತ್ತ ರೈತನೊಬ್ಬ ಜಮೀನಿಗೆ ಬಂದಿದ್ದ ಮೊಸಳೆಯನ್ನೆ ವಿದ್ಯುತ್ ವಿತರಣಾ ಘಟಕಕ್ಕೆ ತಂದು ಬಿಟ್ಟು ಆಕ್ರೋಶ ಹೊರ ಹಾಕಿದ್ದಾನೆ. 

ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ(ಅ.20):  ಜಿಲ್ಲೆಯಲ್ಲಿ ಬರಗಾಲದ ಹೊಡೆತಕ್ಕೆ ರೈತರು ನಲುಗಿ ಹೋಗಿದ್ದಾರೆ. ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯ್ತಿದ್ದಾರೆ. ಈ ನಡುವೆ ನೀರಿಲ್ಲದೆ ಬೆಳೆ ಒಣಗಿ ಹೋಗ್ತಿದ್ದು, ಬೆಳೆಗೆ ಪಂಪ್‌ಸೆಟ್ ಮೂಲಕ ನೀರು ಹಾಯಿಸಬೇಕು‌ ಅಂದ್ರು ರೈತರಿಗೆ ಸರಿಯಾಗಿ ಕರೆಂಟ್ ಸಿಗ್ತಿಲ್ಲ. ಇದರಿಂದ ರೊಚ್ಚಿಗೆದ್ದ ರೈತನೊಬ್ಬ ರಾತ್ರಿ ನೀರು ಹಾಯಿಸೋಕೆ ಜಮೀನಿಗೆ ಹೋದಾಗ ಸಿಕ್ಕ ಮೊಸಳೆಯನ್ನೆ ಕೆಇಬಿ ಕಚೇರಿ ತಂದು ಬಿಟ್ಟು ಆಕ್ರೋಶ ಹೊರಹಾಕಿದ್ದಾನೆ.

ಕರೆಂಟ್ ಸಿಗದೆ ಬೇಸತ್ತು ಕೆಇಬಿಗೆ ಮೊಸಳೆ ಬಿಟ್ಟ ರೈತ..

ಕರೆಂಟ್ ಪಡಿಪಾಟಲು ಎಲ್ಲಿಗೆ ಬಂದು ತಲುಪಿದೆ ಎಂದ್ರೆ ಯಾವಾಗ ಕರೆಂಟ್ ಸಿಗುತ್ತೆ ಎಂದು ರೈತರು ಜಮೀನುಗಳಲ್ಲಿ ಕಾಯ್ದೊಕೊಂಡು ಕೂರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಕರೆಂಟ್ ಕಾಟಕ್ಕೆ ಬೇಸತ್ತ ರೈತನೊಬ್ಬ ಜಮೀನಿಗೆ ಬಂದಿದ್ದ ಮೊಸಳೆಯನ್ನೆ ವಿದ್ಯುತ್ ವಿತರಣಾ ಘಟಕಕ್ಕೆ ತಂದು ಬಿಟ್ಟು ಆಕ್ರೋಶ ಹೊರ ಹಾಕಿದ್ದಾನೆ. ಅಷ್ಟಕ್ಕೂ ಈ ಘಟನೆ ನಡೆದಿರೋ ವಿಜಯಪುರ ಜಿಲ್ಲೆಯ ಕೋಲ್ಹಾರ ತಾಲೂಕಿನ ರೋಣಿಹಾಳ ಗ್ರಾಮದಲ್ಲಿ. ರಾತ್ರಿ  ಜಮೀನಿಗೆ ಲಗ್ಗೆ ಇಟ್ಟಿದ್ದ ಮೊಸಳೆಯನ್ನ ಕಂಡ ರೈತರು ಹಿಡಿದು ನೇರವಾಗಿ ರೋಣಿಗಾಳ ವಿದ್ಯುತ್ ವಿವರಣಾ ಘಟಕಕ್ಕೆ ತಂದು ಬಿಟ್ಟು ಆಕ್ರೋಶ ವ್ಯಕ್ತ ಪಡೆಸಿದ್ದಾರೆ.

ಭೀಮಾತೀರದಲ್ಲಿ ಇನ್ನೂ ನಿಲ್ಲದ ಗನ್‌ ಹಾವಳಿ: ಗ್ರಾಮ ಪಂಚಾಯ್ತಿಗೆ ಪಿಸ್ತೂಲ್ ತಂದು ಪಿಡಿಓ ಮೇಲೆ ಹಲ್ಲೆ !

ಮೊಸಳೆ ಕಂಡು ಬೆಚ್ಚಿಬಿದ್ದ ಹೆಸ್ಕಾಂ ಸಿಬ್ಬಂದಿ..!

ತಡರಾತ್ರಿ‌ ಜಮೀನಿನಲ್ಲಿ ನೀರು ಹಾಯಿಸೋವಾಗ ಸಿಕ್ಕ‌ ಮೊಸಳೆ ಸಮೇತ ರೋಣಿಹಾಳ ವಿದ್ಯುತ್ ವಿತರಣಾ ಘಟಕಕ್ಕೆ ಬಂದ ರೈತರು ಆಕ್ರೋಶ ಹೊರಹಾಕಿದ್ದಾರೆ. ಮೊಸಳೆಯನ್ನ ವಿದ್ಯುತ್ ವಿತರಣಾ ಘಟಕದ‌ ಬಾಗಿಲ ಬಳಿ ಬಿಟ್ಟು ತಮ್ಮ ಸಿಟ್ಟು ಹೊರಹಾಕಿದ್ದಾರೆ.‌ ರೈತರು ಮೊಸಳೆ ಹಿಡಿದು ತಂದಿದ್ದನ್ನ ಕಂಡ ಹೆಸ್ಕಾಂ ವಿದ್ಯುತ್ ವಿತರಣಾ ಘಟಕದ ಸಿಬ್ಬಂದಿ ಹೆದರಿದ್ದಾರೆ. ಇತ್ತ ರೈತರು ನಮ್ಮ ಸಮಸ್ಯೆ ಹೆಸ್ಕಾಂ ಅಧಿಕಾರಿಗಳಿಗೆ ಗೊತ್ತಾಗಲಿ ಎಂದು ಈ ರೀತಿ ಮಾಡಿದ್ದೇವೆ ಎಂದು ರೈತರು ಹೇಳಿಕೊಂಡಿದ್ದಾರೆ. 

ಮೊಸಳೆ ಕೊಂಡೊಯ್ದ ಅರಣ್ಯ ಇಲಾಖೆ ಅಧಿಕಾರಿಗಳು..!

ಇನ್ನು ರೈತರು ಮೊಸಳೆ ಸಮೇತ ವಿದ್ಯುತ್ ವಿತರಣಾ ಘಟಕಕ್ಕೆ ಬಂದಿದ್ದರಿಂದ ಸಿಬ್ಬಂದಿ ಹೆದರಿ ಬಸವನ ಬಾಗೇವಾಡಿ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿದ್ದಾರೆ. ಘಟಕಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮೊಸಳೆ ಕೊಂಡೊಯ್ಯಲು ಮುಂದಾದಾಗ ರೈತರು ವಿರೋಧ ಮಾಡಿದ್ದಾರೆ. ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ರೈತರ ಮನವೊಲಿಕೆ ಮಾಡಿದ್ದಾರೆ. ನಂತರ ಮೊಸಳೆ‌ ಹಿಡಿದುಕೊಂಡು ಹೋಗಿ ಕೃಷ್ಣಾನದಿಗೆ ಬಿಟ್ಟಿದ್ದಾರೆ.

ವಿಜಯಪುರದಲ್ಲಿ ಭೀಕರ ಅಪಘಾತ: ರಸ್ತೆ ಬದಿ ಕುಳಿತಿದ್ದವರ ಮೇಲೆ ಹರಿದ ಅಪರಿಚಿತ ವಾಹನ, ನಾಲ್ವರು ಯುವಕರ ದುರ್ಮರಣ

ರಾತ್ರಿ ಪಾಳೆಯಲ್ಲಿ ನೀರು ಹಾಯಿಸೋ ರೈತರಿಗೆ ವಿಷಜಂತು ಕಾಟ..!

ಗ್ರಾಮೀಣ ಪ್ರದೇಶಗಳಲ್ಲಿ ಕರೆಂಟ್ ಕಣ್ಣಾಮುಚ್ಚಾಲೆ ರೈತರ ತಲೆ ಕೆಡಿಸಿದೆ. ಸರಿಯಾದ ಸಮಯಕ್ಕೆ ಕರೆಂಟ್ ಸಿಗದೆ ರೈತರು ಜಮೀನುಗಳಲ್ಲಿ ಬೆಳೆಗಳಿಗೆ ನೀರು ಹಾಯಿಸೋದಕ್ಕೆ ಪರದಾಡುವ ಹಾಗಾಗಿದೆ. ಇನ್ನು ತಡರಾತ್ರಿ ಕರೆಂಟ್ ಬರ್ತಿದ್ದಂತೆ ಜಮೀನಿಗೆ ಹೋದರೆ ಅಲ್ಲಿ ಮೊಸಳೆ, ಹಾವು, ವಿಷಜಂತುಗಳ ದರ್ಶನವಾಗ್ತಿದೆ. ಇದು ಸಹಜವಾಗಿಯೇ ರೈತರಿಗೆ ಭಯದ ಜೊತೆಗೆ ಹೆಸ್ಕಾಂ ಮೇಲೆ ಗರಂ ಆಗುವ ಹಾಗೇ ಮಾಡಿದೆ.‌ ಹೀಗಾಗಿಯೇ ರೈತರು ಜಮೀನಿಗೆ ಬಂದಿದ್ದ ಮೊಸಳೆಯನ್ನ ಹೆಸ್ಕಾಂನ ವಿದ್ಯುತ್ ವಿತರಣಾ ಘಟಕ್ಕೆ ತಂದು ಬಿಟ್ಟು ಆಕ್ರೋಶ‌ ಹೊರಹಾಕಿದ್ದಾರೆ.

ಕರೆಂಟ್ ಕಣ್ಣಾಮುಚ್ಚಾಲೆಗೆ ಬೇಸತ್ತಿರೋ ರೈತರು..!

ದಿನಕ್ಕೆ ರೈತರಿಗೆ ಇಂತಿಷ್ಟು ಸಮಯ ಕರೆಂಟ್ ನೀಡಬೇಕು ನಿಯಮವಿದೆ. ಆದ್ರೆ ವಿದ್ಯುತ್ ಕೊರತೆಯಿಂದಾಗಿ ರೈತರ ಜಮೀನುಗಳಲ್ಲಿ‌ ಪಂಪಸೆಟ್‌ಗಳಿಗೆ ಕರೆಂಟ್ ಪುರೈಕೆ ಸಾಧ್ಯವಾಗ್ತಿದೆ. 7 ಗಂಟೆ ರೈತರಿಗೆ ಸಿಗಬೇಕಿದ್ದ ವಿದ್ಯುತ್ ಸಿಗ್ತಿಲ್ಲ. ಮತ್ತೊಂದು ಕಡೆಗೆ ಹಗಲು ನಾಲ್ಕು ತಾಸು, ರಾತ್ರಿ ಮೂರು ತಾಸು ನೀಡಬೇಕಾದ ವಿದ್ಯುತ್ ಸರಿಯಾದ ಸಮಯಕ್ಕೆ ನೀಡ್ತಿಲ್ಲ. ರೈತರು ಮಧ್ಯರಾತ್ರಿ, ನಸುಕಿನ ಜಾವದ ವರೆಗು ಕರೆಂಟ್ ಕಾದು ಕೂತು ಹಲವು ಅಪಾಯಗಳ ನಡುವೆ ಬೆಳೆಗಳಿಗೆ ನೀರು ಹಾಯಿಸಬೇಕಿದೆ. ಮೊಸಳೆ-ಹಾವು-ಚೇಳು-ಹುಳ ಹುಪ್ಪಡಿಗಳಿಗೆ ಅಂಜಿ ಕೆಲಸ ಮಾಡಬೇಕಾಗಿದೆ. ಹಗಲು ಹೊತ್ತು ಸರಿಯಾಗಿ ಕರೆಂಟ್ ಸಿಕ್ಕರೆ ರೈತರಿಗೆ ಈ ತಾಪತ್ರಯವೇ ಇರೋದಿಲ್ಲ.

click me!