ಹಿರಿಯ ರಾಜಕೀಯ ಪಟು ಖಂಡ್ರೆ ಬಿಜೆಪಿಗೆ

By Kannadaprabha NewsFirst Published Apr 11, 2021, 8:48 AM IST
Highlights

ಹಿರಿಯ ರಾಜಕಾರಣಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ. ತಮ್ಮ ಬೆಂಬಲಿಗರೊಂದಿಗೆ ಇಂದು ಅಧಿಕೃತವಾಗಿ ಕಮಲ ಪಾಳಯಕ್ಕೆ ಸೇರ್ಪಡೆಯಾಗಲಿದ್ದಾರೆ

ಬೀದರ್‌ (ಏ.11): ಜಿಲ್ಲೆಯ ಹಿರಿಯ ರಾಜಕೀಯ ಪಟು, ಕೆಲ ವರ್ಷಗಳ ಹಿಂದಷ್ಟೇ ಬಿಜೆಪಿ ತ್ಯಜಿಸಿ ಜೆಡಿಎಸ್‌ ಸೇರಿದ್ದ ಭಾಲ್ಕಿಯ ಮಾಜಿ ಶಾಸಕ ಪ್ರಕಾಶ ಖಂಡ್ರೆ ಘರ್‌ ವಾಪಸಿ ಆಗಿದ್ದು, ಇಂದು ಬೆಳಗ್ಗೆ 11ರ ಸುಮಾರಿಗೆ ಅವರ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗಲಿದ್ದಾರೆ.

ಬಸವಕಲ್ಯಾಣ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಠಿಕಾಣಿ ಹೂಡಿರುವ ಕಮಲ ಪಾಳಯದ ಸಚಿವ ವಿ.ಸೋಮಣ್ಣ, ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ ಅವರ ತಡರಾತ್ರಿಯ ಸಂಧಾನ ಯಶಸ್ವಿಯಾಗಿದೆ. 

ಬಿಜೆಪಿಗೂ ಭೀತಿ - ಕೈಗೆ ಕಂಟಕ : ಇದರಲ್ಲಡಗಿದೆ ಚುನಾವಣಾ ಭವಿಷ್ಯ .

ಪ್ರಕಾಶ ಖಂಡ್ರೆ ಬಿಜೆಪಿಗೆ ವಾಪಸ್ಸಾಗುತ್ತಿರುವ ಸುದ್ದಿ ಹಲವರ ನಿದ್ದೆಗೆಡಿಸಿದೆ. ಕಳೆದ 2018ರ ಏಪ್ರಿಲ್‌ ತಿಂಗಳಲ್ಲಿ ಭಾಲ್ಕಿ ಬಿಜೆಪಿ ಟಿಕೆಟ್‌ ವಂಚಿತರಾಗಿ ಪಕ್ಷದಿಂದ ಮುನಿಸಿಕೊಂಡು ಜೆಡಿಎಸ್‌ ಸೇರಿದ್ದರು. ಇದೀಗ ಇವರ ಬಿಜೆಪಿ ಸೇರ್ಪಡೆಯಿಂದ ಬಸವಕಲ್ಯಾಣ ಕ್ಷೇತ್ರದ ಉಪಚುನಾ​ವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶರಣು ಸಲಗರ ಅವರಿಗೆ ನೆರವಾಗಲಿದೆ ಎಂಬ ರಾಜ​ಕೀಯ ಲೆಕ್ಕಾ​ಚಾರ ಹಾಕ​ಲಾ​ಗಿದೆ.

click me!