ನಾನು, ಡಿಕೆಶಿ ನೊಣವಿನಕೆರೆ ಮಠದ ಭಕ್ತರು: ಸೋಮಣ್ಣ

By Kannadaprabha NewsFirst Published May 15, 2023, 5:35 AM IST
Highlights

ನಾನು ನೋಣವಿನಕೆರೆ ಕಾಡಸಿದ್ದೇಶ್ವರ ಮಠದ ಭಕ್ತ. ಅದಕ್ಕೆ ಬಂದು ಪೂಜೆ ಮಾಡಿದ್ದೇನೆ. ಡಿಕೆಶಿ ಕೂಡ ಒಬ್ಬ ಭಕ್ತ ಅವರೂ ಪೂಜೆ ಮಾಡಿದ್ದಾರೆ. ಅವರ ಭೇಟಿಗೂ ನನ್ನ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೋಮಣ್ಣ ತಿಳಿಸಿದರು.

 ತುಮಕೂರು :ನಾನು ನೋಣವಿನಕೆರೆ ಕಾಡಸಿದ್ದೇಶ್ವರ ಮಠದ ಭಕ್ತ. ಅದಕ್ಕೆ ಬಂದು ಪೂಜೆ ಮಾಡಿದ್ದೇನೆ. ಡಿಕೆಶಿ ಕೂಡ ಒಬ್ಬ ಭಕ್ತ ಅವರೂ ಪೂಜೆ ಮಾಡಿದ್ದಾರೆ. ಅವರ ಭೇಟಿಗೂ ನನ್ನ ಭೇಟಿಗೂ ಯಾವುದೇ ಸಂಬಂಧ ಇಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಸೋಮಣ್ಣ ತಿಳಿಸಿದರು.

ಅವರು ತಿಪಟೂರಿನ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ಜನರ ತೀರ್ಪುನ್ನು ಸ್ವೀಕರಿಸಿದ್ದೇನೆ. ಸೋಲಿಗೆ ಕಾರಣ ಇನ್ನೇನು ಇಲ್ಲ. ಕಳೆದ ಬಾರಿ ಕಾಂಗ್ರೆಸ್‌ ಸೋತಿತ್ತು. ಸಿಎಂ ಆಗಿದ್ದರೂ ಸಿದ್ದರಾಮಯ್ಯ ಸೋತಿದ್ದರು. ಇದೆಲ್ಲಾ ನಡೆಯುತ್ತಿರುತ್ತದೆ ಎಂದರು.

ಯಡಿಯೂರಪ್ಪ ಪಕ್ಷದ ಪ್ರಶ್ನಾತೀತ ನಾಯಕರು. ನಾನಾಗಲಿ, ಯಡಿಯೂರಪ್ಪನವರಾಗಲಿ ಕೆಲವೊಮ್ಮೆ ಅನಿವಾರ್ಯ ಅಲ್ಲ. ವ್ಯಕ್ತಿಗಿಂತ ಪಕ್ಷಮುಖ್ಯ, ನಾವ್ಯಾರು ಪಕ್ಷಕ್ಕೆ ಅನಿವಾರ್ಯ ಅಲ್ಲ. ಇಂದಿರಾಗಾಂಧಿ, ರಾಜೀವ್‌ಗಾಂಧಿ, ವಾಜಪೇಯಿ ಇವರಾರ‍ಯರು ಇಲ್ಲ. ಆದರೂ ಪಕ್ಷಗಳಿಲ್ಲವೇ ಎಂದು ಪ್ರಶ್ನಿಸಿದ ಸೋಮಣ್ಣ, ಯಡಿಯೂರಪ್ಪ ಇಳಿಸಿದಕ್ಕೆ ಲಿಂಗಾಯತರು ಬಿಜೆಪಿಯನ್ನ ಸೋಲಿಸಿದರು ಅನ್ನೋದು ಸರಿಯಲ್ಲ. ಲಿಂಗಾಯತರನ್ನೇ ಯಾಕೆ ಟಾರ್ಗೆಟ್‌ ಮಾಡುತ್ತೀರಾ? ಲಿಂಗಾಯತರು ಸ್ವತಂತ್ರವಾಗಿ ಬದುಕುವುದು ಬೇಡವೇ ಎಂದು ಸೋಮಣ್ಣ ಪ್ರಶ್ನಿಸಿದರು.

ಯಾರು ಪಕ್ಷಕ್ಕೆ ಅನಿವಾರ್ಯವಲ್ಲ

ತುಮಕೂರು(ಮೇ.14): ನಾನು ನೋಣವಿನಕೆರೆ ಮಠದ ಭಕ್ತನಾಗಿದ್ದೇನೆ. ಅದಕ್ಕೆ ಬಂದು ಪೂಜೆ ಮಾಡಿದ್ದೇನೆ. ಡಿ.ಕೆ.ಶಿವಕುಮಾರ್‌ ಕೂಡ ಒಬ್ಬ ಭಕ್ತ ಅವರೂ ಪೂಜೆ ಮಾಡಿದ್ದಾರೆ. ಅವರ ಭೇಟಿಗೂ ನನ್ನ ಭೇಟಿಗೂ ಯಾವುದೇ ಸಂಬಂಧ ಇಲ್ಲ ಅಂತ ಚಾಮರಾಜನಗರ ಹಾಗೂ ವರುಣ ಕ್ಷೇತ್ರದ ಬಿಜೆಪಿ ಪರಾಜಿತ ಅಭ್ಯರ್ಥಿ ವಿ.ಸೋಮಣ್ಣ‌ ತಿಳಿಸಿದ್ದಾರೆ. 

ಇಂದು(ಭಾನುವಾರ) ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ನೋಣವಿನಕೆರೆ ಮಠಕ್ಕೆ ಭೇಟಿ ನೀಡಿದ ಬಳಿಕಲ ಮಾಧ್ಯಮದವರೊಂದಿಗೆ ಮಾತನಾಡಿದ ವಿ.ಸೋಮಣ್ಣ‌ ಅವರು, ನಾನು ಚುನಾವಣೆಯಲ್ಲಿ ಸೋತಿದ್ದೇನೆ, ಜನರ ತೀರ್ಪುನ್ನು ಸ್ವೀಕರಿಸಿದ್ದೇನೆ. ಸೋಲಿಗೆ ಕಾರಣ ಇನ್ನೇನು ಇಲ್ಲ. ಕಳೆದ ಬಾರಿ ಕಾಂಗ್ರೆಸ್ ಸೋತಿತ್ತು. ಸಿಎಂ ಆಗಿದ್ದರೂ ಸಿದ್ದರಾಮಯ್ಯ ಸೋತಿದ್ದರು. ಇದೆಲ್ಲಾ ನಡೆಯುತ್ತ ಇರುತ್ತದೆ ಅಂತ ಹೇಳಿದ್ದಾರೆ. 

Tumakuru: ತಿಪಟೂರಿನ ಕಾಡಸಿದ್ದೇಶ್ವರ ಮಠಕ್ಕೆ ಡಿಕೆಶಿ ಭೇಟಿ, ವಿಶೇಷ ಪೂಜೆ ಸಲ್ಲಿಕೆ

ಬಿ.ಎಸ್‌. ಯಡಿಯೂರಪ್ಪ ಅವರು ಪಕ್ಷದ ಪ್ರಶ್ನಾತೀತ ನಾಯಕರಾಗಿದ್ದಾರೆ. ನಾನಾಗಲಿ ಯಡಿಯೂರಪ್ಪನವರಾಗರಾಗಲಿ ಕೆಲವೊಮ್ಮೆ ಅನಿವಾರ್ಯವೂ ಅಲ್ಲ. ವ್ಯಕ್ತಿಗಿಂತ ಪಕ್ಷಮುಖ್ಯ, ನಾವ್ಯಾರು ಪಕ್ಷಕ್ಕೆ ಅನಿವಾರ್ಯ ಅಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧಿ, ವಾಜಪೇಯಿ ಇವರ್ಯಾರು ಇಲ್ಲ. ಆದರೂ ಪಕ್ಷಗಳಿಲ್ವಾ?. ಯಡಿಯೂರಪ್ಪ ಇಳಿಸಿದಕ್ಕೆ ಲಿಂಗಾಯತರು ಬಿಜೆಪಿಯನ್ನ ಸೋಲಿಸಿದರು ಅನ್ನೋದು ಸರಿಯಲ್ಲ. ಲಿಂಗಾಯತರನ್ನೇ  ಯಾಕೆ ಟಾರ್ಗೆಟ್ ಮಾಡ್ತೀರಾ?. ಲಿಂಗಾಯತರು ಸ್ವತಂತ್ರವಾಗಿ ಬದುಕೋದು ಬೇಡವಾ? ಅಂತ ಪ್ರಶ್ನಿಸಿದ್ದಾರೆ. 

click me!