
ವಿಧಾನಸಭೆ : ನಗರದ ರಸ್ತೆ ಗುಂಡಿಗಳ ಬಗ್ಗೆ ನಮ್ಮ ಮನೆಯವರು, ಸ್ನೇಹಿತರು ಸೇರಿ ಎಲ್ಲರೂ ಬೈಯುತ್ತಿದ್ದಾರೆ ಎಂದು ಉಪಮುಖ್ಯಮಂತ್ರಿ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಶುಕ್ರವಾರ ಬೆಂಗಳೂರು ಅಭಿವೃದ್ಧಿ ಕಾರ್ಯಗಳ ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ನಡೆದ ವಿಶೇಷ ಚರ್ಚೆಗೆ ಉತ್ತರಿಸುವ ಸಂದರ್ಭದಲ್ಲಿ ನಗರದ ರಸ್ತೆ ಗುಂಡಿಗಳ ಬಗ್ಗೆ ವಿರೋಧ ಪಕ್ಷದ ಸದಸ್ಯರು ಟೀಕೆ ಮಾಡಿದ್ದನ್ನು ಪ್ರಸ್ತಾಪಿಸಿದರು.
ನಗರದ ರಸ್ತೆಗಳ ಗುಂಡಿ ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈಗಾಗಲೇ ಗುರುತಿಸಲಾಗಿರುವ 10 ಸಾವಿರ ರಸ್ತೆ ಗುಂಡಿಗಳ ಪೈಕಿ 5,377 ಗುಂಡಿ ಮುಚ್ಚಲಾಗಿದೆ. ಎಷ್ಟೇ ಗುಂಡಿ ಮುಚ್ಚಿದರೂ ಅದು ತಾತ್ಕಾಲಿಕ ಪರಿಹಾರವಷ್ಟೇ. ಹೀಗಾಗಿ ಹಂತ ಹಂತವಾಗಿ ನಗರದ ರಸ್ತೆಗಳಿಗೆ ವೈಟ್ ಟಾಪಿಂಗ್, ಬ್ಲಾಕ್ ಟಾಪಿಂಗ್ ಸೇರಿ ಬಹುಕಾಲ ಬಾಳಿಕೆ ಬರುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.
ದಿನಕ್ಕೊಂದು ಬಲಿ ಪಡೆಯುತ್ತಿರುವ ಬಿಎಂಟಿಸಿ, 10 ವರ್ಷದ ಶಾಲಾ ಬಾಲಕಿಯ ತಲೆ ಮೇಲೆ ಹರಿದ ಬಸ್!
ಒಂದೆಡೆ ಗುಂಡಿಗಳಿಂದ ಬೆಂಗಳೂರಿನ ರಸ್ತೆಗಳು ತುಂಬಿ ಹೋಗಿದ್ದರೆ, ಬಿಎಂಟಿಸಿ ಬಸ್‌ಗಳ ಡ್ರೈವರ್‌ಗಳು ಗುಂಡಿ ತುಂಬಿದ ರಸ್ತೆಗಳಲ್ಲಿ ತನ್ನ ಬೇಜವಾಬ್ದಾರಿ ಚಾಲನೆಯನ್ನು ಮುಂದುವರಿಸಿದ್ದಾರೆ. ಇದರಿಂದಾಗಿ ರಾಜಧಾನಿಯಲ್ಲಿ ದಿನಕ್ಕೊಂದರಂತೆ ಬಿಎಂಟಿಸಿ ಅಡಿಗೆ ಬಿದ್ದು ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ.
ಕಳೆದೊಂದು ವಾರದಲ್ಲಿ ಬೆಂಗಳೂರಿನ ವಿವಿಧ ಪ್ರದೇಶಗಳಲ್ಲಿ ಒಟ್ಟು ನಾಲ್ಕು ಇಂಥ ಘಟನೆಗಳು ನಡೆದಿದ್ದವು. ಗುರುವಾರ ಬೆಳಗ್ಗೆ ಬಿಎಂಟಿಸಿ ಬಸ್‌ಗೆ 10 ವರ್ಷ ಮಗು ಬಲಿಯಾಗಿದೆ. ಯಲಹಂಕ ಕೋಗಿಲು ಕ್ರಾಸ್ ಬಳಿ ಘಟನೆ ನಡೆದಿದ್ದು, KA57 F:5375 ಬಸ್ ನಿಂದ ಅಪಘಾತ ಸಂಭವಿಸಿದೆ. ಮಾರುತಿನಗರ ಹತ್ತಿರ ಹೋಗುವಾಗ ಎಡಗಡೆ ದ್ವಿಚಕ್ರ ವಾಹನ ಬಂದಿದೆ. ಈ ವೇಳೆ ಬೈಕ್ ಸ್ಕಿಡ್ ಆಗಿದ್ದರಿಂದ ಬಸ್‌ನ ಚಕ್ರದಡಿ ಮಗು ಸಿಲುಕಿ ಸಾವು ಕಂಡಿದೆ. ಬೆಳಿಗ್ಗೆ 8.20 ರ ಸುಮಾರಿಗೆ ಈ ಘಟನೆ ನಡೆದಿದ. ಈ ಸಂಬಂಧ N E S ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿದೆ.
ತಾಯಿ ಜೊತೆ ಶಾಲೆಗೆ ಹೋಗುವಾಗ ಈ ಘಟನೆ ನಡೆದಿದೆ. ಬಿಎಂಟಿಸಿಗೆ ಬಸ್‌ಗೆ ಬಲಿಯಾದ ಮಗುವನ್ನು ತನ್ವಿ ಕೃಷ್ಣ ಎಂದು ಗುರುತಿಸಲಾಗಿದ್ದು, ಮಿಲಿನಿಯಮ್ ಶಾಲೆಯಲ್ಲಿ 5 ನೇ ತರಗತಿ ಓದುತ್ತಿತ್ತು ಎನ್ನಲಾಗಿದೆ. ತಾಯಿ ಹರ್ಷಿತಾ ಜೊತೆ ತೆರಳುವಾಗ ಬೈಕ್ ಸ್ಕಿಡ್ ಆಗಿ ಅಪಘಾತ ಸಂಭವಿಸಿದೆ.