ವಿಜಯಪುರ: ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರ ಬಂಧನ

By Suvarna News  |  First Published Dec 21, 2019, 3:03 PM IST

ಬ್ಲ್ಯಾಕ್‌ಮೇಲ್ ಮಾಡಿ ಜನರಿಂದ ದುಡ್ಡು ಕೀಳುತ್ತಿದ್ದ ನಕಲಿ ಪತ್ರಕರ್ತರ ಬಂಧನ| ಓರ್ವ ನಕಲಿ ಪತ್ರಕರ್ತ ಪರಾರಿ| ಬಂಧಿತರಿಂದ ರೂ. 24000 ನಗದು, ಕಾರು, ವಿಡಿಯೋ ಕ್ಯಾಮೆರಾ, ಲ್ಯಾಪ್‌ಟಾಪ್, ಸಿಪಿಯು, 8 ಮೊಬೈಲ್‌ ಸೇರಿದಂತೆ ನಾನಾ ಬ್ಯಾಂಕುಗಳ ಎಟಿಎಂ ಕಾರ್ಡ್‌ ವಶ|


ವಿಜಯಪುರ(ಡಿ.21): ಬ್ಲ್ಯಾಕ್‌ಮೇಲ್ ಮಾಡಿ ಜನರಿಂದ ದುಡ್ಡು ಪೀಕುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ವಿಜಯಪುರ ಜಿಲ್ಲೆಯ ಹೊರ್ತಿಯ ಪ್ರಕಾಶ ದಶರಥ ಕೋಳಿ(33), ವಿಜಯಪುರ ನಗರದ ಝಾಕೀರ ಹುಸೇನ್ ಮೆಹಬೂಬಸಾಬ ಅಮೀನಗಡ(36), ದಶರಥ ನಿಂಗಪ್ಪ ಸೊನ್ನ(27) ಎಂದು ಬಂಧಿತ ನಕಲಿ ಪತ್ರಕರ್ತರಾಗಿದ್ದಾರೆ. 

ಶನಿವಾರ ಈ ಸಂಬಂಧ ಎಸ್‌ಪಿ ಎಸ್ಪಿ ಪ್ರಕಾಶ ನಿಕ್ಕಮ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಕಲಿ ಪತ್ರಕರ್ತರು ಎಂದು ಹೇಳಿಕೊಂಡು ನಾಲ್ವರ ತಂಡ ಜನರಿಗೆ ಹೆದರಿಸಿ ದುಡ್ಡು ಕೀಳುತ್ತಿದ್ದರು. ದೂರಿನ ಮೇರೆಗೆ ಇವರ ಅಡ್ಡೆಯ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಈ ಗುಂಪಿನಲ್ಲಿದ್ದ ಓರ್ವ ನಕಲಿ ಪತ್ರಕರ್ತ ಪರಾರಿಯಾಗಿದ್ದಾನೆ. ಮೂರು ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. 

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬಂಧಿತರಿಂದ ರೂ. 24000 ನಗದು, ಕಾರು, ವಿಡಿಯೋ ಕ್ಯಾಮೆರಾ, ಲ್ಯಾಪ್‌ಟಾಪ್, ಸಿಪಿಯು, 8 ಮೊಬೈಲ್‌ ಸೇರಿದಂತೆ ನಾನಾ ಬ್ಯಾಂಕುಗಳ ಎಟಿಎಂ ಕಾರ್ಡುಗಳನ್ನು ವಶ ಪಡಿಸಿಕೊಳ್ಳಲಾಗಿದೆ. 

ದೂರುದಾರ ತನ್ನ ಗೆಳತಿಯೊಂದಿಗೆ ಮನೆಯಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ್ದ ಈ ನಕಲಿ ಪತ್ರಕರ್ತರು ತಾವು ಪೊಲೀಸರೆಂದು ಹೇಳಿಕೊಂಡು ವಿಡಿಯೋ ಮಾಡಿ ಬೆದರಿಕೆ ಹಾಕಿದ್ದರು. ಬೆದರಿಕೆ ಹಾಕಿ  ರೂ‌ 2. ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇದರಲ್ಲಿ ರೂ.60 ಸಾವಿರ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
 

click me!