ಪ್ರಾಣ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಾಜಿ ಶಾಸಕರ ಪಿಎ ಓರ್ವರನ್ನು ಅರೆಸ್ಟ್ ಮಾಡಲಾಗಿದೆ.
ಹರಪನಹಳ್ಳಿ [ಸೆ.16]: ಅವಾಚ್ಯ ಶಬ್ದಗಳಿಂದ ಬೈದು , ಕರ್ತವ್ಯಕ್ಕೆ ಅಡ್ಡಿ ಪಡಿಸಿದ ಆರೋಪದ ಮೇಲೆ ಇಲ್ಲಿಯ ಕಾಂಗ್ರೆಸ್ ಯುವ ಮುಖಂಡ, ಮಾಜಿ ಶಾಸಕರ ಪಿ.ಎ ಇರ್ಫಾನ್ ಮುದುಗಲ್‌ರನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ ಘಟನೆ ಭಾನುವಾರ ನಡೆದಿದೆ. ಆರೋಪಿ ಇರ್ಪಾನ್ ಮಧ್ಯರಾತ್ರಿ ಕುಡಿದ ಅಮಲಿನಲ್ಲಿ ಪೊಲೀಸರಿಗೆ ಅವಾಜ್ ಹಾಕಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೇ, ಅವಾಚ್ಯ ಶಬ್ದಗಳಿಂದ ಪೊಲೀಸರಿಗೆ ನಿಂಧಿಸಿ ಪ್ರಾಣ ಬೆದರಿಗೆ ಹಾಕಿದ್ದಾರೆಂದು ಆರೋಪಿಸಲಾಗಿದೆ.
ಪಟ್ಟಣದ ಪ್ರವಾಸಿ ಮಂದಿರ ವೃತ್ತದ ಬಳಿ ಭಾನುವಾರ ರಾತ್ರಿ 1 ಗಂಟೆ ವೇಳೆ ಗಸ್ತು ಮಾಡುತ್ತಿದ್ದ ಪೊಲೀಸರೊಂದಿಗೆ ಇರ್ಫಾನ್ ಮುದುಗಲ್ ಮಧ್ಯ ಮಾತಿನ ಚಕಮಕಿ ಜರುಗಿದೆ. ಬುದ್ದಿವಾದ ಹೇಳಿ ಮನೆಗೆ ತೆರಳುವಂತೆ ಪೊಲೀಸರು ತಿಳಿಸಿದ್ದರೂ ಇದನ್ನು ಲೆಕ್ಕಿಸದೇ ತಿರುಗಿಬಿದ್ದು ವಾಕಿ ಟಾಕಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಬೇಸತ್ತ ಪೊಲೀಸರು ಠಾಣೆಗೆ ಕರೆದು ಕೊಂಡು ಹೋಗಿ ದೂರು ದಾಖಲು ಮಾಡಿದ್ದಾರೆ.
undefined
ರಾಜಕೀಯ ದುರುದ್ದೇಶ
ಈ ಬಗ್ಗೆ ಇರ್ಫಾನ್ ಮುದುಗಲ್ ಪ್ರತಿಕ್ರಿಯೆ, ನೀಡಿ ರಾಜಕೀಯ ದುರುದ್ದೇಶದ ಸೇಡಿನ ರಾಜಕಾರಣಕ್ಕೆ ಬಲಿಪಶುವಾಗಿದ್ದೇನೆ. ಪೊಲೀಸರ ಮೇಲೆ ಹಲ್ಲೇ ಮಾಡುವಷ್ಟುಕಾನೂನು ತಿಳಿವಳಿಕೆ ಇಲ್ಲದ ವ್ಯಕ್ತಿ ನಾನಲ್ಲ. ಆದರೂ ಕಾನೂನು ರೀತಿ ಹೋರಾಟ ಮಾಡಿ ನ್ಯಾಯ ಪಡೆಯುತ್ತೇನೆ ಎಂದು ಹೇಳಿದರು.