ಅನಧಿಕೃತ ಹೆಚ್ಚುವರಿ ಶುಲ್ಕ ಸಂಗ್ರಹ: ರೈಲ್ವೇಗೆ ನೋಟಿಸ್‌

By Kannadaprabha NewsFirst Published Jan 3, 2020, 8:08 AM IST
Highlights

ಯಲಹಂಕ-ಮೈಸೂರು ನಡುವೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಂದ ಸೂಪರ್‌ ಫಾಸ್ಟ್‌ ಸರ್ಚಾಜ್‌ರ್‍ ಸಂಗ್ರಹಿಸಲಾಗುತ್ತಿದೆ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಆರೋಪಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿ ಮತ್ತು ನೈರುತ್ಯ ರೈಲ್ವೆಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರು(ಜ.03): ಯಲಹಂಕ-ಮೈಸೂರು ನಡುವೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಪ್ರಯಾಣಿಕರಿಂದ ಕಾನೂನು ಬಾಹಿರವಾಗಿ ಸೂಪರ್‌ ಫಾಸ್ಟ್‌ ಸರ್ಚಾರ್ಜ್ (ಹೆಚ್ಚುವರಿ ಶುಲ್ಕ) ಸಂಗ್ರಹಿಸುತ್ತಿರುವ ಆರೋಪಕ್ಕೆ ಸಂಬಂಧಿಸಿದಂತೆ ರೈಲ್ವೆ ಮಂಡಳಿ ಮತ್ತು ನೈರುತ್ಯ ರೈಲ್ವೆಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತಂತೆ ವಕೀಲ ಮೊಹಮ್ಮದ್‌ ದಸ್ತಗೀರ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ಆದೇಶ ಮಾಡಿತು.

ರಂಗೋಲಿ ಚಿತ್ತಾರ ಬಿಡಿಸಿ ಮಹಿಳೆಯರ ಪ್ರತಿಭಟನೆ

ಯಲಹಂಕ-ಮೈಸೂರು ನಡುವೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಪ್ರಯಾಣದ ವೇಳೆ ಪ್ರಯಾಣಿಕರಿಂದ ಸೂಪರ್‌ ಫಾಸ್ಟ್‌ ಸರ್ಚಾಜ್‌ರ್‍ ಸಂಗ್ರಹಿಸಲಾಗುತ್ತಿದೆ. ರೈಲ್ವೆ ಇಲಾಖೆ ಸುತ್ತೋಲೆ ಅನ್ವಯ ಗಂಟೆಗೆ 55 ಕಿ.ಮೀ. ಅಥವಾ ಅದಕ್ಕಿಂತ ಹೆಚ್ಚಿನ ವೇಗದಲ್ಲಿ ಪ್ರಯಾಣಿಸುವ ಸೂಪರ್‌ ಫಾಸ್ಟ್‌ ರೈಲಿನಲ್ಲಿ ಸರ್ಚಾಜ್‌ರ್‍ ಸಂಗ್ರಹಿಸಬೇಕು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಮೈಸೂರು: ಶಿಲಾಯುಗದ ಸಮಾಧಿಗಳು ಪತ್ತೆ

ಅಲ್ಲದೆ, ರೈಲ್ವೆ ಇಲಾಖೆ ಪ್ರಕಟಿಸಿರುವ ವೇಳಾಪಟ್ಟಿಯಂತೆಯೇ ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲು ಗಂಟೆಗೆ 55 ಕಿ.ಮೀ.ಗಿಂತ ಕಡಿಮೆ ವೇಗದಲ್ಲಿ ಸಂಚರಿಸುತ್ತಿದೆ. ಹೀಗಿದ್ದರೂ ಆ ರೈಲಿನ ಪ್ರಯಾಣಿಕರಿಂದ ಸರ್ಚಾಜ್‌ರ್‍ ಸಂಗ್ರಹಿಸುತ್ತಿರುವುದು ಕಾನೂನು ಬಾಹಿರವಾಗಿದೆ. ಈ ಸಂಬಂಧ ರೈಲ್ವೆ ಇಲಾಖೆಗೆ ನೋಟಿಸ್‌ ಜಾರಿ ಮಾಡಿ ವಿವರಣೆ ಕೇಳಲಾಗಿತ್ತು. ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿಸಿರುವ ಅರ್ಜಿದಾರರು, ಮಾಲ್ಗುಡಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಸರ್ಚಾಜ್‌ರ್‍ ಸಂಗ್ರಹಿಸದಂತೆ ರೈಲ್ವೆ ಇಲಾಖೆಗೆ ನಿರ್ದೇಶಿಸಬೇಕೆಂದು ಕೋರಿದ್ದಾರೆ.

click me!