ಬೆಳ್ಳಂಬೆಳಗ್ಗೆ ಜಮೀನಿಗೆ ಲಗ್ಗೆ ಇಟ್ಟ ಆನೆ ಜಮೀನನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮಾದಳ್ಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ರೈತ ದೇವರಾಜ್‌ಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಚಾಮರಾಜನಗರ (ಜ.02): ಬೆಳ್ಳಂಬೆಳಗ್ಗೆ ಜಮೀನಿಗೆ ಲಗ್ಗೆ ಇಟ್ಟ ಆನೆ ಜಮೀನನಲ್ಲಿ ಕೆಲಸ ಮಾಡುತ್ತಿದ್ದ ರೈತನ ಮೇಲೆ ದಾಳಿ ಮಾಡಿದ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೆಟ್ಟದ ಮಾದಳ್ಳಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ರೈತ ದೇವರಾಜ್‌ಗೆ ಗಂಭೀರ ಗಾಯವಾಗಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬೆಳಗ್ಗೆ ಜಮೀನಿನಲ್ಲಿದ್ದ ರೈತ ದೇವರಾಜ್ ಮೇಲೆ ಒಂಟಿ ಸಲಗ ಆಗಮಿಸಿ ದಾಳಿ ಮಾಡಿದ್ದು, ರೈತ ಸ್ಥಳದಲ್ಲಿಯೇ ಗಂಭೀರ ಗಾಯಗೊಂಡು ಬಿದ್ದಿದ್ದಾನೆ. ರೈತನ ಚೀರಾಟ ಮತ್ತು ಕೂಗಾಟ ಕೇಳಿ ಆಗಮಿಸಿದ ನೆರೆಹೊರೆ ಹೊಲಗಳ ರೈತರು ದೇವರಾಜ್‌ನನ್ನು ಕೂಡಲೇ ಆಸ್ಪತ್ರೆಗೆ ಕರೆದಯಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ರೈತರು ಒಟ್ಟಾಗಿ ಸೇರಿ ಆನೆಯನ್ನು ಓಡಿಸಲು ಪ್ರಯತ್ನ ಮಾಡಿದರಾದರೂ ಆನೆ ಒಂದಿಂಚೂ ಜಗ್ಗಲಿಲ್ಲ. ಈಗಲೂ ದೇವರಾಜ್‌ನ ಹೊಲದಲ್ಲಿಯೇ ಆನೆ ಬೀಡುಬಿಟ್ಟಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ವಿಚಾರ ತಿಳಿಸಿದರೂ ಅರಣ್ಯಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
Wild elephant attacks: ತೀರ್ಥಹಳ್ಳಿ: ಕುರುವಳ್ಳಿ ಬಳಿ ಕಾಡಾನೆ ಹಾವಳಿ- ಆತಂಕ
ಆರ್‌ಎಫ್‌ಓಗೆ ಗ್ರಾಮಸ್ಥರಿಂದ ತರಾಟೆ: ಆನೆ ದಾಳಿ ಯಿಂದ ಬೇಸತ್ತು ಗ್ರಾಮಸ್ಥರಿಂದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ದೂರಿ ನೀಡಿದರೂ ಸ್ಥಳಕ್ಕೆ ಆಗಮಿಸಿ ಆನೆ ಓಡಿಸವ ಕೆಲಸ ಮಾಡಿರಲಿಲ್ಲ. ಆದರೆ, ಈಗ ಆನೆ ದಾಳಿಯಿಂದ ರೈತನು ಗಂಭೀರ ಗಾಯಗೊಂಡು ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಸಂದರರ್ಭದಲ್ಲಿ ಆರ್‌ಎಫ್‌ಓ ಅಧಿಕಾರಿ ಆಗಮಿಸಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಅಧಿಕಾರಿಗೆ ತರಾಟೆ ತೆಗೆದುಕೊಂಡರು. ಬಂಡೀಪುರದ ಮದ್ದೂರು ವಲಯದ ಹೊಂಗಹಳ್ಳಿಯಲ್ಲಿ ಆರ್‌ಎಫ್ಓ ಮಲ್ಲೇಶ್‌ಗೆ ದಿಗ್ಬಂಧನ ಹಾಕಿದ್ದಾರೆ.
ಕಾರ್ಯ ನಿರ್ವಹಿಸದ ಟಾಸ್ಕ್ ಫೋರ್ಸ್: ಗ್ರಾಮದ ಜಮೀನುಗಳಿಗೆ ಆಗಾಗ್ಗೆ ಕಾಡಾನೆಗಳು ಲಗ್ಗೆ ಇಟ್ಟು ಬೆಳೆ ಹಾನಿ ಮಾಡುತ್ತಿವೆ. ಇಂದೂ ಸಹ ಮೂರ್ತಿ ಎಂಬ ರೈತನ ಜಮೀನಿಗೆ ಕಾಡಾನೆ ದಾಳಿ ಇಟ್ಟು ಬೆಳೆ ಹಾನಿ ಮಾಡಿದೆ. ಇದಕ್ಕೆಲ್ಲ ಅರಣ್ಯಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ರೈತರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಆನೆ ದಾಳಿಯನ್ನು ತಡೆಯುವ ಉದ್ದೇಶದಿಂದ ಸರ್ಕಾರದಿಂದ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದರೂ ಈ ತಂಡದಲ್ಲಿರುವ ಯಾವುದೇ ಅಧಿಕಾರಿ ಮತ್ತು ಸಿಬ್ಬಂದಿ ಇಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಡಾನೆ ದಾಳಿ: ನಾಲ್ಕು ಎಕರೆಯಲ್ಲಿನ ಅಡಿಕೆ,ಬಾಳೆ ಬೆಳೆ ಸಂಪೂರ್ಣ ನಾಶ
ವಿಷಪೂರಿಗ ಆಹಾರ ಸೇವಿಸಿ 11 ಕುರಿಗಳ ಸಾವು: ವಿಷಪೂರಿತ ಮೇವು ತಿಂದು 11 ಕುರಿಗಳ ಸಾವನ್ನಪ್ಪಿದ ಘಟನೆ ಚಾಮರಾಜನಗರ ತಾಲೋಕು ಭೋಗಾಪುರದಲ್ಲಿ ಇಂದು ನಡೆದಿದೆ. ದೊಡ್ಡಮ್ಮ ಎಂಬ ರೈತ ಮಹಿಳೆಗೆ ಸೇರಿದ ಕುರಿಗಳು ಜಮೀನಿನಲ್ಲಿ ಮೇಯ್ದು ಮನೆಗೆ ಬಂದು ನೀರು ಕುಡಿದ ನಂತರ ಮೃತಪಟ್ಟಿವೆ. ಕುರಿಗಳು ಜಮೀನಿನಲ್ಲಿ ವಿಷಪೂರಿತ ಬೆಳೆ ತಿಂದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪಶುಸಂಗೋಪನೆ ಇಲಾಖೆ ಅಧಿಕಾರಿಗಳ ಭೇಟಿ ನೀಡಿದ್ದಾರೆ. ಮೃತ ಪಟ್ಟ ಕುರಿಗಳಿಗೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.