
ಬೀದರ್(ಏ.18): ತಾಲೂಕಿನ ಮಮದಾಪುರ ತಾಂಡಾದ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ಇತ್ತೀಚೆಗೆ ಸಾಮೂಹಿಕ ದಾಳಿ 300 ಲೀಟರ್ ಬೆಲ್ಲದ ಕೊಳೆ ಹಾಗೂ 10 ಲೀಟರ್ ಕಳ್ಳಭಟ್ಟಿ ಸಾರಾಯಿ ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಆರೋಪಿಯ ವಿರುದ್ಧ ಅಬಕಾರಿ ನಿರೀಕ್ಷಕರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಒಂದು ಬಾಟಲ್ ಕಳ್ಳಭಟ್ಟಿಗೆ 350 ರು:
ಜಿಲ್ಲೆಯ ಬಾಲ್ಕಿ ಪಟ್ಟಣದ ಚರಂಡಿಯಲ್ಲಿ ಸಾರಾಯಿ ಬಾಟಲ್ ಇಟ್ಟು ಅಬಕಾರಿ ಅಧಿಕಾರಿಗಳು ಪೊಲೀಸರ ಕಣ್ತಪ್ಪಿಸಿ ಮಹಿಳೆ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿರುವುದು ಬೆಂಕಿಗೆ ಬಂದಿದೆ.
'ಕುಡುಕರು ಮನುಷ್ಯರಲ್ವಾ?: ಮದ್ಯ ಮಾರಾಟ ಆರಂಭಿಸಿದ್ರೆ ತಪ್ಪೇನಿಲ್ಲ'
ಮದ್ಯ ಪ್ರಿಯರಿಗೆ ಲಾಕ್‌ಡೌನ್ ನಡುವೆ ಕಳ್ಳಭಟ್ಟಿಯನ್ನು ಒಂದು ಬಾಟಲ್‌ಗೆ 350 ರು. ಗೆ ಮಾರಾಟ ಮಾಡಲಾಗುತ್ತಿದೆ ಎಂಬ ವಿಷಯ ಅರಿತು ಗ್ರಾಹನ ಸೋಗಿನಲ್ಲಿ ಹೋದವರಿಬ್ಬರು(ಹೆಸರು ಹೇಳಲಿಚ್ಚಿಸಿಲ್ಲ) ಅಲ್ಲಿನ ಜೋಶಿ ನಗರದ ಮನೆಯೊಂದರಲ್ಲಿ ಈ ವ್ಯಾಪಾರ ನಡೆಯುತ್ತಿರುವುದನ್ನು ಬಯಲಿಗೆಳೆದಿದ್ದಾರೆ.