ಅತೀಕ್ರಮಣ ಆಗಿದೆ ಅಂತ ಮನೆ ಕೆಡವೋಕೆ ಬಂದ ಅಧಿಕಾರಿಗಳು. ದಾಖಲೆ ಕೊಡಿ ಮನೆ ಕೆಡವಿ ಅಂತ ರಸ್ತೆಯಲ್ಲಿಯೇ ಕುಳಿತ್ರು ಶಾಸಕರು. ಅತೀಕ್ರಮಣ ಜಟಾಪಟಿಯ ನಡುವೆ ಕಡೆಗೆ ಆದ ಕಥೆಯೇ ಬೇರೆ. ಬೆಳಗಾವಿಯಲ್ಲಿ ನಡೆದ ಈ ಘಟನೆಯ ಸಂಪೂರ್ಣ ವಿವರಣೆ ಇಲ್ಲಿದೆ.
ವರದಿ: ಮುಷ್ತಾಕ್ ಪೀರಜಾದೇ, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ಅ.29): ಆ ಕುಟುಂಬ ಇನ್ನೂ ಸವಿ ನಿದ್ದೆಯ ಮಂಪರಿನಲ್ಲಿತ್ತು. ಅಷ್ಟೊತ್ತಿಗಾಗಲೇ ಮನೆಯ ಮುಂದೆ ಜೆಸಿಬಿಗಳು ಘರ್ಜಿಸೋಕೆ ಶುರು ಮಾಡಿದ್ವು. ಏನಾಗ್ತಿದೆ ಅಂತ ನೋಡೋಕ್ ಹೋದ್ರೆ ಮನೆಯ ಹೊರಗೆ ಅಧಿಕಾರಿಗಳ ದಂಡು ನಿಂತಿತ್ತು ಮನೆ ಅತೀಕ್ರಮಣ ಆಗಿದೆ ಅಂತ ಮನೆ ಕೆಡವೋಕೆ ಬಂದ ಅಧಿಕಾರಿಗಳು ಮನೆಯನ್ನ ಹಾಗೇ ಬಿಟ್ಟು ಹೋಗಿದ್ಯಾಕೆ ಗೊತ್ತಾ? ಗುಂಪು ಗುಂಪಾಗಿ ಸೇರಿರೋ ಜನ. ರಸ್ತೆಯ ಮಧ್ಯೆಯೇ ಚೇರ್ ಹಾಕಿಕೊಂಡು ಕುಳಿತಿರುವ ಶಾಸಕರು. ಒಡೆದು ಹೋಗಿರುವ ಮನೆಯ ಕಟ್ಟೆ, ಈ ದೃಶ್ಯಗಳು ಕಂಡು ಬಂದಿದ್ದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ಸೋಮವಾರ ಪೇಟೆಯಲ್ಲಿ. ಇಲ್ಲಿನ ಈರಣ್ಣ ಪುಟಾಣೆ ಎಂಬುವವರ ಮನೆ ಹಾಗೂ ಅಂಗಡಿಯನ್ನ ಅತೀಕ್ರಮಣ ಮಾಡಿ ಕಟ್ಟಲಾಗಿದೆ ಅಂತ ಅಧಿಕಾರಿಗಳು ಬೆಳ್ಳಂ ಬೆಳಗ್ಗೆ ಅದನ್ನ ತೆರವು ಮಾಡಲು ಬಂದಿದ್ರು. ಅಧಿಕಾರಿಗಳು ಮನೆಯ ಮುಂದೆ ಬರ್ತಿದ್ದಂತೆ ಮನೆಯ ಸದಸ್ಯರು ಶಾಸಕ ಗಣೇಶ ಹುಕ್ಕೇರಿಯವರಿಗೆ ಕರೆ ಮಾಡಿ ವಿಷಯ ತಿಳಿಸಿದ್ರು. ಕೂಡಲೇ ಸ್ಥಳಕ್ಕೆ ಬಂದ ಶಾಸಕ ಗಣೇಶ ಹುಕ್ಕೇರ ಅಧಿಕಾರಿಗಳ ಬಳಿ ಒತ್ತುವರಿ ಆಗಿದೆ ಎನ್ನುವುದಕ್ಕೆ ನಿಮ್ಮ ಬಳಿ ದಾಖಲಾತಿ ಏನಿದೆ ಅಂತ ಪ್ರಶ್ನೆ ಮಾಡಿದ್ರು. ಸೂಕ್ತ ದಾಖಲಾತಿ ಒದಗಿಸಲಾಗದೆ ಅಧಿಕಾರಿಗಳು ಪೇಚಿಕೆ ಸಿಲುಕಿದರು. ಅಲ್ಲದೆ ಅತೀಕ್ರಮಣ ಎಂದರೆ ಒಬ್ಬರೇ ಮನೆಯನ್ನು ಯಾಕೆ ತೆರವು ಮಾಡ್ತಿದ್ರಿ ನಿಮ್ಮ ಬಳಿ ಕೋರ್ಟ್ ಆದೇಶವಿದ್ದರೆ ಪುರಸಭೆ ಸದಸ್ಯರ ಜತೆಗೆ ಚರ್ಚಿಸಿ ನಿರ್ಧಾರ ಮಾಡಬೇಕಿತ್ತು.ಅಧಿಕಾರಿಗಳು ಹಾಗೇ ಮಾಡಿಲ್ಲ ಹೀಗಾಗಿ ಇಲ್ಲಿಗೆ ನಾನೇ ಬರಬೇಕಾಯ್ತು ಎಂದರು.
ಸೋಮವಾರ ಪೇಟೆಯ ಕೆಲವೊಂದು ಕಡೆಗಳಲ್ಲಿ ಅತೀಕ್ರಮಣ ಆಗಿರೋದು ಪುರಸಭೆ ಅಧಿಕಾರಿಗಳ ಗಮನಕ್ಕೂ ಇದೆ. ಆದರೆ ಒಂದೇ ಮನೆಯನ್ನು ಟಾರ್ಗೆಟ್ ಮಾಡಿ ಅಧಿಕಾರಿಗಳು ತೆರವು ಕಾರ್ಯಕ್ಕೆ ಮುಂದಾಗಿದ್ದಕ್ಕೆ ಸಾರ್ವಜನಿಕರಲ್ಲೂ ಈ ವಿಷಯ ಚರ್ಚೆಗೆ ಗ್ರಾಸವಾಯಿತು. ಈಗಾಗಲೇ ಹೈ ಕೋರ್ಟ್ ಅತೀಕ್ರಮಣ ತೆರವು ಮಾಡಿ ಅಂತ ಆದೇಶ ಮಾಡಿದೆ ಅಂತ ಅಧಿಕಾರಿಗಳು ಮಾಧ್ಯಮಗಳಿಗೆ ತಿಳಿಸಿದರು.
ಧಾರವಾಡ: ಬಾವಿಯನ್ನ ಹುಡುಕಿಕೊಡುವಂತೆ ದೂರು, ಶಾಸಕರೇ ಬಾವಿ ನುಂಗಿದ್ರಾ?
ಈ ವೇಳೆ ಅತೀಕ್ರಮಣ ತೆರವು ಮಾಡೋದಾದ್ರೆ ಎಲ್ಲೆಲ್ಲಿ ಅತೀಕ್ರಮಣ ಆಗಿದೆ ಎಲ್ಲವನ್ನೂ ಸಹ ತೆರವುಗೊಳಿಸಿ ಅದನ್ನು ಬಿಟ್ಟು ಕೇವಲ ಒಬ್ಬರ ಮನೆ ಮಾತ್ರ ಯಾಕೆ ತೆರವು ಮಾಡ್ತಿದ್ದಿರಿ ಅಂತ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಒಡೆದಿರುವ ಕಟ್ಟೆಯನ್ನು ನಾವೇ ಮರುನಿರ್ಮಾಣ ಮಾಡಿಕೊಡ್ತಿವಿ ಅಂತ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.
ಸರ್ಕಾರಿ ಜಾಗದಲ್ಲಿನ ಕಾಂಪೌಂಡ್ ಒಡೆದ್ರೆ ಸಾರ್ವಜನಿಕರಿಗೆ ಸಿಗುತ್ತೆ ರಸ್ತೆ!
ಒಟ್ಟಿನಲ್ಲಿ ಅಧಿಕಾರಿಗಳು ಒಂದು ಕಡೆ ಕೋರ್ಟ್ ಆದೇಶ ಇದೆ ಅದಕ್ಕೆ ತೆರವು ಕಾರ್ಯಾಚರಣೆ ಮಾಡ್ತಿದ್ದಿವಿ ಅಂತ ಹೇಳಿ ಒಂದೇ ಮನೆಯ ತೆರವಿಗೆ ಮುಂದಾಗಿರೋದು ಈಗ ಹಲವು ಚರ್ಚಗೆ ಗ್ರಾಸವಾಗಿದೆ. ಅಲ್ಲದೆ ಶಾಸಕ ಗಣೇಶ ಹುಕ್ಕೇರಿ ಮಧ್ಯ ಪ್ರವೇಶದ ನಂತರ ಕೋರ್ಟ್ ಆದೇಶ ಇದೆ ಎಂದು ತೆರವಿದೆ ಮುಂದಾಗಿದ್ದ ಅಧಿಕಾರಿಗಳೇ ಈಗ ಒಡೆದು ಹೋದ ಕಟ್ಟೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.