Hosapete| ಜಿಲ್ಲಾ ಕ್ರೀಡಾಂಗಣ, ವೃತ್ತಕ್ಕೆ ಪುನೀತ್‌ ಹೆಸರಿಡಲು ಆಗ್ರಹ

By Kannadaprabha News  |  First Published Nov 14, 2021, 10:25 AM IST

*   ಯುವಕರ ಕಣ್ಮಣಿಯಾಗಿದ್ದ ಪುನೀತ್‌ ರಾಜ್‌ಕುಮಾರ್‌
*   ಹಲವು ಸಮಾಜಮುಖಿ ಕೆಲಸ ಮಾಡಿದ ಅಪ್ಪು
*   ಸರ್ಕಲ್‌, ಜಿಲ್ಲಾ ಕ್ರೀಡಾಂಗಣಕ್ಕೂ ಪುನೀತ್‌ ಹೆಸರಿಡಲಾಗುವುದು: ಆನಂದ್‌ ಸಿಂಗ್
 


ಹೊಸಪೇಟೆ(ನ.14):  ಪವರ್‌ ಸ್ಟಾರ್‌(Powerstar) ಪುನೀತ್‌ ರಾಜ್‌ಕುಮಾರ(Puneeth Rajkumar) ಅವರ ಹೆಸರನ್ನು ವಿಜಯನಗರ(Vijayanagara) ಜಿಲ್ಲೆಯ ಜಿಲ್ಲಾ ಕೇಂದ್ರ ಹೊಸಪೇಟೆಯ(Hosapete) ಪ್ರಮುಖ ವೃತ್ತಕ್ಕೆ ಮತ್ತು ಜಿಲ್ಲಾ ಕ್ರೀಡಾಂಗಣಕ್ಕೆ(District Stadium) ಇಡಬೇಕು ಎಂದು ಒತ್ತಾಯಿಸಿ ಪುನೀತ್‌ ರಾಜಕುಮಾರ ಅವರ ಅಭಿಮಾನಿಗಳು ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಅವರಿಗೆ ಶುಕ್ರವಾರ ಮನವಿಪತ್ರ ಸಲ್ಲಿಸಿದ್ದಾರೆ. 

ಪುನೀತ್‌ ರಾಜ್‌ಕುಮಾರ ಅವರು ಬಾಲ್ಯದಿಂದಲೇ ವರನಟ ಡಾ. ರಾಜ್‌ಕುಮಾರ(Dr Rajkumar) ಅವರ ಜತೆಗೆ ನಟನೆಯಲ್ಲಿ ತೊಡಗಿಸಿಕೊಂಡಿದ್ದರು. ಅವರು ನಾಯಕನಟರಾಗಿ ಸದಭಿರುಚಿ ಚಿತ್ರಗಳನ್ನು(Movies) ಮಾಡಿದ್ದಾರೆ. ಅವರು ಯುವಕರ ಕಣ್ಮಣಿಯಾಗಿದ್ದರು. ಅವರು ವೃದ್ಧಾಶ್ರಮ, ಅನಾಥಾಶ್ರಮ ನಡೆಸಿದ್ದಾರೆ. ರೈತರು ಮತ್ತು ಮಕ್ಕಳ ಏಳ್ಗೆಗಾಗಿ ಹಲವು ಸಮಾಜಮುಖಿ ಕೆಲಸ ಮಾಡಿದ್ದಾರೆ. ಹಾಗಾಗಿ ಪುನೀತ್‌ ಅವರ ಹೆಸರನ್ನು ಹೊಸಪೇಟೆಯ ಪ್ರಮುಖ ವೃತ್ತಕ್ಕೆ(Circle) ಇಡಬೇಕು. ಜತೆಗೆ ಜಿಲ್ಲಾ ಕ್ರೀಡಾಂಗಣಕ್ಕೂ ಅವರ ಹೆಸರನ್ನು ಇಡಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಜನವರಿಯಲ್ಲಿ ಸರ್ಕಲ್‌:

ಮುಂಬರುವ ಜನವರಿ ತಿಂಗಳಲ್ಲಿ ಪುನೀತ್‌ ರಾಜ್‌ಕುಮಾರ ಹೆಸರಿನ ಸರ್ಕಲ್‌ ನಿರ್ಮಿಸಲಾಗುವುದು. ಮುಂದೆ ಜಿಲ್ಲಾ ಕ್ರೀಡಾಂಗಣಕ್ಕೂ ಹೆಸರಿಡಲಾಗುವುದು. ಉದ್ಯಾನ, ಕಲಾ ಮಂದಿರ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಸಚಿವ ಆನಂದ್‌ ಸಿಂಗ್‌(Anand Singh) ಅವರು ಭರವಸೆ ನೀಡಿದರು. ಮುಖಂಡ ಗುಜ್ಜಲ ರಘು, ಪುನೀತ್‌ ರಾಜ್‌ಕುಮಾರ ಅಭಿಮಾನಿಗಳಾದ(Fans) ಕಿಚಿಡಿ ವಿಶ್ವ, ರಾಜಣ್ಣ, ಚಂದ್ರಶೇಖರ ಮತ್ತಿತರರಿದ್ದರು.

'ಹೊಸಪೇಟೆ ಜಿಲ್ಲಾ ಕ್ರೀಡಾಂಗಣಕ್ಕೆ ಪುನೀತ್‌ ಹೆಸರಿಡಿ'

ಶ್ರೀಕೃಷ್ಣದೇವರಾಯನ ಪ್ರತಿಮೆ ಶೀಘ್ರ ಸ್ಥಾಪನೆ

ವಿಜಯನಗರ ಸಾಮ್ರಾಜ್ಯದ ಸಾಮ್ರಾಟ್‌ ಶ್ರೀಕೃಷ್ಣದೇವರಾಯರ(Shri Krishnadevaraya) ಕಂಚಿನ ಪ್ರತಿಮೆಯನ್ನು(Bronze Statue) ಜೋಳದ ರಾಶಿ ಗುಡ್ಡದಲ್ಲಿ ನಿರ್ಮಿಸಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಹೇಳಿದರು.

ನಗರದ ಅಂಬಾಭವಾನಿ ದೇವಸ್ಥಾನದಲ್ಲಿ ಶ್ರೀಸಹಸ್ರಾರ್ಜುನ ಜಯಂತಿ ಮಹಾರಾಜರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶ್ರೀಕೃಷ್ಣದೇವರಾಯರ ಕಂಚಿನ ಪ್ರತಿಮೆ ಚಿತ್ರದುರ್ಗದಲ್ಲಿ ನಿರ್ಮಿಸಲಾಗುತ್ತಿದೆ. ಚಿತ್ರದುರ್ಗದಿಂದ ಪ್ರತಿಮೆಯನ್ನು ಬರಮಾಡಿಕೊಂಡು ಜೋಳದರಾಶಿ ಗುಡ್ಡದಲ್ಲಿ ಪ್ರತಿಷ್ಠಾಪಿಸಲಾಗುವುದು ಎಂದರು.

ವಿಜಯನಗರ ಜಿಲ್ಲೆ ರಚನೆ ಕಾರ್ಯ ನನ್ನ ಅವಧಿಯಲ್ಲಿ ಆಗಿರುವುದು ನನ್ನ ಸೌಭಾಗ್ಯ. ವಿಜಯನಗರ ಜಿಲ್ಲೆ ರಚನೆಯಿಂದ ಭೂಮಿ, ನಿವೇಶನ ಬೆಲೆ ಏರಿದೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ, ಅಭಿವೃದ್ಧಿಯಿಂದ ಬದಲಾವಣೆ ಸಹಜ. ಇದನ್ನು ಅರ್ಥ ಮಾಡಿಕೊಳ್ಳಬೇಕು. ವಿಜಯನಗರ ಜಿಲ್ಲೆ ಬಳ್ಳಾರಿ(Ballari) ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಾದರಿ ಕ್ಷೇತ್ರವಾಗಿ ಮಾರ್ಪಟ್ಟಿದೆ. ಎಸ್‌ಎಸ್‌ಕೆ ಸಮಾಜ ಸಣ್ಣ ಸಮಾಜವಾದರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದಾರೆ. ಯುವಕರು ಕೂಡ ಮಾದರಿ ಕೆಲಸ ಮಾಡುತ್ತಿದ್ದಾರೆ ಎಂದರು.

ಮುಖಂಡರಾದ ದೇವೇಂದ್ರಸಾ ರಾಯಬಾಗಿ, ವಸಂತ ಇರಕಲ್‌, ಶಾಂತ ಮೆಹರವಾಡೆ, ರಾಘವೇಂದ್ರ ಕಾಟವಾ, ವೆಂಕಟೇಶ್‌ ಪವಾರ್‌, ಜಯಲಕ್ಷ್ಮಿ ಪವಾರ್‌, ಪ್ರಕಾಶ್‌ ಮೆಹರವಾಡೆ ಮತ್ತಿತರರಿದ್ದರು. ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಾದ ವಿದ್ಯಾ ಸಿಂಗ್ರಿ, ಸ್ನೇಹಾ ಹೊಸಮನಿ, ಎಂ. ಚೈತನ್ಯ, ಜೋತಿ, ರಚಿತಾ ಡಿ. ಸಿಂಗ್ರಿ, ನಿತಿನ್‌ ಎಂ. ಚೇತನ್‌ ಪವಾರ್‌, ಓಂಕಾರ ಬಾವಿಕಟ್ಟಿ, ಮಹೆಬಾಬು ಬರಾಡೆ, ಬರಾಡೆ, ಚಂದನ ಮತ್ತಿತರರಿದ್ದರು.

ಕೇಂದ್ರ ಸರ್ಕಾರದ ಯೋಜನೆ ಮನೆ ಮನೆಗೆ ತಲುಪಿಸಿ

ಪ್ರಧಾನಿ ನರೇಂದ್ರ ಮೋದಿ(Narendra Modi) ಅವರು ದೇಶದ 100 ಕೋಟಿಗೂ ಅಧಿಕ ಜನರಿಗೆ ಕೋವಿಡ್‌(Covid19) ಮೊದಲ ಡೋಸ್‌ ಲಸಿಕೆ ಒದಗಿಸಿದ್ದಾರೆ. ದೇಶದ ಜನರ ಬಗ್ಗೆ ಅವರು ಹೊಂದಿರುವ ಕಾಳಜಿಯನ್ನು ಜನರಿಗೆ ತಲುಪಿಸಬೇಕು. ಜತೆಗೆ ಕೇಂದ್ರ ಸರ್ಕಾರದ ಯೋಜನೆಗಳನ್ನೂ ಮನೆ ಮನೆಗೆ ತಲುಪಿಸುವ ಕೆಲಸವಾಗಬೇಕು ಎಂದು ಪ್ರವಾಸೋದ್ಯಮ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ ಸಿಂಗ್‌ ಹೇಳಿದರು.

ಹಂಪಿ, ಹೊಸಪೇಟೆ ಪುನೀತ್‌ಗೆ ಪಂಚಪ್ರಾಣ..!

ನಗರದ ಬಿಜೆಪಿ(BJP) ಕಚೇರಿಯಲ್ಲಿ ಶುಕ್ರವಾರ ನಡೆದ ಬಿಜೆಪಿ ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಬಳಿಕ ಹೊಸಪೇಟೆ ನಗರಸಭೆ ಚುನಾವಣೆ ಬರಲಿದ್ದು, ಇದಕ್ಕೆ ಕಾರ್ಯಕರ್ತರು ಸಜ್ಜಾಗಬೇಕು. ಜಿಪಂ, ತಾಪಂ ಚುನಾವಣೆಯೂ ಬರಲಿದೆ. ಹಾಗಾಗಿ ಕಾರ್ಯಕರ್ತರು ಚುನಾವಣೆ ಎದುರಿಸಲು ಸನ್ನದ್ಧವಾಗಬೇಕು ಎಂದರು. ಪ್ರತಿಪಕ್ಷದವರು ಬರೀ ಆರೋಪ ಮಾಡುತ್ತಿದ್ದಾರೆ. ಹೊಸ ಹೊಸ ಆರೋಪ ಹುಡುಕುತ್ತಿದ್ದಾರೆ. ಬಿಟ್‌ ಕಾಯಿನ್‌(Bitcoin) ಬಗ್ಗೆ ಹೇಳುತ್ತಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಬಿಜೆಪಿ ಕಾರ್ಯಕರ್ತರು ಅಧಿಕಾರಕ್ಕೆ ಆಸೆ ಪಡಲ್ಲ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಚನ್ನಬಸವನಗೌಡ ಪಾಟೀಲ್‌ ಮಾತನಾಡಿ, ಪಕ್ಷ ಸಂಘಟನೆಗಾಗಿ ಕಾರ್ಯಕಾರಿಣಿ ಮಾಡಲಾಗುತ್ತಿದೆ. ಪ್ರತಿ ಮಂಡಲಗಳ ಕಾರ್ಯಕಾರಿಣಿ ನಡೆಸಲಾಗುವುದು. ಬೂತ್‌ ಮಟ್ಟದಿಂದಲೇ ಪಕ್ಷ ಸಂಘಟಿಸಬೇಕು ಎಂದರು.
ಮುಖಂಡರಾದ ಸಿದ್ದೇಶ ಯಾದವ್‌, ಡಾ. ರಮೇಶ ನಾಯ್ಕ, ವ್ಯಾಸನಕೆರೆ ಶ್ರೀನಿವಾಸ್‌, ಅಯ್ಯಾಳಿ ತಿಮ್ಮಪ್ಪ, ಅನಂತ ಪದ್ಮನಾಭ, ಬಸವರಾಜ ನಾಲತ್ವಾಡ, ಶಂಕರ ಮೇಟಿ, ಜೀವರತ್ನಂ ಮತ್ತಿತರರಿದ್ದರು.
 

click me!