Fake Currency Fraud: ಲಕ್ಷ್ಮೇಶ್ವರದಲ್ಲಿ ಖೋಟಾ ನೋಟುಗಳ ಹಾವಳಿ..!

Kannadaprabha News   | Asianet News
Published : Jan 06, 2022, 09:46 AM IST
Fake Currency Fraud: ಲಕ್ಷ್ಮೇಶ್ವರದಲ್ಲಿ ಖೋಟಾ ನೋಟುಗಳ ಹಾವಳಿ..!

ಸಾರಾಂಶ

*   ಪೊಲೀಸರು ಎಚ್ಚೆತ್ತು ಜಾಲ ಪತ್ತೆ ಮಾಡುವಂತೆ ಸಾರ್ವಜನಿಕರ ಆಗ್ರಹ *  ರೈತರನ್ನು ಗುರಿಯಾಗಿರಿಸಿಕೊಂಡು ಖೋಟಾ ನೋಟು ಚಲಾವಣೆ *  ಪೊಲೀಸರು ಎಚ್ಚೆತ್ತು ಖೋಟಾ ನೋಟಿನ ಜಾಲ ಪತ್ತೆ ಮಾಡಲು ಸಾರ್ವಜನಿಕರ ಆಗ್ರಹ  

ಲಕ್ಷ್ಮೇಶ್ವರ(ಜ.06):  ಪಟ್ಟಣದಲ್ಲಿ ಕಳೆದ ಹಲವು ದಿನಗಳಿಂದ 200, 100 ಮತ್ತು 50 ಮುಖಬೆಲೆಯ ಖೋಟಾ ನೋಟುಗಳ(Fake Currency) ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರು ಬೆಚ್ಚಿ ಬಿದ್ದಿದ್ದಾರೆ.

ಜಿಲ್ಲೆಯಲ್ಲಿ ಪ್ರಮುಖ ವ್ಯಾಪಾರಿ ಕೇಂದ್ರವಾಗಿರುವ ಲಕ್ಷ್ಮೇಶ್ವರಕ್ಕೆ(Lakshmeshwara) ಪ್ರತಿನಿತ್ಯ 10- 15 ಸಾವಿರ ಜನರು ವ್ಯಾಪಾರ​- ವಹಿವಾಟಿಗಾಗಿ ಆಗಮಿಸುತ್ತಿರುತ್ತಾರೆ. ಪಟ್ಟಣದ ಪ್ರಮುಖ ಯಾತ್ರಾ ಸ್ಥಳಗಳಾಗಿರುವ ಸೋಮೇಶ್ವರ ದೇವಸ್ಥಾನ(Someshwara Temple) ಮತ್ತು ದೂದಪೀರಾ ದರ್ಗಾಕ್ಕೆ ರಾಜ್ಯದ(Karnataka) ಮೂಲೆ ಮೂಲೆಯಿಂದ ಭಕ್ತರು(Devotees) ಭೇಟಿ ನೀಡುತ್ತಾರೆ. ಅಲ್ಲದೇ ಎಪಿಎಂಸಿ ವ್ಯಾಪಾರ, ವಹಿವಾಟಿಗಾಗಿ ಮತ್ತು ಜಾನುವಾರು ವ್ಯಾಪಾರಕ್ಕಾಗಿ(Cattle Business) ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಾರೆ. ಪ್ರತಿನಿತ್ಯ ಲಕ್ಷಾಂತರ ರುಪಾಯಿಗಳ ವಹಿವಾಟು ಇಲ್ಲಿ ನಡೆಯುವುದರಿಂದ ಸುಲಭವಾಗಿ ಖೋಟಾ ನೋಟು ಚಲಾವಣೆ ಮಾಡಬಹುದು ಎನ್ನುವ ಲೆಕ್ಕಾಚಾರ ನಕಲಿ ನೋಟಿನ ರೂವಾರಿಗಳದ್ದಾಗಿದೆ.

ಬೆಂಗಳೂರು: ಮಾಸ್ಕ್ ಫೈನ್ ಹಾಕುವಾಗ ಸಿಕ್ಕಿಬಿದ್ದ ನಟೋರಿಯಸ್ ಕ್ರಿಮಿನಲ್ಸ್

ರೈತರು(Farmers) ಶುಕ್ರವಾರ ತಮ್ಮ ಜಾನುವಾರುಗಳನ್ನು ಸಂತೆಯಲ್ಲಿ ಮಾರಾಟ ಮಾಡಲು ಆಗಮಿಸುತ್ತಾರೆ. ಇಂತಹ ರೈತರನ್ನು ಗುರಿಯಾಗಿರಿಸಿಕೊಂಡು ಖೋಟಾ ನೋಟು ಚಲಾವಣೆಯ ದಂಧೆಕೋರರು ಅಸಲಿ ನೋಟು ಎಂದು ಹೇಳಿ ಖೋಟಾ ನೋಟು ಚಲಾವಣೆ ಮಾಡುತ್ತಿರುವ ಹಲವು ಘಟನೆಗಳು ಇತ್ತೀಚೆಗೆ ಬೆಳಕಿಗೆ ಬಂದಿವೆ.

ಲಕ್ಷ್ಮೇಶ್ವರಕ್ಕೆ ಖೋಟಾ ನೋಟು ಹೇಗೆ ಬಂತು ಎಂಬುದು ನಿಗೂಢವಾಗಿದೆ. ಆದರೂ ತಾಲೂಕಿನಲ್ಲಿ ಖೋಟಾ ನೋಟಿನ ಸದ್ದು ಆಗಾಗ ಕೇಳಿ ಬರುತ್ತಿರುವುದು ಹೊಸದಲ್ಲ. ಖೋಟಾ ನೋಟಿನ ಜಾಲ ಇಲ್ಲಿ ಸಣ್ಣಗೆ ಬೇರು ಬಿಟ್ಟಿದೆ ಎಂಬ ಅನುಮಾನವನ್ನು ಪಟ್ಟಣದ ಹೋಟೆಲ್‌ ಮತ್ತು ಡಾಬಾಗಳ ಮಾಲೀಕರು ವ್ಯಕ್ತಪಡಿಸುತ್ತಾರೆ. ಕಳೆದ ಕೆಲ ದಿನಗಳ ಹಿಂದೆ ಡಾಬಾ ಮಾಲೀಕರಿಗೆ 200 ಖೋಟಾ ನೋಟು ನೀಡಿ ಊಟ ಮಾಡಿ ಹೋಗಿದ್ದಾಗಿ ತಿಳಿದುಬಂದಿದೆ. ಈ ಕುರಿತು ಪೊಲೀಸರು(Police) ಎಚ್ಚೆತ್ತು ಖೋಟಾ ನೋಟಿನ ಜಾಲವನ್ನು ಪತ್ತೆ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಬೆಂಗ್ಳೂರಲ್ಲಿ 5.8 ಕೋಟಿ ಮೊತ್ತದ ಜೆರಾಕ್ಸ್‌ ನೋಟು ಪತ್ತೆ..!

ನಿಷೇಧಿತ ಹಾಗೂ ಖೋಟಾ ನೋಟು(Fake Note) ಚಲಾವಣೆ ಜಾಲವೊಂದನ್ನು ಭೇದಿಸಿರುವ ಗೋವಿಂದಪುರ ಠಾಣೆ ಪೊಲೀಸರು, ಈ ಸಂಬಂಧ ಐವರನ್ನು ಬಂಧಿಸಿ ಸುಮಾರು 5.8 ಕೋಟಿ ಮೌಲ್ಯದ ನಕಲಿ(ಜೆರಾಕ್ಸ್‌) ನೋಟುಗಳನ್ನು ಜಪ್ತಿ ಮಾಡಿದ್ದಾರೆ. ಈ ಘಟನೆ ಕಳೆದ ವರ್ಷ ನ.26 ರಂದು ನಡೆದಿತ್ತು. 

ಸವದತ್ತಿ ಯಲ್ಲಮ್ಮ ಜಾತ್ರೆಯಲ್ಲಿ ನಕಲಿ ನೋಟು ಚಲಾವಣೆ: ಓರ್ವನ ಬಂಧನ

ಬಟ್ಟೆ ವ್ಯಾಪಾರಿಗಳಾದ ಕೆ.ಆರ್‌.ಪುರದ ಸುರೇಶ್‌ ಕುಮಾರ್‌, ರಾಜಾಜಿನಗರದ ರಾಮಕೃಷ್ಣ, ಆನೇಕಲ್‌ ತಾಲೂಕಿನ ಕೃಷಿಕ ಮಂಜುನಾಥ್‌, ಹೊಂಗಸಂದ್ರದ ಬಿಬಿಎಂಪಿ(BBMP) ಗುತ್ತಿಗೆದಾರ ವೆಂಕಟೇಶ್‌ ಹಾಗೂ ದಯಾನಂದ ಬಂಧಿತರಾಗಿದ್ದು(Arrest), ಆರೋಪಿಗಳಿಂದ(Accused) 1000 ಹಾಗೂ 500 ಮುಖಬೆಲೆಯ .80 ಲಕ್ಷ ಹಾಗೂ ನೆರೆಯ ಕೇರಳದಲ್ಲಿ(Kerala)5 ಕೋಟಿ ಮೌಲ್ಯದ 500 ಮತ್ತು 1000 ಮುಖಬೆಲೆಯ ನಕಲಿ ನೋಟುಗಳನ್ನು ಜಪ್ತಿ ಮಾಡಲಾಗಿದೆ. ಈ ದಾಳಿ ವೇಳೆ ತಪ್ಪಿಸಿಕೊಂಡಿರುವ ಕೇರಳ ಮೂಲದ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ. ಎಚ್‌ಬಿಆರ್‌ ಲೇಔಟ್‌ನ ಎಚ್‌ಪಿ ಪೆಟ್ರೋಲ್‌ ಬಂಕ್‌ ಸಮೀಪ ಅಮಾನ್ಯೀಕರಣಗೊಂಡ ಹಳೆಯ ನೋಟುಗಳನ್ನು ಬದಲಾವಣೆ ಮಾಡಲು ಕೆಲವರು ಯತ್ನಿಸಿದ ಬಗ್ಗೆ ಮಾಹಿತಿ ಪಡೆದು ಇನ್ಸ್‌ಪೆಕ್ಟರ್‌ ಆರ್‌.ಪ್ರಕಾಶ್‌ ತಂಡ ದಾಳಿ(Raid) ನಡೆಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹಣದಾಸೆ ತೋರಿಸಿ ಜನರಿಗೆ ವಂಚನೆ:

ಐದು ವರ್ಷಗಳ ಹಿಂದೆ ದೇಶದಲ್ಲಿ 1000 ಹಾಗೂ 500 ಮುಖಬೆಲೆಯ ನೋಟುಗಳ ಚಲಾವಣೆಯನ್ನು ಕೇಂದ್ರ ಸರ್ಕಾರ(Central Government) ನಿಷೇಧಿಸಿತು. ಈ ನೋಟುಗಳಿಗೆ ಪ್ರಸುತ್ತ ಯಾವುದೇ ಬೆಲೆ ಇಲ್ಲ. ಆದರೆ ಜನರಿಗೆ ಹೆಚ್ಚಿನ ಹಣದಾಸೆ ತೋರಿಸಿ ಟೋಪಿ ಹಾಕಿ ಕೇರಳ ಮೂಲದ ಖೋಟಾ ನೋಟು ದಂಧೆಕೋರರು ಹಣ ಮಾಡುತ್ತಿದ್ದರು. ಪ್ರಸುತ್ತ ಚಲಾವಣೆಯಲ್ಲಿರುವ ಹೊಸ ನೋಟುಗಳಿಗೆ ಹತ್ತು ಪಟ್ಟು ಹಳೇ ನೋಟು ಕೊಡುವುದಾಗಿ ನಂಬಿಸಿ ವಂಚಿಸುತ್ತಿದ್ದರು. ಅಲ್ಲದೆ ಹಳೆ ನೋಟುಗಳನ್ನು ರಿಸರ್ವ್‌ ಬ್ಯಾಂಕ್‌(Reserve Bank of India) ಮೂಲಕ ಸಕ್ರಮಗೊಳಿಸಿಕೊಳ್ಳಬಹುದು ಎಂದು ನಾಜೂಕಿನಿಂದ ಮಂಕುಬೂದಿ ಎರಚಿ ನಾಗರಿಕರಿಗೆ ಆರೋಪಿಗಳು ಮೋಸ ಮಾಡುತ್ತಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
 

PREV
Read more Articles on
click me!

Recommended Stories

ಕಂದನ ಸ್ನಾನ ಮಾಡಿಸಲು ಹೋದಾಗ ದುರ್ಘಟನೆ, ಗೀಸರ್ ಸೋರಿಕೆಯಿಂದ ತಾಯಿ-ಮಗು ಸಾವು
'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC