ಸುಂದರಿ ಮಾತಿಗೆ ಮರುಳಾಗಿ ಬೆತ್ತಲಾದ : 10 ಲಕ್ಷ ಕಳೆದುಕೊಂಡ ಮಾಜಿ ಸೈನಿಕ!

By Kannadaprabha News  |  First Published Oct 16, 2022, 5:43 AM IST

ವಿಡಿಯೋ ಕಾಲ್‌ ಮಾಡಿ ಬೆತ್ತಲಾಗುವಂತೆ ಹೇಳಿದ ಸುಂದರಿಯೊಬ್ಬಳ ಮಾತಿಗೆ ಮರುಳಾದ ಮಾಜಿ ಸೈನಿಕನೊಬ್ಬ ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದು, ಇದೀಗ ವಂಚಕರ ಜಾಲ ಪತ್ತೆಗೆ ಸೈಬರ್‌ ಠಾಣೆ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.


  ಚಿಕ್ಕಬಳ್ಳಾಪುರ (ಅ.16):  ವಿಡಿಯೋ ಕಾಲ್‌ ಮಾಡಿ ಬೆತ್ತಲಾಗುವಂತೆ ಹೇಳಿದ ಸುಂದರಿಯೊಬ್ಬಳ ಮಾತಿಗೆ ಮರುಳಾದ ಮಾಜಿ ಸೈನಿಕನೊಬ್ಬ ವಿಡಿಯೋ ಕಾಲ್‌ನಲ್ಲಿ ಬೆತ್ತಲಾಗಿ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನು ಕಳೆದುಕೊಂಡಿದ್ದು, ಇದೀಗ ವಂಚಕರ ಜಾಲ ಪತ್ತೆಗೆ ಸೈಬರ್‌ ಠಾಣೆ ಪೊಲೀಸರಿಗೆ ದೂರು ನೀಡಿರುವ ಪ್ರಕರಣ ಜಿಲ್ಲಾ ಕೇಂದ್ರದಲ್ಲಿ ನಡೆದಿದೆ.

ಹಣ ಕಳೆದುಕೊಂಡ ವ್ಯಕ್ತಿ ಚಿಕ್ಕಬಳ್ಳಾಪುರ (Chikkaballapura)  ನಗರದ ಕೆಳಗಿನ ತೋಟದ ನಿವಾಸಿ ಎಸ್‌.ಎನ್‌.ಅಶ್ವತ್ಥ ನಾರಾಯಣಚಾರಿ (59) ಎಂಬ ಮಾಜಿ ಯೋಧ. ಇವರು ಹಾಲಿ ಚಿಕ್ಕಬಳ್ಳಾಪುರದ ಎಸ್‌ಬಿಐ ಬ್ಯಾಂಕ್‌ನಲ್ಲಿ (SBI Bank)  ಸೀನಿಯರ್‌ ಹೆಡ್‌ ಆರ್ಮರ್‌ ಗಾರ್ಡ್‌ ಕೆಲಸ ನಿರ್ವಹಿಸುತ್ತಿದ್ದಾರೆ.

Tap to resize

Latest Videos

ಅ.1 ರಂದು ರಾತ್ರಿ ಸುಮಾರು 9 ಗಂಟೆ ಸಮಯದಲ್ಲಿ ಬ್ಯಾಂಕ್‌ ಕರ್ತವ್ಯದಲ್ಲಿ ಇದ್ದಾಗ 9127575055 ಮೊಬೈಲ್‌ ನಂಬರ್‌ರಿಂದ ವಿಡಿಯೋ ಕಾಲ್‌ ಬಂದಿದೆ. ಆಗ ರೀಸಿವ್‌ ಮಾಡಿದಾಗ ಅಪರಿಚಿತ ಮಹಿಳೆ ಮಾತನಾಡಿದ್ದಾಳೆ. ಆಗ ಆಕೆ ತನ್ನ ಮೈಮೇಲಿನ ಬಟ್ಟೆಬಿಚ್ಚಿ ಬೆತ್ತಲಾಗಿ ಅಶ್ವತ್ಥನಾರಾಯಣಚಾರಿಗೂ ಬಟ್ಟೆಬಿಚ್ಚುವಂತೆ ಹೇಳಿದ್ದಾಳೆ. ಆಕೆಯ ಮಾತು ನಂಬಿದ ಮಾಜಿ ಸೈನಿಕ ಆಕೆ ಹೇಳಿದಂತೆ ಮಾಡಿದ್ದಾನೆ. ಸುಮಾರು 5 ನಿಮಿಷಗಳ ಕಾಲ ಆಕೆಯೊಂದಿಗೆ ಮಾತನಾಡಿದ್ದಾನೆ.

ಬಂಧಿಸುತ್ತೇವೆಂದು ಬೆದರಿಕೆ

ಅ.3 ರಂದು ಪುನಃ ಯಾರೋ ಅಪರಿಚಿತರು ನಾವು ಕೇಂದ್ರ ಅಪರಾಧ ದಳದಿಂದ ಮಾತನಾಡುತ್ತಿದ್ದೇವೆ. ನಿಮ್ಮ ಅಶ್ಲೀಲ ವಿಡಿಯೋ ಮೀಡಿಯಾದಲ್ಲಿ ಬರುತ್ತಿದೆ. ಮೊದಲು ಅದನ್ನು ಡೀಲಿಟ್‌ ಮಾಡಿಸಿ ಇಲ್ಲ ಅಂದರೆ ನಿಮ್ಮ ವಿರುದ್ದ ಎಫ್‌ಐಆರ್‌ ದಾಖಲಿಸಿ ಬಂಧಿಸುತ್ತೇವೆಂದು ಎಚ್ಚರಿಕೆ ನೀಡಿ ಮೀಡಿಯಾ ನಂಬರ್‌ ಸಹ ಅವರೇ ಕೊಟ್ಟಿದ್ದಾರೆ. ಇದನ್ನು ನಂಬಿದ ಮಾಜಿ ಸೈನಿಕ ಆತ ಕೊಟ್ಟನಂಬರ್‌ಗೆ ಪೋನ್‌ ಮಾಡಿದಾಗ ನಿಮ್ಮ ವಿಡಿಯೋ ಡೀಲಿಟ್‌ ಮಾಡಲಿಕ್ಕೆ 2,51,550 ರು ಕಳಿಸಿದರೆ ಮಾತ್ರ ಮಾಡುವುದಾಗಿ ಹೇಳಿದ್ದಾರೆ. ಮಾನ ಮರ್ಯಾದೆಗೆ ಅಂಜಿದ ಅಶ್ವತ್ಥನಾರಾಯಣಚಾರಿ ತನ್ನ ಬ್ಯಾಂಕ್‌ ಖಾತೆಗೆ 51,550 ರು. ವರ್ಗಾಯಿಸಿ ಉಳಿದ ಹಣವನ್ನು ಸ್ನೇಹಿತರ ಫೋನ್‌ ಫೇ ಮುಖಾಂತರ ಕಳಿಸಿದ್ದಾನೆ.

ಇನ್ನೊಮ್ಮೆ ಫೋನ್‌ ಮಾಡಿದ ವಂಚಕರು, ಆ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿನ್ನ ಮೇಲೆ ಎಫ್‌ಐಆರ್‌ ದಾಖಲಾಗಿದೆ. 10 ಲಕ್ಷ ಕೊಡದೇ ಹೋದರೆ ಬಂಧಿಸುತ್ತೇವೆಂದು ಬೆದರಿಕೆ ಹಾಕಿದ್ದಾರೆ. ಹೀಗೆ ಒಂದಲ್ಲ ಒಂದು ರೀತಿ ಪುನಃ ಪುನಃ ಆನ್‌ಲೈನ್‌ ವಂಚಕರು ಪೋನ್‌ ಮಾಡಿ ಅಶ್ವತ್ಥನಾರಾಯಣಚಾರಿಗೆ ವಿಡಿಯೋ ಡೀಲಿಟ್‌ ಮಾಡುವ ನೆಪದಲ್ಲಿ ಒಟ್ಟು 10,19,050 ರುಗಳನ್ನು ಪಡೆದಿದ್ದಾರೆ. ಕೊನೆಗೆ ವಂಚಕರ ಬೆದರಿಕೆಗಳಿಗೆ ಬೆಂಡಾಗಿ ಹಣ ಕಟ್ಟಲಾಗದೇ ಅಶ್ವತ್ಥನಾರಾಯಣಚಾರಿ ಜಿಲ್ಲಾ ಕೇಂದ್ರದಲ್ಲಿರುವ ಸೈಬರ್‌ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

11 ಲಕ್ಷ ಪಂಗನಾಮ 

ಚಿಕ್ಕಬಳ್ಳಾಪುರ : ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆಯೆಂದು ನಂಬಿದ ಕೊರಿಯರ್‌ ಕಂಪನಿ ಉದ್ಯೋಗಿಗೆ ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ವಂಚಕರು ಒಂದಲ್ಲ ಎರಡಲ್ಲ ಬರೋಬ್ಬರಿ 11 ಲಕ್ಷ ರು, ಹಣವನ್ನು ಪಡೆದು ವಂಚಿಸಿರುವ ಘಟನೆ ನಡೆದಿದೆ.

ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕಿ ಮೋಸದ ವ್ಯಕ್ತಿಯನ್ನು ಚಿಕ್ಕಬಳ್ಳಾಪುರ ತಾಲೂಕಿನ ಹೊಸಹುಡ್ಯ ಗ್ರಾಮದ ನಿವಾಸಿ ದೇವನಹಳ್ಳಿಯಲ್ಲಿ ಡಿಲವರಿ ಕಾಂ ಕೊರಿಯರ್‌ ಕಂಪನಿಯಲ್ಲಿ ಕೆಲಸ ಮಾಡುವ ಮಹೇಶ್‌ (23) ಎಂದು ಗುರುತಿಸಲಾಗಿದೆ.

ಮಹೇಶ್‌ ಮೊಬೈಲ್‌ನಲ್ಲಿ ಸಚ್‌ರ್‍ ಮಾಡುವಾಗ ಟೆಲಿಗ್ರಾಂ ಸಾಮಾಜಿಕ ಜಾಲತಾಣದಲ್ಲಿ ವರ್ಕ ಫ್ರಂ ಹೋಂ ಅಂತ ಅಮೇಜಾನ್‌ ಇ ಕಾಮರ್ಸನಲ್ಲಿ ಐಟಂ ಗಳ ಮೇಲೆ ಹೂಡಿಕೆಯನ್ನು ಮಾಡಿದರೆ ನಿಮಗೆ ಉತ್ತಮ ಲಾಭ/ರಿಟರ್ನಸ್‌ ಬರುತ್ತದೆಂಬ ಸಂದೇಶ ನಂಬಿದ ಮಹೇಶ್‌ ವ್ಯಾಟ್ಸಾಪ್‌ ನಂಬರ್‌ 9860296816 ಮೂಲಕ ಕಾಂಟ್ಯಾಕ್ಟ… ಮಾಡಿದಾಗ ಅವರು ರಿಜಿಸ್ಪ್ರೇಷನ್‌ ಪೀ ಅಂತ 500 ರು, ಕಟ್ಟಿಸಿಕೊಂಡಿದ್ದಾರೆ.

ಒಮ್ಮೆ ಸಣ್ಣ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಿದ್ದು ಅದಕ್ಕೆ ಹಣ ಕೂಡ ಬಂದಿದೆ. ಇದೇ ರೀತಿ ಮಹೇಶ್‌ 3,86,893 ಹೂಡಿಕೆ ಮಾಡಿದಾಗ ಆತನ ಖಾತೆಗೆ 4,31,543 ಬಂದ ರೀತಿ ತೋರಿಸಿದೆ. ಆಗ ಡ್ರಾ ಮಾಡುವುದು ಬೇಡ ಅಂತ ಪುನಃ ಪುನಃ ಹೂಡಿಕೆ ಮಾಡಿದ್ದಾರೆ. ಆದರೆ ಆತನ ಬ್ಯಾಂಕ್‌ ಖಾತೆಗೆ ಕಮಿಷನ್‌ ಹಣ ಬಂದಹಾಗೆ ತೋರಿಸಿ ಮಹೇಶ್‌ನಿಂದ ಬರೋಬ್ಬರಿ 11,71,313 ರು, ಪಡೆದು ಅಮೆಜಾನ್‌ ಕಂಪನಿ ಹೆಸರಲ್ಲಿ ಆನ್‌ಲೈನ್‌ ವಂಚಕರು ಮೋಸ ಮಾಡಿದ್ದಾರೆ. ಈ ಕುರಿತು ಜಿಲ್ಲಾ ಸೈಬರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

click me!