ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 5 ಲಕ್ಷ ರುಪಾಯಿ ಮೌಲ್ಯದ ಮದ್ಯವನ್ನು ಸಾಗರದ ತಿರುಮಲ ಬಾರ್‌ನಿಂದ ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ಸಾಗರ(ಮೇ.05): ದೂರಿನ ಹಿನ್ನೆಲೆಯಲ್ಲಿ ಪಟ್ಟಣದ ಬಿ.ಎಚ್.ರಸ್ತೆ ತಿರುಮಲ ವೈನ್ ಸ್ಟೋರ್ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 4.98 ಲಕ್ಷ ರು. ಅಕ್ರಮ ಮದ್ಯ ವಶಕ್ಕೆ ಪಡೆದಿದ್ದಾರೆ.
ಅಬಕಾರಿ ತಂಡ ಪರಿಶೀಲನೆ ನಡೆಸಿದಾಗ ದಾಸ್ತಾನಿಗೂ, ದಾಸ್ತಾನು ಪುಸ್ತಕದಲ್ಲಿರುವ ಭೌತಿಕ ಮದ್ಯದ ದಾಸ್ತಾನಿನ ನಡುವೆ ವ್ಯತ್ಯಾಸ ಕಂಡು ಬಂದಿತ್ತು. ಮಾ. 23ರಂದು ಕೆಎಸ್‌ಬಿಸಿಎಲ್‌ನಿಂದ ತಿರುಮಲ ವೈನ್ಸ್‌ನವರು 1048.90 ಲೀ ಮದ್ಯ, 448.200 ಲೀ ಬೀಯರ್ ಖರೀದಿಸಿದ್ದು, ದಾಖಲೆ ಪರಿಶೀಲನೆ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿದು ಬಂದಿದೆ.
ಮದ್ಯ ಈಗ ಮತ್ತಷ್ಟು ಕಹಿ: ನಷ್ಟ ಭರಿಸಲು ಎಣ್ಣೆ ಮೇಲೆ ಶೇ.70ರಷ್ಟು ಹೆಚ್ಚು ತೆರಿಗೆ!
ಈ ಹಿನ್ನೆಲೆಯಲ್ಲಿ ಭಾನುವಾರ ಅಬಕಾರಿ ರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಂಗಡಿ ಸನ್ನದುದಾರ ರಾಜಪ್ಪ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಂಗಡಿಯಲ್ಲಿದ್ದ ಪ್ರವೀಣ್ ಎಂಬುವವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಅಂಗಡಿಯಲ್ಲಿದ್ದ 222.04 ಲೀಟರ್ ಬೀಯರ್, 788.47 ಲೀ. ಮದ್ಯ ವಶಕ್ಕೆ ಪಡೆಯಲಾಗಿದೆ.
ಅಬಕಾರಿ ಉಪ ಆಯುಕ್ತರಾದ ಕ್ಯಾಪ್ಟನ್ ಅಜಿತ್ ಕುಮಾರ್, ಸಾಗರ ಅಬ್ಕಾರಿ ನಿರೀಕ್ಷಕ ಸತೀಶ್ ಎನ್., ಸಿಬ್ಬಂದಿ ಗುರುಮೂರ್ತಿ, ಮುದಾಸಿರ್, ದೀಪಕ್, ಮಹಾಬಲೇಶ್, ಕನ್ನಯ್ಯ ಇನ್ನಿತರರು ದಾಳಿಯಲ್ಲಿದ್ದರು.