ಹನಿಟ್ರ್ಯಾಪ್ ನಿಂದ ಹಾವೇರಿ ಟಸ್ಕರ್ ನ ಖೆಡ್ಡಾಕೆ ಬೀಳಿಸಿದ ಅರಣ್ಯಾಧಿಕಾರಿಗಳು, ನಾಲ್ಕೈದು ತಿಂಗಳಿಂದ ಮಲೆನಾಡಿಗರ ನಿದ್ದೆಗೆಡಿಸಿದ್ದ ಒಂಟಿ ಸಲಗ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.25): ಮಲೆನಾಡು ಭಾಗದ ರೈತರ ನಿದ್ದೆ ಗೆಡಿಸಿದ್ದ ಕಾಡಾನೆಯನ್ನು ಸೆರೆ ಹಿಡಿಯುವಲ್ಲಿ ಕೊನೆಗೂ ಅರಣ್ಯಾಧಿಕಾರಿಗಳು ಯಶ್ವಸಿಯಾಗಿದ್ದಾರೆ. ಹೆಣ್ಣಿನ ಮೋಹಕ್ಕೂ ಬೀಳದ ಪುಂಡ ಒಂಟಿ ಸಲಗವೊಂದು ಅರಣ್ಯಾಧಿಕಾರಿಗಳು ಹೈರಾಣುಗುವಂತೆ ಮಾಡಿತ್ತು. ಸತತ ಕಾರ್ಯಾಚರಣೆ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹನಿಟ್ರ್ಯಾಪ್ ನ ಕಾರ್ಯಕತಂತ್ರದ ಮೂಲಕ ಹಾವೇರಿ ಟಸ್ಕರ್ ನ ಖೆಡ್ಡಾಕ್ಕೆ ಬೀಳಿಸುವಲ್ಲಿ ಕೊನೆಗೂ ಯಶಸ್ವಿಯಾಗಿದ್ದಾರೆ.
ಮಲೆನಾಡಲ್ಲಿ ಮೋಹಿನಿ ಬಲೆಗೆ ಬಿದ್ದ ಮದಗಜ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಸಮೀಪ ಎಲೆಮಡಿಲು ಗ್ರಾಮದಲ್ಲಿ ಆನೆ ಸೆರೆಸಿಕ್ಕಿದೆ. ಕಳೆದ ಆರು ದಿನಗಳಿಂದ ನಿರಂತರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದ್ದಿಗಳು ರೈತರ ಬೆಳೆಯನ್ನು ಆನೆ ದಾಳಿಯಿಂದ ರಕ್ಷಣೆ ಮಾಡುವ ಸಲುವಾಗಿ ಹಾವೇರಿ ಟಸ್ಕರ್ ಕಾರ್ಯಾಚರಣೆಯನ್ನು ಆರಂಭಿಸಿದ್ದರು. ಈ ಕಾರ್ಯಾಚರಣೆಯಲ್ಲಿ ಐದು ಸಾಕಾನೆಗಳು 40 ಕ್ಕೂ ಹೆಚ್ಚು ಸಿಬ್ಬಂದಿಗಳು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು. ಆದರೆ ಪುಂಡಾನೆಯನ್ನು ಮಾತ್ರ ಹಿಡಿಯಲು ಸಾಧ್ಯವಾಗಿರಲಿಲ್ಲ. ಹಗಲಿನ ವೇಳೆಯಲ್ಲಿ ದಾಂಧಲೆ ನಡೆಸುವ ಈ ಆನೆಯು ಸಂಜೆಯ ವೇಳೆಯಲ್ಲಿ ಪ್ರಪಾತವಿರುವ ಸ್ಥಳಕ್ಕೆ ತೆರಳುತ್ತಿತ್ತು. ಪ್ರಪಾತದ ಬಳಿಗೆ ತೆರಳಿದಾಗ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿ ಕಂಡುಬಂದಿದ್ದರಿಂದ ಈ ವೇಳೆಯಲ್ಲಿ ಕಾರ್ಯಾಚರಣೆ ಸ್ಥಗಿತಗೊಳ್ಳುತ್ತಿತ್ತು, ಕಾಡಾನೆಯನ್ನು ಟ್ರ್ಯಾಕ್ ಗೆ ತರುವ ಸಲುವಾಗಿ ಸಾಕುಹೆಣ್ಮಾನಗಳು ಎಷ್ಟೇ ಪ್ರಯತ್ನಿಸದರೂ ಬಲೆಗೆ ಬೀಳದೇ ಇದ್ದ ಗಜರಾಜ ಇಂದು ಭಾನುಮತಿಯಎಂಬ ಆನೆಯ ಪ್ರೇಮಪಾಶಕ್ಕೆ ಸಿಲುಕಿ ಖೆಡ್ಡಾಕ್ಕೆ ಬಿದ್ದಿದೆ.
ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ನಿರ್ಮಾಣವಾಗಲಿದೆ ಬೃಹತ್ ಎತ್ತರದ ಹನುಮಂತನ ಪ್ರತಿಮೆ
ಮಲೆನಾಡಿನಲ್ಲಿ ಹಾವೇರಿ ಟಸ್ಕರ್ ಉಪಟಳದಿಂದ ಹೆಚ್ಚು ಹಾನಿ
ಹಾವೇರಿಯಲ್ಲಿ ಸೆರೆ ಹಿಡಿದಿದ್ದ ಈ ಪುಂಡಾನೆಗೆ ಹಾವೇರಿ ಟಸ್ಕರ್‌ನ ಭದ್ರಾ ಅಭಯಾರಣ್ಯಕ್ಕೆ ತಂದುಬಿಟ್ಟಿದ್ದರು. ಭದ್ರಾ ಅಭಯಾರಣ್ಯದಿಂದ ಅರಣ್ಯದ ಮೂಲಕ ಕೊಪ್ಪ ತಾಲೂಕಿನ ಮೇಗುಂದ ಬಳಿ ಬಂದಿದ್ದ ಕಾಡಾನೆ ಇಲ್ಲಿ ದಾಂದಲೆ ಮಾಡಲು ಶುರುಮಾಡಿತ್ತು.ಇದರಿಂದ ರೈತರು ಬೆಳೆ ಬೆಳೆಗಳು ಮಣ್ಣುಲಾಗಿ ಸಾಕಷ್ಟು ಹಾನಿ ಆಗಿತ್ತು. ಆನೆ ಕೊರಳಲ್ಲಿ ರೇಡಿಯೋ ಕಾಲರ್ ಇದ್ದು ಅದು ಇರುವ ನಿಖರ ಜಾಗ ತಿಳಿದಿದ್ದರೂ ಅಧಿಕಾರಿಗಳೂ ಏನೂ ಮಾಡದ ಸ್ಥಿತಿಯಲ್ಲಿದ್ದು ಪುಂಡಾನೆ ಮುಂದೆ ಅಸಹಾಯಕರಾಗಿದ್ದರು. ಮೇಗುಂದ ಎತ್ತರ ಪ್ರದೇಶದ ತುದಿಗೆ ಹೋಗಿ ನಿಲ್ಲುತ್ತಿರುವ ಕಾಡಾನೆ ಎಲ್ಲಿದೆ ಎಂದು ಗೊತ್ತಿದ್ದರೂ ಅಧಿಕಾರಿಗಳು ಏನೂ ಮಾಡಲಾಗಿದ ಸ್ಥಿತಿಯಲಿದ್ದರು.
ಸದ್ಯ ನಿರಂತರ ಕಾರ್ಯಚಾರಣೆ ಫಲವಾಗಿ ಕಾಡಾನೆ ಸೆರೆಯಾಗಿದೆ. ಇದರಿಂದ ಕಳೆದ ನಾಲ್ಕೆದು ತಿಂಗಳುಗಳಿಂದ ಹಾವೇರಿ ಟಸ್ಕರ್ ಕಾಡಾನೆಯ ಉಪಟಳಕ್ಕೆ ಬೇಸತ್ತು ಹೋಗಿದ್ದ ಜಯಪುರ, ಹೇರೂರು, ಎಲೆಮಡಿಲು ಸೇರಿದಂತೆ ಸುತ್ತಮುತ್ತಲಿನ ಭಾಗಗಳ ಗ್ರಾಮಸ್ಥರು ಆನೆ ಸೆರೆಯಾದದ್ದನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ಹೊಲ ಗದ್ದೆಗಳಲ್ಲಿ ಘೀಳಿಟ್ಟು ಅಡಿಕೆ, ಕಾಫಿಯನ್ನು ನಾಶಮಾಡಿದ್ದ ಪುಂಡಾನೆಯು ಖೆಡ್ವಾಕ್ಕೆ ಬಿದ್ದಿರುವುದು ಈ ಭಾಗದ ಕೃಷಿಕರು ಆತಂಕಮುಕ್ತರಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೀತಿಯಲ್ಲಿ ವಾತಾವರಣವನ್ನು ನಿರ್ಮಾಣ ಮಾಡಿದೆ.