ಧಾರವಾಡ: ಬೈಕ್‌ನಿಂದ ಬಿದ್ದು ವ್ಯಕ್ತಿಯ ಒದ್ದಾಟ, ಮಾನವೀಯತೆ ಮರೆತ ಜನತೆ!

Suvarna News   | Asianet News
Published : Mar 06, 2020, 10:19 AM IST
ಧಾರವಾಡ: ಬೈಕ್‌ನಿಂದ ಬಿದ್ದು ವ್ಯಕ್ತಿಯ ಒದ್ದಾಟ, ಮಾನವೀಯತೆ ಮರೆತ ಜನತೆ!

ಸಾರಾಂಶ

ಅಮಾನವೀಯವಾಗಿ ನಡೆದುಕೊಂಡ ಧಾರವಾಡದ ಜನತೆ| ಬೈಕ್‌ನಿಂದ ಬಿದ್ದ ವ್ಯಕ್ತಿ ಜೀವಂತವಾಗಿದ್ದರೂ ಸಾರ್ವಜನಿಕರು ಮುಖದ ಮೇಲೆ ಕರ್ಚಿಫ್‌ ಹಾಕಿ ಮುಚ್ಚಿ ನಿಂತ ಸಾರ್ವಜನಿಕರು| ನಗರದ ಬಾಗಲಕೋಟ ಪೆಟ್ರೋಲ್ ಪಂಪ್ ಬಳಿ ನಡೆದ ಘಟನೆ| 

ಧಾರವಾಡ(ಮಾ.06): ಬೈಕ್‌ನಿಂದ ಬಿದ್ದ ವ್ಯಕ್ತಿ ಜೀವಂತವಾಗಿದ್ದರೂ ಸಾರ್ವಜನಿಕರು ಮುಖದ ಮೇಲೆ ಕರ್ಚಿಫ್‌ ಹಾಕಿ ಮುಚ್ಚಿ ಅಮಾನವೀಯವಾಗಿ ನಡೆದುಕೊಂಡ ಘಟನೆ ನಗರದ ಬಾಗಲಕೋಟ ಪೆಟ್ರೋಲ್ ಪಂಪ್ ಬಳಿ ಗುರುವಾರ ಸಂಜೆ ನಡೆದಿದೆ.

ಮೆಹಬೂಬ್ ಅಲಿ ಬಾಲಾವಾಲೆ(27) ಎಂಬುವರು ಬೈಕ್ ಸ್ಕಿಡ್ ಆಗಿ ಬಿದ್ದು ಒದ್ದಾಡುತ್ತಿದ್ದರು.ಈ ವೇಳೆ ಅಲ್ಲಿದ್ದ ಜನರು ಮೆಹಬೂಬ್ ಅಲಿ ಬಾಲಾವಾಲೆ ಮುಖದ ಮೇಲೆ ಕರ್ಚಿಫ್‌ ಹಾಕಿ ಮಾತನಾಡುತ್ತಾ ನಿಂತಿದ್ದರು. ಆದರೆ, ಮೆಹಬೂಬ್ ಅಲಿ ಬಾಲಾವಾಲೆ ಇನ್ನೂ ಜೀವಂತವಾಗಿಯೇ ಇದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸುಮಾರು ಹೊತ್ತಿನ ಬಳಿಕ ಗಾಯಾಳು ಮೆಹಬೂಬ್‌ ಅವರನ್ನ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೆಹಬೂಬ್‌ ಸಾವನ್ನಪ್ಪಿದ್ದಾರೆ. ಧಾರವಾಡದ ಸರಸ್ವತಪೂರದ ನಿವಾಸಿಯಾಗಿದ್ದಾರೆ. ಧಾರವಾಡ ಸಂಚಾರಿ‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 

PREV
click me!

Recommended Stories

ದುಬಾರೆ ಶಿಬಿರದಲ್ಲಿ ಕಳೆದ 10 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ತಕ್ಷ ಹೆಸರಿನ ಆನೆ ಸಾವು
ಕಾರಲ್ಲ, ಸರ್ಕಾರ ಕೆಲಸಕ್ಕೆ ಓಡಾಡಲು ಹೆಲಿಕಾಪ್ಟರ್, ವಿಮಾನ ಖರೀದಿಗೆ ಡಿಕೆಶಿ ನೇತೃತ್ವದಲ್ಲಿ ಸಭೆ