ದಸರಾ: ವೀರನಹೊಸಳ್ಳಿ ಶಿಬಿರಕ್ಕೆ ದುಬಾರೆ ಗಜಪಡೆ

By Kannadaprabha News  |  First Published Aug 22, 2019, 3:12 PM IST

ದಸರಾ ಹಬ್ಬ ಸಮೀಪಿಸಿದ್ದು, ಮಡಿಕೇರಿಯ ದುಬಾರೆ ಆನೆ ಶಿಬಿರದಿಂದ ಗಜಪಡೆಯನ್ನು ವೀರನಹೊಸಳ್ಳಿ ಕ್ಯಾಂಪ್‌ಗೆ ಕಳುಹಿಸಿಕೊಡಲಾಯಿತು. ದುಬಾರೆ ಶಿಬಿರದ ಆನೆಗಳಾದ ಧನಂಜಯ (47), ಈಶ್ವರ(51), ವಿಜಯ(56) ಪೂಜೆ ಸಲ್ಲಿಸಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೀಳ್ಕೊಟ್ಟರು.


ಮಡಿಕೇರಿ(ಆ22): ವಿಶ್ವವಿಖ್ಯಾತ ಮೈಸೂರು ದಸರಾ ಹಿನ್ನೆಲೆಯಲ್ಲಿ ಗಜಪಯಣದಲ್ಲಿ ಪಾಲ್ಗೊಳ್ಳಲು ಕುಶಾಲನಗರ ದುಬಾರೆ ಶಿಬಿರದ 3 ಆನೆಗಳನ್ನು ಹುಣಸೂರು ವೀರನಹೊಸಳ್ಳಿಗೆ ಶಿಬಿರಕ್ಕೆ ಬುಧವಾರ ಕಳುಹಿಸಿಕೊಡಲಾಯಿತು.

ದುಬಾರೆ ಶಿಬಿರದ ಆನೆಗಳಾದ ಧನಂಜಯ (47), ಈಶ್ವರ(51), ವಿಜಯ(56) ಪೂಜೆ ಸಲ್ಲಿಸಿ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಬೀಳ್ಕೊಟ್ಟರು.

Tap to resize

Latest Videos

ಪೂಜೆ ನಂತರ ಮಡಿಕೇರಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್‌.ಪ್ರಭಾಕರನ್‌, ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ನೆಹರು, ಉಪ ಅರಣ್ಯ ವಲಯಾಧಿಕಾರಿಗಳಾದ ಕನ್ನಂಡ ರಂಜನ್‌, ಅನಿಲ್‌ ಮತ್ತು ಸಿಬ್ಬಂದಿ ಬೆಲ್ಲ, ಕಬ್ಬು ತಿನಿಸುವುದರೊಂದಿಗೆ ಆನೆಗಳನ್ನು ಬೀಳ್ಕೊಡಲಾಯಿತು. ಆನೆ ಜೊತೆಗೆ ಮಾವುತ ಕವಾಡಿಗರ ಕುಟುಂಬ ಸದಸ್ಯರು ತೆರಳಿದ್ದಾರೆ.

ಎರಡನೇ ತಂಡ ಸೆಪ್ಟೆಂಬರ್‌ ತಿಂಗಳಲ್ಲಿ ಮೈಸೂರಿಗೆ ಮತ್ತೆ 3 ಆನೆಗಳನ್ನು ಕಳುಹಿಸಿಕೊಡಲಾಗುವುದು ಎಂದು ಕುಶಾಲನಗರ ಅರಣ್ಯ ವಲಯಾಧಿಕಾರಿ ಸಿ.ಆರ್‌.ಅರುಣ್‌ ಮಾಹಿತಿ ನೀಡಿದರು.

click me!