ಅಂತ್ಯವಾಯ್ತು 4 ದಶಕಗಳ ಕುಟುಂಬ ರಾಜಕಾರಣ!

By Kannadaprabha News  |  First Published Apr 10, 2023, 6:15 AM IST

ಕಾಂಗ್ರೆಸ್‌ ಈ ಬಾರಿ ಹೊಸ ಮುಖ ಇಕ್ಬಾಲ್‌ ಅಹಮದ್‌ ಅವರಿಗೆ ಟಿಕೆಟ್‌ ನೀಡುವ ಮೂಲಕ ಮಾಜಿ ಶಾಸಕ ಷಫಿ ಅಹಮದ್‌ ಅವರ ನಾಲ್ಕು ದಶಕಗಳ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಿದೆ.


 ಉಗಮ ಶ್ರೀನಿವಾಸ್‌

 ತುಮಕೂರು :  ಕಾಂಗ್ರೆಸ್‌ ಈ ಬಾರಿ ಹೊಸ ಮುಖ ಇಕ್ಬಾಲ್‌ ಅಹಮದ್‌ ಅವರಿಗೆ ಟಿಕೆಟ್‌ ನೀಡುವ ಮೂಲಕ ಮಾಜಿ ಶಾಸಕ ಷಫಿ ಅಹಮದ್‌ ಅವರ ನಾಲ್ಕು ದಶಕಗಳ ಕುಟುಂಬ ರಾಜಕಾರಣಕ್ಕೆ ಇತಿಶ್ರೀ ಹಾಡಿದೆ.

Tap to resize

Latest Videos

1978 ರಿಂದ 2018ರವರೆಗೆ ಕಾಂಗ್ರೆಸ್‌ ಪಕ್ಷ ತುಮಕೂರು ನಗರಕ್ಕೆ ಷಫಿ ಅಹಮದ್‌ ಅವರ ಕುಟುಂಬಕ್ಕೆ ಮಣೆ ಹಾಕುತ್ತಲೇ ಬಂದಿದೆ. 1978ರಲ್ಲಿ ಷಫಿ ಅಹಮದ್‌ ಅವರ ಕುಟುಂಬದ ರಾರ‍ಯಂಕ್‌ ನಜೀರ್‌ ಅವರಿಗೆ ಕಾಂಗ್ರೆಸ್‌ನಿಂದ ಟಿಕೆಟ್‌ ನೀಡಲಾಗಿತ್ತು. ಆ ಯಲ್ಲಿ ಅವರು 34 ಸಾವಿರದ 199 ಮತಗಳನ್ನು ಪಡೆದು ಜೆಎನ್‌ಪಿ ಪಕ್ಷದಿಂದ ಸ್ಪರ್ಧಿಸಿದ್ದ ಮಹಮದ್‌ ಗೈಬನ್‌ ಅವರನ್ನು ಸೋಲಿಸಿದ್ದರು.

1983ರಲ್ಲಿ ಎರಡನೇ ಬಾರಿಗೆ ರಾರ‍ಯಂಕ್‌ ನಜೀರ್‌ ಸ್ಪರ್ಧಿಸಲು ಆಸಕ್ತಿ ತೋರದೆ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅಮೆರಿಕಾಕ್ಕೆ ತೆರಳಿದರು. ಆಗ ಅವರ ಬದಲಿಗೆ ಅವರ ಕುಟುಂಬದ ಷಫಿ ಅಹಮದ್‌ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿತ್ತು. ಆ ಚುನಾವಣೆಯಲ್ಲಿ ಷಫಿ ಅಹಮದ್‌ 24 ಸಾವಿರದ 159 ಮತಗಳನ್ನು ಪಡೆದು ಪರಾಭವಗೊಂಡರು. ಆ ಚುನಾವಣೆಯಲ್ಲಿ ಜೆಎನ್‌ಪಿಯಿಂದ ಸ್ಪರ್ಧಿಸಿದ್ದ ಲಕ್ಷ್ಮೇನರಸಿಂಹಯ್ಯ ವಿಧಾನಸಭೆ ಪ್ರವೇಶಿಸಿದ್ದರು.

1985ರಲ್ಲಿ ನಡೆದ ಚುನಾವಣೆಯಲ್ಲಿ ತುಮಕೂರಿಗೆ ಷಫಿ ಅಹಮದ್‌ ಬದಲಿಗೆ ಕಾಂಗ್ರೆಸ್‌ ಆಲಿಯಾ ಬೇಗಂಗೆ ಟಿಕೆಟ್‌ ನೀಡಿತ್ತು. ಆ ಚುನಾವಣೆಯಲ್ಲಿ ಆಲಿಯಾ ಬೇಗಂ ಅವರು 26910 ಮತಗಳನ್ನು ಪಡೆದು ಪರಾಭವಗೊಂಡರು. ಆ ಚುನಾವಣೆಯಲ್ಲಿ ಲಕ್ಷ್ಮೇನರಸಿಂಹಯ್ಯ ಅವರು ಎರಡನೇ ಬಾರಿಗೆ ಆಯ್ಕೆಯಾಗಿದ್ದರು. 1989ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಷಫಿ ಅಹಮದ್‌ಗೆ ಮಣೆ ಹಾಕಿತ್ತು. ಆಗ ನಡೆದ ಚುನಾವಣೆಯಲ್ಲಿ 44786 ಮತ ಪಡೆದು ಜನತಾದಳದ ಲಕ್ಷ್ಮೇನರಸಿಂಹಯ್ಯ ಅವರನ್ನು ಪರಾಭವಗೊಳಿಸಿ ಮೊದಲ ಬಾರಿಗೆ ಶಾಸನ ಸಭೆಗೆ ಆಯ್ಕೆಯಾದರು.

1994ರ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ಮತ್ತೆ ಷಫಿ ಅಹಮದ್‌ ಸ್ಪರ್ಧಿಸಿದರು. ಆ ಚುನಾವಣೆಯಲ್ಲಿ ಅವರು ಬಿಜೆಪಿಯ ಸೊಗಡು ಶಿವಣ್ಣ ವಿರುದ್ಧ ಪರಾಭವಗೊಂಡರು. ಆ ಚುನಾವಣೆಯಲ್ಲಿ ಷಫಿ ಅಹಮದ್‌ ಅವರು 29997 ಮತಗಳನ್ನು ಪಡೆದಿದ್ದರು.

1999ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಷಫಿ ಅಹಮದ್‌ಗೆ ಟಿಕೆಟ್‌ ನೀಡಿತ್ತು. ಆಗಲೂ ಕೂಡ ಬಿಜೆಪಿಯ ಸೊಗಡು ಶಿವಣ್ಣ ವಿರುದ್ಧ ಷಫಿ ಅಹಮದ್‌ ಪರಾಭವಗೊಂಡರು. ಷಫಿ ಆ ಚುನಾವಣೆಯಲ್ಲಿ 52 ಸಾವಿರದ 111 ಮತಗಳನ್ನು ಪಡೆದು ಪರಾಭವಗೊಂಡರು.

2004ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ಷಫಿ ಅಹಮದ್‌ ಅವರಿಗೆ ಟಿಕೆಟ್‌ ನೀಡಿತ್ತು. ಆ ಚುನಾವಣೆಯಲ್ಲಿ ಸತತ ನಾಲ್ಕನೇ ಬಾರಿಗೆ ಬಿಜೆಪಿಯ ಸೊಗಡು ಶಿವಣ್ಣ ವಿರುದ್ಧ ಷಫಿ ಪರಾಭವಗೊಂಡರು. ಷಫಿ ಅಹಮದ್‌ ಅವರು ಚುನಾವಣೆಯಲ್ಲಿ 51 ಸಾವಿರದ 332 ಮತಗಳನ್ನು ಪಡೆದಿದ್ದರು.

2009ರ ಚುನಾವಣೆಯಲ್ಲಿ ನಡೆದ ಚುನಾವಣೆಯಲ್ಲಿ ಸೊಗಡು ಶಿವಣ್ಣ ವಿರುದ್ಧ ಷಫಿ ಅಹಮದ್‌ ಬದಲಿಗೆ ಅವರ ಅಳಿಯ ರಫೀಕ್‌ ಅವರನ್ನು ಕಣಕ್ಕೆ ಕಾಂಗ್ರೆಸ್‌ ಇಳಿಸಿತು. ಆ ಚುನಾವಣೆಯಲ್ಲಿ ರಫೀಕ್‌ ಅಹಮದ್‌ ಕೂಡ ಪರಾಭವಗೊಂಡರು. ರಫೀಕ್‌ ಅಹಮದ್‌ ಅವರು ಆ ಚುನಾವಣೆಯಲ್ಲಿ 37 ಸಾವಿರದ 486 ಮತಗಳನ್ನು ಪಡೆದು ಕೂದಲೆಳೆ ಅಂತರದಿಂದ ಸೊಗಡು ಶಿವಣ್ಣ ವಿರುದ್ಧ ಪರಾಭವಗೊಂಡರು.

2013ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ರಫೀಕ್‌ ಅಹಮದ್‌ ಅವರಿಗೆ ಟಿಕೆಟ್‌ ನೀಡಿತ್ತು. ಆ ಚುನಾವಣೆಯಲ್ಲಿ ರಫೀಕ್‌ ಅಹಮದ್‌ ಅವರು ಕಾಂಗ್ರೆಸ್‌ನ ರಫೀಕ್‌ ಅಹಮದ್‌ ಅವರು 43 ಸಾವಿರದ 681 ಮತಗಳನ್ನು ಪಡೆದು ಕೆಜೆಪಿಯ ಜ್ಯೋತಿ ಗಣೇಶ್‌ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸನ ಸಭೆ ಪ್ರವೇಶಿಸಿದರು.

2018ರ ಚುನಾವಣೆಯಲ್ಲಿ ಮತ್ತೆ ಕಾಂಗ್ರೆಸ್‌ ರಫೀಕ್‌ ಅಹಮದ್‌ಗೆ ಟಿಕೆಟ್‌ ನೀಡಿತು. ಆ ಚುನಾವಣೆಯಲ್ಲಿ ಅವರು 51219 ಮತ ಪಡೆದು ಜ್ಯೋತಿ ಗಣೇಶ್‌ ವಿರುದ್ಧ ಪರಾಭವಗೊಂಡರು.

ಷಫಿ ಕುಟುಂಬಕ್ಕೆ ಟಿಕೆಟ್‌ ಕೊಟ್ಟವರ್ಷಗಳು

1. 1978ರಲ್ಲಿ ರಾರ‍ಯಂಕ್‌ ನಜೀರ್‌, ಪಡೆದ ಮತ 34199

2. 1983ರಲ್ಲಿ ಷಫಿ ಅಹಮದ್‌, ಪಡೆದ ಮತ 24 159

3. 1985ರಲ್ಲಿ ಆಲಿಯಾಂ ಬೇಗಂ, ಪಡೆದ ಮತ 26910

4. 1989ರಲ್ಲಿ ಷಫಿ ಅಹಮದ್‌, ಪಡೆದ ಮತ 44786

5. 1994ರಲ್ಲಿ ಷಫಿ ಅಹಮದ್‌, ಪಡೆದ ಮತ 29997

6. 1999ರಲ್ಲಿ ಷಫಿ ಅಹಮದ್‌, ಪಡೆದ ಮತ 52111

7. 2004ರಲ್ಲಿ ಷಫಿ ಅಹಮದ್‌, ಪಡೆದ ಮತ 51332

8. 2009ರಲ್ಲಿ ರಫೀಕ್‌ ಅಹಮದ್‌, ಪಡೆದ ಮತ 37486

9. 2013ರಲ್ಲಿ ರಫೀಕ್‌ ಅಹಮದ್‌, ಪಡೆದ ಮತ 43681

10. 2018ರಲ್ಲಿ ರಫೀಕ್‌ ಅಹಮದ್‌, ಪಡೆದ ಮತ 51219

click me!