ಡಿಸಿಎಂ ಡಿ.ಕೆ.ಶಿವಕುಮಾರ್ ತವರಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತನ ಬಲಿ!

By Sathish Kumar KHFirst Published Dec 27, 2023, 9:05 PM IST
Highlights

ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ಜಮೀನಿಗೆ ಹೋದಾಗ ರೈತನ್ನು ತುಳಿದು ಸಾಯಿಸಿದೆ.

ರಾಮನಗರ (ಡಿ.27): ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತವರು ಕ್ಷೇತ್ರ ಕನಕಪುರ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬ ರೈತ ಬಲಿಯಾಗಿದ್ದಾರೆ. ಜಮೀನಿಗೆ ಹೋದಾಗ ರೈತನ್ನು ತುಳಿದು ಸಾಯಿಸಿದೆ.

ರಾಜ್ಯದಲ್ಲಿ ಈಗಾಗಲೇ ಕಾಡಾನೆ ದಾಳಿ ಪ್ರಕರಣ ತೀವ್ರ ಹೆಚ್ಚಳವಾಗಿದೆ. ಆನೆಗಳನ್ನು ಹಿಮ್ಮೆಟ್ಟಿಸಲು ಟಾಸ್ಕ್‌ ಫೋರ್ಸ್‌ ರಚನೆ ಮಾಡಿದಾಗ್ಯೂ ಕೂಡ ಆನೆಗಳ ದಾಳಿಯಿಂದ ರೈತರ ಸಾವಿನ ಸಂಖ್ಯೆ ಮಾತ್ರ ನಿಲ್ಲುತ್ತಿಲ್ಲ. ಇನ್ನು ಡಿಸಿಎಂ ತವರು ಕ್ಷೇತ್ರ ಕನಕಪುರದಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿಯೇ ಇದೆ. ಮೂರ್ನಾಲ್ಕು ತಿಂಗಳ ಹಿಂದೆ ಕನಕಪುರ, ಚನ್ನಪಟ್ಟಣ ತಾಲೂಕುಗಳಲ್ಲಿ ಕಾಡಾನೆ ದಾಳಿಗೆ ಇಬ್ಬರು ರೈತರು ಬಲಿಯಾಗಿದ್ದರು. ಈ ವೇಳೆ ಸ್ವತಃ ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಅವರು ಮೃತರ ಕುಟುಂಬವನ್ನು ಭೇಟಿ ಮಾಡಿ ಪರಿಹಾರವನ್ನು ನೀಡಿ, ಆನೆ ದಾಳಿ ತಡೆಗಟ್ಟುವ ಭರವಸೆ ನೀಡಿದ್ದರು. ಆದರೂ, ಈವರೆಗೆ ಆನೆ ದಾಳಿಯನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆಯೇ ಎಂಬ ಆರೋಪವೂ ಕೇಳಿಬರುತ್ತಿದೆ.

ಪ್ರಯಾಣಿಕರಿಗೆ ಅಭಯ ಕೊಟ್ಟ ಕೆಎಸ್‌ಆರ್‌ಟಿಸಿ: ಅಪಘಾತ ಪರಿಹಾರ ಮೊತ್ತ 10 ಲಕ್ಷ ರೂ.ಗೆ ಹೆಚ್ಚಳ!

ಕನಕಪುರ ತಾಲೂಕಿನ ಬನ್ನಿಮುಕ್ಕೊಡ್ಲು ಗ್ರಾಮದ ಬಳಿಯ ಕಾವೇರಿ ವನ್ಯಜೀವಿ ವಲಯದ ಕೋಡಿಹಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಕಾಡಾನೆ ರೈತನನ್ನು ತುಳಿದು ಸಾಯಿಸಿದೆ. ಮೃತ ರೈತನನ್ನು ರಾಮಚಂದ್ರಯ್ಯ (50) ಎಂದು ಗುರುತಿಸಲಾಗಿದೆ. ಮೃತ ರಾಮಚಂದ್ರಯ್ಯ ನಿನ್ನೆ ಕುರಿ ಮೇಯಿಸಲು ಹೋಗಿದ್ದು, ಒಂದು ದಿನವಾದರೂ ವಾಪಸ್‌ ಬಂದಿರಲಿಲ್ಲ. ಇಂದು ಸಂಜೆ ಹಾಗೂ ರಾತ್ರಿ ವೇಳೆ ರೈತನನ್ನು ಹುಡುಕಿದರೂ ಸಿಕ್ಕಿರಲಿಲ್ಲ. ಇಂದು ಬೆಳಗ್ಗೆ ಕಾಡಿನ ಪಕ್ಕದ ಜಮೀನಿನ ಬಳಿ ರೈತನ ಶವ ಪತ್ತೆಯಾಗಿದೆ. 

200 ಸಂಚಿಕೆ ಪೂರೈಸಿದ ಭೂಮಿಗೆ ಬಂದ ಭಗವಂತ: ಹೊರಗೆ ಹಾಕೊಳ್ಳೋ ರಾಜಾ ಚೆಡ್ಡಿ ಎಲ್ಲಿ ಸಿಗುತ್ತೆಂದು ಕೇಳಿದ ಅಭಿಮಾನಿ!

ಕುರಿ ಮೇಯಿಸುವಾಗ ಕಾಡಾನೆ ದಾಳಿ: ಕಳೆದ ಹದಿನೈದು ದಿನಗಳಲ್ಲಿ ರಾಮನಗರ ಜಿಲ್ಲೆಯಲ್ಲಿ ಎರಡನೇ ಬಲಿಯಾಗಿದೆ. ಇನ್ನು ಇಂದು ಬೆಳಗ್ಗೆ ಆನೆದಾಳಿಯಿಂದ ರೈತ ಬಲಿಯಾದ ವಿಷಯ ತಿಳಿದು ಅರಣ್ಯಾಧಿಕಾರಿಗಳು ಭೇಟಿ ಮಾಡಿ ಪರಿಶೀಲನೆ ಮಾಡಿದ್ದಾರೆ. ಇನ್ನು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಗಿದೆ. ಕಾಡಾನೆ ಹಾವಳಿ ತಪ್ಪಿಸದ ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿರಂತರ ಕಾಡಾನೆ ಹಾವಳಿಗೆ ಸ್ಥಳೀಯ ಜನರು ಕಂಗೆಟ್ಟಿದ್ದು, ಜಮೀನಿಗೆ ಹೋದವರು ವಾಪಸ್ ಬರುವುದೇ ಅನುಮಾನ ಎಂಬಂತಾಗಿದೆ. ರಾತ್ರಿ ವೇಳೆ ರೈತರು ಜಮೀನಿಗೆ ಹೋಗಲು ಭಯಪಡುವಂತಾಗಿದೆ.

click me!