ಸೀಲ್‌ಡೌನ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನರ್ಸ್‌ ಕುಟುಂಬ ಕ್ವಾರಂಟೈನ್‌ಗೆ

By Kannadaprabha NewsFirst Published Apr 26, 2020, 7:21 AM IST
Highlights

ಮಂಗಳೂರು ಭಾಗದಲ್ಲಿ ಸೀಲ್‌ ಡೌನ್‌ ಗೆ ಒಳಗಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದಾರೆಂಬ ಕಾರಣಕ್ಕೆ ವಿಟ್ಲ ಮೂಲದ ನರ್ಸ್‌ ಒಬ್ಬರನ್ನು ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಹಾಗೂ ಆಕೆಯ ಮನೆಯವರನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ.

ಮಂಗಳೂರು(ಏ.26): ಮಂಗಳೂರು ಭಾಗದಲ್ಲಿ ಸೀಲ್‌ ಡೌನ್‌ ಗೆ ಒಳಗಾದ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದಾರೆಂಬ ಕಾರಣಕ್ಕೆ ವಿಟ್ಲ ಮೂಲದ ನರ್ಸ್‌ ಒಬ್ಬರನ್ನು ವಿಟ್ಲ ಸಮುದಾಯ ಆಸ್ಪತ್ರೆಯಲ್ಲಿ ಹಾಗೂ ಆಕೆಯ ಮನೆಯವರನ್ನು ಮನೆಯಲ್ಲಿ ಕ್ವಾರೆಂಟೈನ್‌ ಮಾಡಲಾಗಿದೆ.

ನರ್ಸ್‌ ಮನೆಯವರನ್ನು ಮನೆಯಲ್ಲಿ ಕ್ವಾರೆಂಟೇನ್‌ಗೊಳಿಸಿದ್ದು, ವಿವಿಧ ರೀತಿಯಲ್ಲಿ ಸಂಪರ್ಕಕ್ಕೆ ಬಂದವರೂ ಸ್ವಯಂ ಪ್ರೇರಿತವಾಗಿ ಕ್ವಾರೆಂಟೇನ್‌ಗೆ ಒಳಗಾಗಬೇಕು ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಸೂಚಿಸಿದ್ದಾರೆ ಎನ್ನಲಾಗಿದೆ.

ಜ್ವರದಿಂದ ಯುವಕ ಸಾವು

ಜ್ವರದಿಂದ ತೀವ್ರವಾಗಿ ಬಳಲುತ್ತಿದ್ದ ವ್ಯಕ್ತಿಯೊಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ವರ್ಗಾವಣೆ ಮಾಡಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ.

ಪ್ರತಿಭಟನೆಯಲ್ಲಿ ಮಾತ್ರವಲ್ಲ ಲಾಕ್‌ಡೌನ್‌ ಸಮಯದಲ್ಲೂ ವಾಟಾಳ್ ನಾಗರಾಜ್ ಪ್ರಾಣಿ ಪ್ರೇಮ

ಕನ್ಯಾನ ಶಂಬರಮೂಲೆ ನಿವಾಸಿ ಚಂದ್ರಹಾಸ (31) ಅವರು ಮೃತ ದುರ್ದೈವಿ. ಜ್ವರದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತೀವ್ರತೆ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಘಟನೆ ನಡೆದಿದೆ.

click me!