'36 ಸಾವಿರ ಮತಗಳಿಂದ ಸೋತರೂ ಸಿದ್ದು ಆರ್ಭಟ ಇನ್ನೂ ಕಡಿಮೆಯಾಗಿಲ್ಲ'..!

By Kannadaprabha NewsFirst Published Nov 17, 2019, 11:27 AM IST
Highlights

ಮೈಸೂರಿನಿಂದ ಕದ್ದು ಹೋಗಿ ಬಾದಾಮಿಯಲ್ಲಿ 1,600 ಮತಗಳಿಂದ ಗೆದ್ದರೂ, ಚಾಮುಂಡೇಶ್ವರಿಯಲ್ಲಿ 36,000 ಮತಗಳಿಂದ ಸೋತರೂ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ಭಟ ಕಡಿಮೆಯಾಗಿಲ್ಲ ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ಮೈಸೂರು(ನ.17): ಮೈಸೂರಿನಿಂದ ಕದ್ದು ಹೋಗಿ ಬಾದಾಮಿಯಲ್ಲಿ 1,600 ಮತಗಳಿಂದ ಗೆದ್ದರೂ, ಚಾಮುಂಡೇಶ್ವರಿಯಲ್ಲಿ 36,000 ಮತಗಳಿಂದ ಸೋತರೂ ಮಾಜಿ ಮುಖ್ಯಮಂತ್ರಿ, ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ಭಟ ಕಡಿಮೆಯಾಗಿಲ್ಲ ಎಂದು ಚಾಮರಾಜನಗರ ಬಿಜೆಪಿ ಸಂಸದ ವಿ. ಶ್ರೀನಿವಾಸಪ್ರಸಾದ್‌ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಮುಂಚೆ ಕುಮಾರಸ್ವಾಮಿ ಅವರಪ್ಪನಾಣೆ ಮುಖ್ಯಮತ್ರಿಯಾಗಿಲ್ಲ ಎಂದರು. ನಂತರ ಕಾಂಗ್ರೆಸ್‌ ಬೆಂಬಲದೊಂದಿಗೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದಾಗ ಮೂಲೆಯಲ್ಲಿ ತೂಕಡಿಸುತ್ತಾ ಕುಳಿತ್ತಿದ್ದರು ಎಂದು ಕುಟುಕಿದ್ದಾರೆ.

JDSನಿಂದ ಯಾರನ್ನೇ ನಿಲ್ಸಿದ್ರೂ 50 ಸಾವಿರ ಗ್ಯಾರಂಟಿ: ರೇವಣ್ಣ ವಿಶ್ವಾಸ

ನಾನೇ ಸಿಎಂ ಎಂದು ಸಿದ್ದರಾಮಯ್ಯ ಹೇಳಿಕೊಂಡು ತಿರುಗಿದ್ದರಿಂದ ಅವರ ಸಂಪುಟದಲ್ಲಿದ್ದ 17 ಸಚಿವರು ನೆಗೆದುಬಿದ್ರು (ಸೋತರು). ಶಾಸಕರು 130 ರಿಂದ 70ಕ್ಕೆ ಇಳಿದರು. ಸಂಸತ್‌ ಚುನಾವಣೆಯಲ್ಲಿ ಒಂದು ಸ್ಥಾನಕ್ಕೆ ಬಂದರು. ಸಿದ್ದರಾಮಯ್ಯ ನಿಮಗೆ ಈಗ ಎಲ್ಲಿಯೂ ನೆಲೆ ಇಲ್ಲ. ಐದು ಬಾರಿ ಗೆಲ್ಲಿಸಿದ ಚಾಮುಂಡೇಶ್ವರಿ ಕ್ಷೇತ್ರ ಬಿಟ್ಟು ಯಾಕೆ ಎರಡು ಕಡೆ ನಿಲ್ಲಬೇಕಿತ್ತು? ನೀವು ಬಾದಾಮಿಗೆ ಯಾಕ್‌ ಹೋದ್ರಿ ಎಂದು ಜನರಿಗೆ ಗೊತ್ತಾಗಲ್ವ?. ನಾಚಿಗೆ ಆಗಬೇಕು ಎಂದು ಅವರು ಕಿಡಿಕಾರಿದ್ದಾರೆ.

JDS ಅಭ್ಯರ್ಥಿ ಸೋಮಶೇಖರ್‌ ನಾಮಪತ್ರ ಸಲ್ಲಿಕೆ: ರಾಹುಕಾಲ ಮುಗಿಯೋವರೆಗೆ ಮೆರವಣಿಗೆ

ದೋಸ್ತಿ ಸರ್ಕಾರ ಪತನಕ್ಕೆ ನಾನು ಕಾರಣ ಎಂದು ಮಾಜಿ ಸಚಿವ ಎಚ್‌. ವಿಶ್ವನಾಥ್‌ ಹೇಳಿರಬಹುದು. ಆದರೆ ಸರ್ಕಾರ ರಚನೆಯಾದ ದಿನದಿಂದ ಎಚ್‌.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಹೇಳಿಕೆ ಗಮನಿಸಿದರೆ, ದೋಸ್ತಿ ಸರ್ಕಾರ ಬಿದ್ದು ಹೋದ ನಂತರವೂ ಅವರ ಕಚ್ಚಾಟ ನಿಂತಿಲ್ಲ. ಈಗಲೂ ಅವರ ಮಾತುಗಳನ್ನು ಗಮನಿಸಿದರೆ ಸರ್ಕಾರ ಹೋಗಲು ಯಾರು ಕಾರಣ ಎಂದು ಗೊತ್ತಾಗುತ್ತದೆ. ಕುಮಾರಸ್ವಾಮಿ ಅವರು ಬಜೆಟ್‌ ಮಂಡಿಸಲು ಮುಂದಾದಾಗ, ಸಾಲಮನ್ನಾ ಮಾಡಲು ಹೋದಾಗ ಸಿದ್ದರಾಮಯ್ಯ ಸಹಕಾರ ನೀಡಿದರಾ? ಎಂದು ಅವರು ಪ್ರಶ್ನಿಸಿದರು.

ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ವಿಶ್ವನಾಥ್‌ಗೆ ಸಮನ್ವಯ ಸಮಿತಿಯ ಸದಸ್ಯತ್ವ ನೀಡಲಿಲ್ಲ. ಕೆ.ಆರ್‌. ನಗರ ಪುರಸಭಾ ಚುನಾವಣೆಯ ಒಂದು ವಾರ್ಡ್‌ನ ಟಿಕೆಟ್‌ ಕೊಡುವುದಕ್ಕೂ ಅಧಿಕಾರ ಇರಲಿಲ್ಲ. ಹುಣಸೂರು ಶಾಸಕರಾಗಿಯೂ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿರಲಿಲ್ಲ. ಹೀಗಾಗಿ ಅವರಿಗೆ ನಾನು ಬಿಜೆಪಿಗೆ ಬರುವಂತೆ ಹೇಳಿದ್ದು ನಿಜ ಎಂದರು.

ಕೆ. ಆರ್. ಪೇಟೆ: ಪಕ್ಷೇತರ ಅಭ್ಯರ್ಥಿಯಾಗಿ ಸರ್ವೇ ದೇವೇಗೌಡ ನಾಮಪತ್ರ ಸಲ್ಲಿಕೆ

ನಾವು ಆಶಾವಾದಿಗಳು, ಅತೃಪ್ತ, ಅನರ್ಹ ಶಾಸಕರೆಲ್ಲಾ ಜನಪ್ರಿಯರು. ಅವರನ್ನು ಜನತೆ ಕೈಬಿಡಲ್ಲ. ಉಪ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ತಾನಗಳನ್ನು ಗಳಿಸುತ್ತದೆ ಎಂದ ಅವರು, ಹುಣಸೂರಿನಲ್ಲಿ ಎಚ್‌. ವಿಶ್ವನಾಥ್‌ ನಾಮಪತ್ರ ಸಲ್ಲಿಸುವಾಗಲು ಹಾಜರಿರುತ್ತೇನೆ. ಸಂಸತ್‌ ಜಂಟಿ ಅಧಿವೇಶನದಿಂದ ವಾಪಸ್‌ ಆದ ಬಳಿಕ ಸಂಪೂರ್ಣವಾಗಿ ಪ್ರಚಾರದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದರು.

click me!