ಕೊಪ್ಪಳ: ದೀಪಾವಳಿ ಮಹಾಲಕ್ಷ್ಮಿ ಪೂಜೆಯೊಂದಿಗೆ ಕುಮಾರಸ್ವಾಮಿ ಫೋಟೋಗೂ ಪೂಜೆ..!

By Girish Goudar  |  First Published Oct 27, 2022, 11:50 AM IST

ಮಹಾಲಕ್ಷ್ಮಿ ಪೂಜೆಯೊಂದಿಗೆ ಕುಮಾರಸ್ವಾಮಿ ಭಾವಚಿತ್ರವನ್ನಿಟ್ಟು ಪೂಜೆಯನ್ನು ಸಲ್ಲಿಸಿದ ಅಭಿಮಾನಿ ನಿಂಗಪ್ಪ ವೀರಣ್ಣ ಜಿಗೇರಿ 


ಕೊಪ್ಪಳ(ಅ.27): ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅಭಿಮಾನಿಯೊಬ್ಬರು ಮಹಾಲಕ್ಷ್ಮಿ ಪೂಜೆಯೊಂದಿಗೆ ಕುಮಾರಸ್ವಾಮಿ ಭಾವಚಿತ್ರವನ್ನಿಟ್ಟು ಪೂಜೆಯನ್ನು ಸಲ್ಲಿಸಿದ್ದಾರೆ.

ಕುಷ್ಟಗಿ ತಾಲೂಕಿನ ಕಡೇಕೊಪ್ಪ ಗ್ರಾಮದ ನಿಂಗಪ್ಪ ವೀರಣ್ಣ ಜಿಗೇರಿ ಎಂಬುವವರು ಈ ರೀತಿಯಾಗಿ ಪೂಜೆ ಮಾಡಿರುವ ಫೋಟೊ ಸಾಮಾಜಿಕ ಜಾಲತಾಣದಲ್ಲಿ ತುಂಬಾ ವೈರಲ್ ಆಗುತ್ತಿದೆ.

Tap to resize

Latest Videos

undefined

ಕೊಪ್ಪಳ: ಪೊಲೀಸರ ಬಿಗಿ ಕಾವಲಿದ್ದರೂ ಎಕ್ಕ, ರಾಜ, ರಾಣಿ ಕೈಯೊಳಗೆ...!

ನಿಂಗಪ್ಪ ಜಿಗೇರಿ ಅವರನ್ನು ಈ ಕುರಿತು ಮಾತನಾಡಿಸಿದಾಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರೈತರ ಬಗ್ಗೆ ಕಾಳಜಿ ಇರುವ ಏಕೈಕ ವ್ಯಕ್ತಿಯಾಗಿದ್ದು ಇಲ್ಲಿಯವರೆಗೆ ಎಲ್ಲಾ ಪಕ್ಷದವರಿಗೂ ಆಡಳಿತ ನಡೆಸಲು ಒಂದೊಂದು ಬಾರಿ ಅವಕಾಶ ಮಾಡಿಕೊಟ್ಟಿದ್ದೀರಿ. ಹೀಗಾಗಿ 2023ರ ಚುನಾವಣೆಯಲ್ಲಿ ರಾಜ್ಯದ ಎಲ್ಲರೂ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬೆಂಬಲಿಸಿ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದು ಪೂಜೆ ಮಾಡುವದರ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದೇನೆ ಎಂದು ಹೇಳಿದರು.
 

click me!