ಗ್ರಾಮ ಪಂಚಾಯ್ತಿ ಚುನಾವಣೆ: ಒಂದಕ್ಕೆ ಬಟನ್‌ ಒತ್ತಿದ್ರೆ ಇಬ್ಬರಿಗೆ ಮತ

Kannadaprabha News   | Asianet News
Published : Dec 28, 2020, 09:18 AM IST
ಗ್ರಾಮ ಪಂಚಾಯ್ತಿ ಚುನಾವಣೆ: ಒಂದಕ್ಕೆ ಬಟನ್‌ ಒತ್ತಿದ್ರೆ ಇಬ್ಬರಿಗೆ ಮತ

ಸಾರಾಂಶ

ಗ್ರಾಮದ 2 ಬೂತ್‌ಗಳ ಪೈಕಿ ಒಂದು ಮತಕೇಂದ್ರದಲ್ಲಿ ಕೈಕೊಟ್ಟ ಮತಯಂತ್ರ| ಮತಯಂತ್ರ ಕ್ರಮ ಸಂಖ್ಯೆ -6 ಬಟನ್‌ ಒತ್ತಿದರೆ ಬೇರೆ ಚಿಹ್ನೆಗೂ ಹೋದ ಮತ| ಮತದಾನ ಸ್ಥಗಿತಗೊಳಿಸಿದ ಗ್ರಾಮಸ್ಥರು| 

ಬೀದರ್‌(ಡಿ.28): ತಾಲೂಕಿನ ಕಪಲಾಪೂರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಪಲಾಪೂರ (ಎ) ಗ್ರಾಮದ ಮತಗಟ್ಟೆ ಸಂಖ್ಯೆ-01 ರಲ್ಲಿ ಮತಯಂತ್ರದಲ್ಲಿನ ಅಚ್ಚರಿಯ ದೋಷದ ಆರೋಪದಿಂದಾಗಿ ಮತದಾನ ಕೆಲಕಾಲ ಸ್ಥಗಿತಗೊಂಡಿತ್ತು.

ಗ್ರಾಮದ 2 ಬೂತ್‌ಗಳ ಪೈಕಿ ಒಂದು ಮತಕೇಂದ್ರದಲ್ಲಿ ಮತಯಂತ್ರ ಕೈಕೊಟ್ಟಿತು. ಅಷ್ಟೇ ಅಲ್ಲ ಮತಯಂತ್ರ ಕ್ರಮ ಸಂಖ್ಯೆ -6 ಬಟನ್‌ ಒತ್ತಿದರೆ ಬೇರೆ ಚಿಹ್ನೆಗೂ ಹೋಗುತ್ತಿದೆ ಎಂದು ಮತದಾರರೊಬ್ಬರು ಮತದಾನದ ಸಂದರ್ಭ ಮತಯಂತ್ರದ ವಿಡಿಯೋ ಮಾಡಿ ಇಬ್ಬರಿಗೆ ಮತ ಬೀಳುವ ಕೆಂಪು ದೀಪಗಳು ಉರಿಯುವುದನ್ನು ತೋರಿಸಿದ್ದಾರೆ. 

ಗ್ರಾಪಂ ಮೀಸಲಾತಿ ಪ್ರಕಟಿಸದಿದ್ರೆ ಚುನಾವಣೆ ಏಕೆ?

ಇದನ್ನು ಗಮಿಸಿದ ಗ್ರಾಮಸ್ಥರು ಮತದಾನ ಸ್ಥಗಿತಗೊಳಿಸಿ, ಮತಯಂತ್ರ ಬಲಾಯಿಸುವಂತೆ ಆಗ್ರಹಿಸಿದ್ದರು ಎನ್ನಲಾಗಿದೆ. ಅಲ್ಲದೇ ಈ ವಿಡಿಯೋ ವೈರಲ್‌ ಆಗಿದೆ.
 

PREV
click me!

Recommended Stories

ಡಿವೈಡರ್‌ನಿಂದ ಹಾರಿ KSRTC ಬಸ್‌ಗೆ ಡಿಕ್ಕಿಯಾದ ಕಾರ್, ಮೂರು ಸಾವು ಚೆಲ್ಲಾಪಿಲ್ಲಿಯಾದ ಮೃತದೇಹಗಳು
ಸರ್ಕಾರಿ ಶಾಲೆ ಟಾಯ್ಲೆಟ್‌ ಸ್ವಚ್ಛತೆಗೆ ಉದ್ಯಮಿ ನೆರವು