ದತ್ತಪೀಠವು ನೂರಕ್ಕೆ ನೂರು ಹಿಂದು ದೇವಾಲಯವೇ, ದತ್ತಪೀಠಕ್ಕೂ ಒಂದು ದಿನ ಜಯವಾಗುತ್ತೆ ಎಂದು ಮಾಜಿ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ. ಜ್ಞಾನವ್ಯಾಪಿ ಮಸೀದಿ ಕುರಿತು ನ್ಯಾಯಾಲಯದ ಆದೇಶ ಹೊರಬಿದ್ದ ಸಂಬಂಧ ಪ್ರತಿಕ್ರಿಯೆ ನೀಡಿದರು.
ಚಿಕ್ಕಮಗಳೂರು (ಫೆ.01): ದತ್ತಪೀಠವು ನೂರಕ್ಕೆ ನೂರು ಹಿಂದು ದೇವಾಲಯವೇ, ದತ್ತಪೀಠಕ್ಕೂ ಒಂದು ದಿನ ಜಯವಾಗುತ್ತೆ ಎಂದು ಮಾಜಿ ಸಚಿವ ಸಿ.ಟಿ. ರವಿ ಅವರು ಹೇಳಿದ್ದಾರೆ. ಜ್ಞಾನವ್ಯಾಪಿ ಮಸೀದಿ ಕುರಿತು ನ್ಯಾಯಾಲಯದ ಆದೇಶ ಹೊರಬಿದ್ದ ಸಂಬಂಧ ಪ್ರತಿಕ್ರಿಯೆ ನೀಡಿದ ಅವರು, ಇಲ್ಲಿನ ದತ್ತಪೀಠದ ಅಕ್ರಮ ಘೋರಿ ಸ್ಥಳಾಂತರವಾಗುತ್ತೆ ಎಂಬ ವಿಶ್ವಾಸ ಇದೆ ಎಂದರು. ಜ್ಞಾನವ್ಯಾಪಿ ಮಸೀದಿ ಅದು ಹಿಂದೂ ದೇವಾಲಯವಾಗಿತ್ತು, ಪಾಪಿಗಳು, ಮತಾಂತರ ಹಿಂದೂ ದೇವಾಲಯವನ್ನು ಒಡೆದು, 42,000 ಹಿಂದೂ ದೇವಾಲಯ ನಾಶ ಮಾಡಿದ್ದಾರೆ.
ಈ ಬಗ್ಗೆ ಸೀತಾರಾಮ್ ಗೋಯಲ್ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ ಎಂದು ಹೇಳಿದರು. ನಾನು ಹಿಂದೂ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ತನ್ನ ನಿಲುವು ಹೇಳಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ನಿಲುವು ಸ್ಪಷ್ಟಪಡಿಸಬೇಕು, ಮತಾಂಧ ಔರಂಗಜೇಬ್ ಜೊತೆ ಕಾಂಗ್ರೆಸ್ ಗುರುತಿಸಿಕೊಳ್ಳುತ್ತೋ, ಶಿವ ಭಕ್ತರ ಜೊತೆ ಗುರುತಿಸಿ ಕೊಳ್ಳುತೋ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಸತ್ಯ ಎಂದಿಗೂ ಜಯ, ಸತ್ಯ ಸೋಲಲೂ ಸಾಧ್ಯವಿಲ್ಲ, ಸತ್ಯ ಯಾವಾಗಲೂ ಜಯಿಸಲೇಬೇಕು, ಅದು ಜಗದ ನಿಯಮ. ಸತ್ಯ ಹಾಗೂ ಧರ್ಮದ ಪರವಾಗಿ ಪಾಂಡವರು ಗೆದ್ದಿದ್ದಾರೆ ಎಂದರು.
undefined
ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಲು ಅವಕಾಶ ದೊರೆತಿರುವುದು ಪುಣ್ಯದ ಫಲ: ಮಧು ಬಂಗಾರಪ್ಪ
ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮವಾಗಲಿ: ಧ್ವಜ ತೆಗೆದ ಸರ್ಕಾರ ರಾಜಕೀಯವಾಗಿ ಭಸ್ಮವಾಗಬೇಕು. ಹನುಮನನ್ನು ಕೆಣಕಿ ಯಾರಾದರೂ ಉಳಿದಿದ್ದಾರಾ? ಅದೇ ರೀತಿ ಈ ಕಾಂಗ್ರೆಸ್ ಸರ್ಕಾರವೂ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಭವಿಷ್ಯ ನುಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಕೆರಗೋಡಿನಿಂದ ಆಗಮಿಸಿದ ಪಾದಯಾತ್ರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಹನುಮ ಜನಿಸಿದ ನಾಡು ಕರ್ನಾಟಕ. ಈ ನಾಡಿನಲ್ಲಿ ಹನುಮ ಧ್ವಜ ಹಾರಿಸುವುದು ಅಪರಾಧವೇ? ಆದರೆ, ಕಾಂಗ್ರೆಸ್ ಸರ್ಕಾರ ಅದು ಅಪರಾಧ ಎಂದು ಭಾವಿಸಿದೆ.
ಮೋದಿಯನ್ನು ಪ್ರಧಾನಿ ಮಾಡಲು ಸಂಕಲ್ಪ ಮಾಡೋಣ: ಎಂಟಿಬಿ ನಾಗರಾಜ್
ಇನ್ನು ಮುಂದೆ ನಾವು ಊರು, ಊರಿನಲ್ಲಿ, ಮನೆ-ಮನೆಯಲ್ಲೂ ಹನುಮ ಧ್ವಜ ಹಾರಿಸುತ್ತೇವೆ. ನಿಮಗೆ ತಾಕತ್ತಿದ್ದರೆ ತೆಗೆದು ನೋಡಿ. ನೀವು ಉಳಿಯುತ್ತಿರೋ, ಹನುಮ ಭಕ್ತರು ಉಳಿಯುತ್ತಾರೋ ನೊಡೋಣ ಎಂದು ಸರ್ಕಾರಕ್ಕೆ ಸವಾಲು ಹಾಕಿದರು. ಶಾಂತಿ ಸಂಧಾನಕ್ಕೆ ಲಂಕೆಗೆ ಹೋಗಿದ್ದ ಹನುಮನ ಬಾಲಕ್ಕೆ ಬೆಂಕಿ ಹಾಕಿದರು. ಪರಿಣಾಮ ಲಂಕಾ ದಹನವಾಯಿತು. ಹನುಮನನ್ನು ಕೆಣಕಿದ ಕಾಂಗ್ರೆಸ್ ಸರ್ಕಾರವೂ ಆದಷ್ಟು ಬೇಗ ಆಹುತಿಯಾಗಲಿದೆ. ಸಿದ್ದರಾಮಯ್ಯನವರ ಹೆಸರಿನಲ್ಲಿ ರಾಮ ಇರಬಹುದು. ಆದರೆ, ಅವರೊಳಗೆ ರಾಮಭಕ್ತಿ ಇಲ್ಲ. ಸದಾಕಾಲ ತಾವು ರಾಮ ವಿರೋಧಿ ಎನ್ನುವುದನ್ನು ಸಾಬೀತುಪಡಿಸಿಕೊಳ್ಳುತ್ತಿದ್ದಾರೆ ಎಂದು ಚುಚ್ಚಿದರು.