ಹವಾಮಾನ ವೈಪರೀತ್ಯ: ತುಟ್ಟಿಯಾದ ಔಷಧೀಯುಕ್ತ ಕುಮುಟಾ ಈರುಳ್ಳಿ!

By Suvarna News  |  First Published May 12, 2024, 10:57 PM IST

ಲಾರಿಗಟ್ಟಲೇ ಗೋವಾ, ಮಹಾರಾಷ್ಟ್ರ, ಕೇರಳ ಭಾಗಕ್ಕೆ ರಪ್ತು ಮಾಡುತ್ತಿದ್ದ ರೈತರು ಇದೀಗ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡಲಾಗದಷ್ಟು ಈರುಳ್ಳಿ ಬೆಳೆ ಕೈಕೊಟ್ಟಿದೆ. ಎಪ್ರಿಲ್, ಮೇ ತಿಂಗಳುಗಳಲ್ಲಿ ಕುಮಟಾದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಾಲಾಗಿ ಕಂಡುಬರುತ್ತಿದ್ದ ಸಿಹಿ ಈರುಳ್ಳಿ ಅಂಗಡಿಗಳನ್ನು ಇದೀಗ ಹುಡುಕಬೇಕಾದ ಸ್ಥಿತಿ ಇದೆ.


ಭರತ್‌ರಾಜ್ ಕಲ್ಲಡ್ಕ

ಉತ್ತರ ಕನ್ನಡ (ಮೇ.12) : ರುಚಿ ರುಚಿಯಾದ ಅಡುಗೆಗೆ ಬೇಕಾದ ಈರುಳ್ಳಿ ಸಿಹಿ ಮತ್ತು ಖಾರ ಎರಡೂ ರುಚಿಗಳಲ್ಲಿ ದೊರೆಯುತ್ತದೆ ಎಂಬುದು ಬಹುತೇಕ ಜನರಿಗೆ ಗೊತ್ತಿಲ್ಲ. ಉತ್ತರ ಕರ್ನಾಟಕ ಸೇರಿದಂತೆ ರಾಜ್ಯದ ಹಲವೆಡೆ ಬೆಳೆಯುವ ಬಹುತೇಕ ಈರುಳ್ಳಿ ಬೆಳೆ ಖಾರವಾಗಿದ್ರೆ, ಉತ್ತರಕನ್ನಡ ಜಿಲ್ಲೆಯ ಕುಮಟಾ ಭಾಗದಲ್ಲಿ ಬೆಳೆಯುವ ಈರುಳ್ಳಿ ಸಿಹಿ ರುಚಿಯನ್ನು ಹೊಂದಿರುತ್ತದೆ. ಕುಮಟಾ ತಾಲೂಕಿನ ರೈತರು ಕಳೆದ ಹಲವು ದಶಕಗಳಿಂದ ಸಿಹಿ ಈರುಳ್ಳಿ ಬೆಳೆಯುತ್ತಾ ಬಂದಿದ್ದು, ಅಪರೂಪದ ಈ ಸಿಹಿ ಈರುಳ್ಳಿಗೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆಯಿದೆ. ಹೀಗಾಗಿ ರೈತರು ಬೇಸಿಗೆಯಲ್ಲಿ ಇದೇ ಈರುಳ್ಳಿಯನ್ನೇ ಪ್ರಮುಖ ಬೆಳೆಯನ್ನಾಗಿ ಬೆಳೆಯುತ್ತಾ ಬಂದಿದ್ದಾರೆ. 

Tap to resize

Latest Videos

undefined

ಇಲ್ಲಿನ ವನ್ನಳ್ಳಿ, ಅಳ್ವೇಕೋಡಿ, ಹಂದಿಗೋಣ ಭಾಗದಲ್ಲಿ ವ್ಯಾಪಕವಾಗಿ ಈ ಸಿಹಿ ಈರುಳ್ಳಿಯನ್ನು ಬೆಳೆಯಲಾಗುತ್ತದೆ. ಪ್ರತಿವರ್ಷ ಉತ್ತಮ ಇಳುವರಿಯೊಂದಿಗೆ ಸಾಕಷ್ಟು ಲಾಭ ತರುತ್ತಿದ್ದ ಸಿಹಿ ಈರುಳ್ಳಿ ಈ ಬಾರಿ ಹೆಚ್ಚಿನ ಇಳುವರಿ ಕಾಣದೇ ಮಂಕಾಗಿದೆ. ಹವಾಮಾನ ವೈಪರೀತ್ಯ, ರೋಗ ಹಾಗೂ ಉಪ್ಪು ನೀರಿನಿಂದಾಗಿ ನಿಗದಿತ ಪ್ರಮಾಣದಲ್ಲಿ ಈರುಳ್ಳಿ ಬೆಳೆದಿಲ್ಲ. ಹೀಗಾಗಿ ಈರುಳ್ಳಿ ದರ ಹೆಚ್ಚಾಗಿದ್ದಯ, 70 ರಿಂದ 80 ರೂ.ಗೆ ಸಿಗುತ್ತಿದ್ದ ಈರುಳ್ಳಿ ಇದೀಗ 120 ರಿಂದ 200ರೂಪಾಯಿಗೆ ಮಾರಾಟವಾಗುತ್ತಿದೆ. ಕರಾವಳಿ ಭಾಗದ ಮನೆ ಮಾತಾಗಿರುವ ಈ ಸಿಹಿಈರುಳ್ಳಿ ಔಷಧಿ ಗುಣವನ್ನೂ ಹೊಂದಿದೆ. ಮನೆಯಲ್ಲಿ ಸುರಕ್ಷಿತವಾಗಿರಿಸಿಕೊಂಡರೆ ಒಂದು ವರ್ಷಗಳ ಕಾಲ ಆಹಾರ ಪದಾರ್ಥಗಳಿಗೆ ಉಪಯೋಗಿಸಬಹುದಾಗಿದೆ. 

ಕಾಫಿನಾಡಲ್ಲಿ ಅನುಮಾಸ್ಪದವಾಗಿ 35 ವರ್ಷದ ಕಾಡಾನೆ ಸಾವು!

ಈ ಬಾರಿ ಹಾವುಸುಳಿ ರೋಗ, ಉಪ್ಪು ನೀರಿನಿಂದ ಇಲ್ಲಿನ ರೈತರು ಇಳುವರಿ ಕೊರತೆ ಎದುರಿಸುವಂತಾಗಿದೆ. ಲಾರಿಗಟ್ಟಲೇ ಗೋವಾ, ಮಹಾರಾಷ್ಟ್ರ, ಕೇರಳ ಭಾಗಕ್ಕೆ ರಪ್ತು ಮಾಡುತ್ತಿದ್ದ ರೈತರು ಇದೀಗ ಸ್ಥಳೀಯ ಮಾರುಕಟ್ಟೆಗೆ ಪೂರೈಕೆ ಮಾಡಲಾಗದಷ್ಟು ಈರುಳ್ಳಿ ಬೆಳೆ ಕೈಕೊಟ್ಟಿದೆ. ಸಾಮಾನ್ಯವಾಗಿ ಪ್ರತೀ ವರ್ಷ ಎಪ್ರಿಲ್, ಮೇ ತಿಂಗಳುಗಳಲ್ಲಿ ಕುಮಟಾದ ರಾಷ್ಟ್ರೀಯ ಹೆದ್ದಾರಿಯುದ್ದಕ್ಕೂ ಸಾಲಾಗಿ ಕಂಡುಬರುತ್ತಿದ್ದ ಸಿಹಿ ಈರುಳ್ಳಿ ಅಂಗಡಿಗಳನ್ನು ಇದೀಗ ಹುಡುಕಬೇಕಾದ ಸ್ಥಿತಿ ಇದೆ. ಆದರೆ ಅಪರೂಪದ ಸಿಹಿ ಈರುಳ್ಳಿ ಎಲ್ಲಿಯೂ ಸಿಗದ ಕಾರಣ ಕೆಲವರು ದರ ಹೆಚ್ಚಾದರೂ ಖರೀದಿ ಮಾಡಿ ಕೊಂಡೊಯ್ಯುತ್ತಿದ್ದಾರೆ. ಇನ್ನು ಕೆಲವರು ದರ ಕೇಳಿ ವಾಪಸ್ಸಾಗುತ್ತಿದ್ದಾರೆ. ವಿಶೇಷ ಗುಣ ಹೊಂದಿರುವ ಈ ಸಿಹಿ ಈರುಳ್ಳಿಗೆ ಸರಕಾರ ಸರಿಯಾದ ಮಾರುಕಟ್ಟೆ ಒದಗಿಸಿಕೊಡುವ ಕೆಲಸ ಮಾಡಿಲ್ಲ. ಹೀಗಾಗಿ ರೈತರು ರಸ್ತೆ ಬದಿಯಲ್ಲಿಟ್ಟು ಮಾರಾಟ ಮಾಡುತ್ತಿದ್ದಾರೆ

click me!