ಕಲ್ಲು ಕ್ವಾರಿಯಲ್ಲಿ ಸ್ಫೋಟ​ಕ್ಕೆ ಬೆಳೆ ಹಾನಿ: ಹಲ​ವ​ರಿಗೆ ಗಾಯ

By Kannadaprabha NewsFirst Published Aug 5, 2021, 12:04 PM IST
Highlights

*  ಕ್ರಷರ್‌ನಿಂದ ಕಲ್ಲು ಗಣಿಗಾರಿಕೆ ಆರಂಭ
* ಯುವಕನ ಕಾಲಿಗೆ ಕಲ್ಲು ಬಿದ್ದು ಗಾಯ
* ಗಣಿಗಾರಿಕೆಯಿಂದ ಬೆಳೆಗಳು ಹಾಳು

ಮರಿಯಮ್ಮನಹಳ್ಳಿ(ಆ.05): ಕ್ವಾರಿಯಲ್ಲಿ ಬುಧ​ವಾರ ಏಕಾ​ಏಕಿ ಕಲ್ಲು ಸ್ಫೋಟಿ​ಸಿ​ದ್ದ​ರಿಂದ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲ​ವರು ಕಲ್ಲು ಬಿದ್ದು ಗಾಯ​ಗೊಂಡರೆ ಬೆಳೆ ಹಾಗೂ ಕೋಳಿ ಫಾರಂ ಶೆಡ್‌ ನೆಲಕ್ಕುರು​ಳಿ​ರುವ ಘಟನೆ ಸಮೀಪದ ಲೋಕಪ್ಪನಹೊಲ(ನಾಣಿಕೆರೆ) ಗ್ರಾಮದ ಬಳಿ ನಡೆದಿದೆ.

ನಿತ್ಯಾನಂದ ಅವರಿಗೆ ಸೇರಿದ ಕ್ರಷರ್‌ನಿಂದ ಸದ್ಯ ಕಲ್ಲು ಆರಂಭವಾಗಿದ್ದು, ಇಲ್ಲಿ ವರೆಗೂ ಸ್ತಬ್ಧವಾಗಿದ್ದ ಬ್ಲಾಸ್ಟಿಂಗ್‌ ಈಗ ದಿಢೀರ್‌ ಆರಂಭ​ವಾ​ಗಿ​ದೆ.

ಲೋಕಪ್ಪನ ಹೊಲ ಗ್ರಾಮ ಬಳಿಯಲ್ಲಿ ಕಲ್ಲು ಗಣಿಗಾರಿಕೆ ನಡೆಸುವುದಲ್ಲದೆ ಬ್ಲಾಸ್ಟಿಂಗ್‌ ಮೂಲಕ ಸುತ್ತಲಿನ ಬೆಳೆ ಹಾನಿಯುಂಟಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೊಲದಲ್ಲಿದ್ದ ಕೋಳಿ ಶೆಡ್‌ ಹಾಗೂ ಆಕಳು ಸಾಕಾಣಿಗೆ ಶೆಡ್‌ ಸಹ ಸಂಪೂರ್ಣ ಹಾಳಾಗಿದೆ. ಬ್ಲಾಸ್ಟಿಂಗ್‌ ರಭಸಕ್ಕೆ ಸುಮಾರು ಒಂದು ಕಿಮೀ ನಷ್ಟುದೂರದವರೆಗೂ ಕಲ್ಲುಗಳು ಹರಡಿವೆ.

ಮಂಡ್ಯ : 11 ಕಲ್ಲು ಗಣಿಗಾರಿಕೆ ರದ್ದು

ತಮ್ಮ ಹೊಲಕ್ಕೆ ತೆರಳಿದ್ದ ಯುವಕನೋರ್ವನ ಕಾಲಿಗೆ ಕಲ್ಲು ಬಿದ್ದು ಗಾಯವಾಗಿದೆ. ಇದೇ ವೇಳೆ ಹೊಲದಲ್ಲಿ ಕೆಲಸದಲ್ಲಿ ತೊಡಗಿದ್ದವರು ಏಕಾಏಕಿ ಆದ ಬ್ಲಾ​ಸ್ಟ್‌ ಶಬ್ದದಿಂದ ದಿಕ್ಕೆಟ್ಟು ಓಡಿದ್ದಾರೆ ಎಂದು ಸ್ಥಳದಲ್ಲೇ ಇದ್ದ ರೈತರು ತಿ​ಳಿ​ಸಿ​ದ​ರು.

ದ ಹಿನ್ನೀರು ಪ್ರದೇಶದಿಂದ ಸಾವಿರಾರು ಎಕರೆ ಜಮೀನಿಗೆ ಹೋಗಿರುವ ವ್ಯಾಸನಕೆರೆ ಏತ ನೀರಾವರಿ ಯೋಜನೆ ಕಾಲುವೆ ಹಾಳಾಗಿದೆ. ಇದಕ್ಕೆಲ್ಲ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ. ತುಂಗಭದ್ರಾ ಹಿನ್ನೀರಿರುವ ವ್ಯಾಪ್ತಿಯಲ್ಲಿ ಐತಿಹಾಸಿಕ ದೇವಾಲಯಗಳಿವೆ. ಸುಮಾರು ವರ್ಷಗಳಿಂದ ಇಲ್ಲದ ಕಲ್ಲು ಗಣಿಗಾರಿಕೆ ದಿಢೀರ್‌ ಆರಂಭವಾಗಿದೆ. ಈ ಗಣಿಗಾರಿಕೆಯಿಂದ ಬೆಳೆಗಳು ಹಾಳಾಗಿವೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 

click me!