ಉಡುಪಿ: ಜಿಲ್ಲಾಸ್ಪತ್ರೆ ಸಿಬ್ಬಂದಿ ಯಡವಟ್ಟು, ಮೃತ ವ್ಯಕ್ತಿಯ ಶವ ಅದಲು ಬದಲು..!

Suvarna News   | Asianet News
Published : Aug 23, 2020, 02:36 PM ISTUpdated : Aug 23, 2020, 02:56 PM IST
ಉಡುಪಿ: ಜಿಲ್ಲಾಸ್ಪತ್ರೆ ಸಿಬ್ಬಂದಿ ಯಡವಟ್ಟು, ಮೃತ ವ್ಯಕ್ತಿಯ ಶವ ಅದಲು ಬದಲು..!

ಸಾರಾಂಶ

ಉಡುಪಿ ಜಿಲ್ಲಾಸ್ಪತ್ರೆಯ ಯಡವಟ್ಟು| ಶವ ಅದಲು ಬದಲು| ಗೊಂದಲದಲ್ಲಿ ಮೃತರ ಕುಟುಂಬಸ್ಥರು| ಅಂತ್ಯ ಸಂಸ್ಕಾರಕ್ಕೆಂದು ತೆರಳಿದ್ದ ವೇಳೆ ಮಾಹಿತಿ ಬಹಿರಂಗ| 

ಉಡುಪಿ(ಆ.23): ಶವ ಅದಲು ಬದಲಾಗಿದ್ದರಿಂದ ಕುಟುಂಬಸ್ಥರು ಕೆಲ ಕಾಲ ಆತಂಕಕ್ಕೊಳಗಾದ ಘಟನೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಇಂದು(ಭಾನುವಾರ) ನಡೆದಿದೆ. 

"

ಕೋಟೇಶ್ವರ ಮೂಲದ ನೇರಂಬಳ್ಳಿಯ ಗಂಗಾಧರ ಆಚಾರ್ಯ ಎಂಬುವರು ನ್ಯುಮೋನಿಯಾದಿಂದ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಆಸ್ಪತ್ರೆಯ ಸಿಬ್ಬಂದಿ ಗಂಗಾಧರ ಆಚಾರ್ಯ ಅವರ ಮೃತದೇಹ ಹಸ್ತಾಂತರಿಸದೆ ಬೇರೊಬ್ಬರ ಶವವನ್ನ ನೀಡಿದ್ದರು. ಕಾರ್ಕಳ ಮೂಲದ ವ್ಯಕ್ತಿಯ ಶವವನ್ನ ಮೃತ ಗಂಗಾಧರ ಆಚಾರ್ಯ ಅವರ ಕುಟುಂಬಸ್ಥರಿಗೆ ನೀಡಲಾಗಿತ್ತು. 

ಉಡುಪಿ: ಕೊರೋನಾದಿಂದ ಮೃತಪಟ್ಟವರ ಅಂತ್ಯಕ್ರಿಯೆ ನಡೆಸಿದ ಹಿಂದೂ ಜಾಗರಣ ವೇದಿಕೆ ತಂಡ

ಆಸ್ಪತ್ರೆಯಿಂದ ಶವ ಪಡೆದು ಅಂತ್ಯ ಸಂಸ್ಕಾರಕ್ಕೆಂದು ಕುಂದಾಪುರ ರುದ್ರ ಭೂಮಿಯಲ್ಲಿ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಈ ವೇಳೆ ಗಂಗಾಧರ ಆಚಾರ್ಯ ಅವರ ಶವ ನೀಡುವ ಬದಲು ಬೇರೆಯರ ಶವ ನೀಡಿದ್ದರ ಬಗ್ಗೆ ಮಾಹಿತಿ ಬಹಿರಂಗವಾಗಿದೆ. ಈ ಸಂದರ್ಭದಲ್ಲಿ ಮೃತ ಗಂಗಾಧರ ಆಚಾರ್ಯ ಕುಟುಂಬಸ್ಥರಲ್ಲಿ  ಕೆಲ ಕಾಲ ಗೊಂದಲದಲ್ಲಿದ್ದರು.
 

PREV
click me!

Recommended Stories

ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!
ಡಿ.16ರಂದು ಮಂಡ್ಯಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ, ಜಿಲ್ಲಾಡಳಿತದಿಂದ ಭರದ ಸಿದ್ದತೆ, ಕಟ್ಟುನಿಟ್ಟಿನ ಭದ್ರತೆ