Bengaluru Ola Uber Row: ವಾರದೊಳಗೆ ಸರ್ಕಾರದ ಹೊಸ ದರ ಪಟ್ಟಿ: ಕನಿಷ್ಟ ದರ ₹45ಕ್ಕೆ ಏರಿಕೆ?

Published : Oct 27, 2022, 11:33 AM ISTUpdated : Oct 27, 2022, 11:35 AM IST
Bengaluru Ola Uber Row: ವಾರದೊಳಗೆ ಸರ್ಕಾರದ ಹೊಸ ದರ ಪಟ್ಟಿ: ಕನಿಷ್ಟ ದರ ₹45ಕ್ಕೆ ಏರಿಕೆ?

ಸಾರಾಂಶ

Minimum Charge for aggregator autos: ಓಲಾ, ಉಬರ್‌ ಕಂಪನಿಗಳಿಗೆ ಸರ್ಕಾರ ಮೂಗುದಾರ ಹಾಕಲು ಮುಂದಾಗಿದ್ದು ವಾರದೊಳಗೆ ಓಲಾ ಉಬರ್‌ಗಳಿಗೆ ಹೊಸ ದರ ನಿಗದಿಗೆ ಸರ್ಕಾರ ಮುಂದಾಗಿದೆ 

ಬೆಂಗಳೂರು (ಅ. 27): ಸರ್ಕಾರದ ನಿಗದಿತ ದರಕ್ಕಿಂತ ಅಧಿಕ ಹಣ ವಸೂಲಿಗಿಳಿದಿದ್ದ ಓಲಾ (Ola), ಉಬರ್‌ (Uber) ಆ್ಯಪ್‌ಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.ಹೈಕೋರ್ಟ್ (High Court) ನಿರ್ದೇಶನ ಬಳಿಕ ಕೆಲ ಆ್ಯಪ್‌ಗಳು ಎಚ್ಚೆತ್ತುಕೊಂಡು ದರ ಇಳಿಕೆ ಮಾಡಿದ್ದವು. ಕ್ಯಾಬ್‌ ಬುಕ್ಕಿಂಗ್‌ ಆ್ಯಪ್‌ಗಳಾದ  ಓಲಾ, ಉಬರ್‌ಗಳಿಗೆ ದರ ನಿಗದಿ ಪಡಿಸುವ ಕುರಿತು ಹಾಗೂ ಆಟೋರಿಕ್ಷಾ ಅನುಮತಿ ನೀಡುವ ಹಾಗೂ ಕಂಪನಿಗಳೊಂದಿಗೆ ಚರ್ಚಿಸಿ ಮುಂದಿನ 15 ದಿನಗಳಲ್ಲಿ ಹೊಸದಾಗಿ ದರ ನಿಗದಿಪಡಿಸಬೇಕು. ಅನುಮತಿಗೆ ಕಾನೂನು ಕ್ರಮ ಕೈಗೊಳ್ಳಬೇಕು ಕೈಗೊಳ್ಳಬೇಕು ಎಂದು ಸಾರಿಗೆ ಇಲಾಖೆಗೆ ಹೈಕೋರ್ಟ್ ಸೂಚಿಸಿತ್ತು. ‌ಈ ಬೆನ್ನಲ್ಲೇ  ಓಲಾ, ಉಬರ್‌ ಕಂಪನಿಗಳಿಗೆ ಸರ್ಕಾರ ಮೂಗುದಾರ ಹಾಕಲು ಮುಂದಾಗಿದ್ದು ವಾರದೊಳಗೆ ಓಲಾ ಉಬರ್‌ಗಳಿಗೆ ಹೊಸ ದರ ನಿಗದಿಗೆ ಸರ್ಕಾರ ಮುಂದಾಗಿದೆ. ಹೊಸ ದರಪಟ್ಟಿಯಲ್ಲಿ ಮಿನಿಮಮ್ ದರ (Minimum Price) 30 ರಿಂದ 45 ರೂ ಏರಿಕೆ ಮಾಡುವ ಸಾಧ್ಯತೆ ಇದೆ. 

ಕನಿಷ್ಟ ದರ ₹45ಕ್ಕೆ ಏರಿಕೆ?: 15 ದಿನದೊಳಗೆ ಹೊಸ ದರ ಫಿಕ್ಸ್ ಮಾಡುವಂತೆ ಅಗ್ರಿಗೇಟರ್‌ ಕಂಪನಿಗಳಿಗೆ (Aggregator Companies) ಸರ್ಕಾರ ಸೂಚನೆ ನೀಡಿತ್ತು. ಈ ಡೆಡ್‌ಲೈನ್‌ ಮುಗಿಯುತ್ತಾ ಬರುತ್ತಿರುವ ಹಿನ್ನಲೆ ಹೊಸ ದರ ನಿಗದಿಗೆ ಸರ್ಕಾರ ಮುಂದಾಗಿದೆ.  ಜಿಎಸ್‌ಟಿ (GST) ಜೊತೆಗೆ  ಹೊಸ ಸರ್ಕಾರ ದರ  ನಿಗದಿಪಡಿಸಲಿದೆ. ಸದ್ಯ ಮೊದಲ 2 ಕೀ ಮೀಟರ್‌ಗೆ ಸಾರಿಗೆ ಇಲಾಖೆ (Transport Department) 30ರೂ ನಿಗದಿ ಮಾಡಿದೆ. ಆದರೆ ಕಲೆ ಅಗ್ರಿಗೇಟರ್‌ ಕಂಪನಿಗಳು ಗ್ರಾಹಕರಿಂದ ಮಿನಿಮಮ್ ದರ 100ರೂ ವಸೂಲಿ ಮಾಡುತ್ತಿವೆ.  ಈ ಬೆನ್ನಲ್ಲೇ ಹೊಸ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಲಿದ್ದು ವಾರದೊಳಗೆ ಹೊಸ ದರ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.  ಹೊಸ ಪರಿಷ್ಕರಣೆ ದರದಲ್ಲಿ  ಮಿನಿಮಮ್ ದರ ರು.30 ರಿಂದ ರು.45ಕ್ಕೆ ಏರಿಕೆ ಮಾಡುವ ಸಾಧ್ಯತೆ ಇದೆ. 

ಇದನ್ನೂ ಓದಿ: ಓಲಾ, ಉಬರ್‌ಗೆ 30,000 ಆಟೋ ಗುಡ್‌ಬೈ!

ಸದ್ಯದ ಆಟೋ ದರ:  ಸರ್ಕಾರವು ಬೆಂಗಳೂರಿನಲ್ಲಿ ಕನಿಷ್ಠ ಆಟೋ ದರ ಮೊದಲ 2 ಕಿಮೀಗೆ .30, ನಂತರದ ಪ್ರತಿ ಕಿ.ಮೀಗೆ .15 ಇದೆ. ಮೊದಲ 5 ನಿಮಿಷಕ್ಕೆ ಯಾವುದೇ ಕಾಯುವ ಶುಲ್ಕ (ವೇಟಿಂಗ್‌ ಚಾರ್ಜ್‌) ಇರುವುದಿಲ್ಲ ಮತ್ತು ನಂತರ ಪ್ರತಿ 15 ನಿಮಿಷಕ್ಕೆ .5 ಇದೆ. ರಾತ್ರಿ ಪ್ರಯಾಣದಲ್ಲಿ (ರಾತ್ರಿ 10ರಿಂದ ಬೆಳಗ್ಗೆ 5) ಶೇ.50 ದರ ಹೆಚ್ಚು ನಿಗದಿಪಡಿಸಿದೆ.

ಹೆಚ್ಚು ದರ ಪಡೆದರೆ ದೂರು ನೀಡಿ: ಇನ್ನು ಊಬರ್‌, ಓಲಾದಂತಹ ಆ್ಯಪ್‌ಗಳು ಹೆಚ್ಚು ದರ ವಸೂಲಿ ಮಾಡಿದರೆ ಪ್ರಯಾಣಿಕರು ದೂರು (Complaint) ಸಲ್ಲಿಸಬೇಕು ಎಂದು ಸಾರಿಗೆ ಇಲಾಖೆ ಹೇಳಿದೆ. ಕೋರ್ಟ್ ಸೂಚನೆಯಂತೆ ಮೀಟರ್‌ಗಿಂತ ಶೇ.10ರಷ್ಟು ಹಾಗೂ ಜಿಎಸ್‌ಟಿ (ಶೇ.5) ಸೇರಿ ದರ ನಿಗದಿಯಾಗಬೇಕು. ನಿಗದಿತ ದರಕ್ಕಿಂತ ಹೆಚ್ಚುವರಿ ಹಣ ಪಡೆದರೆ ಸಾರಿಗೆ ಇಲಾಖೆ ಸಹಾಯವಾಣಿಗೆ (Helpline) ಕರೆ ಮಾಡಿ ದೂರು ನೀಡಬಹುದು. ದೂರುಗಳ ವರದಿಯನ್ನು ನ್ಯಾಯಾಲಕ್ಕೆ (Court) ನೀಡಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸಹಾಯವಾಣಿ ಸಂಖ್ಯೆ: 9449863429 / 9449863426

PREV
Read more Articles on
click me!

Recommended Stories

ಬೆಂಗಳೂರಿನ ಹಲವೆಡೆ ಇಂದು ಪವರ ಕಟ್, ಯಾವ ಏರಿಯಾದಲ್ಲಿ 8 ಗಂಟೆ ವಿದ್ಯುತ್ ಕಡಿತ?
'ಉಪಲೋಕಾಯುಕ್ತರಿಗೆ ಒಂದ್ ನಮಸ್ಕಾರ': ಭ್ರಷ್ಟಾಚಾರದ ಬಗ್ಗೆ ಹೇಳಿಕೆ ನೀಡಲು ಮಾತ್ರ ಅಧಿಕಾರವಿದೆಯೇ? – ಹೆಚ್‌ಡಿಕೆ ವ್ಯಂಗ್ಯ