ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಮಾ.4ರಂದು ಚುನಾವಣೆ ಘೋಷಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ದಾವಣಗೆರೆ ಪಾಲಿಕೆ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
ದಾವಣಗೆರೆ (ಫೆ.22) : ಮಹಾನಗರ ಪಾಲಿಕೆಯ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಮಾ.4ರಂದು ಚುನಾವಣೆ ಘೋಷಿಸಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು, ದಾವಣಗೆರೆ ಪಾಲಿಕೆ ಚುನಾವಣಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ಆದೇಶ ಹೊರಡಿಸಿದ್ದಾರೆ.
ಪರಿಶಿಷ್ಟಪಂಗಡಕ್ಕೆ ಮೀಸಲಾದ ಮೇಯರ್(Davanagere Mayor election) ಸ್ಥಾನ ಹಾಗೂ ಸಾಮಾನ್ಯ ಮಹಿಳೆಗೆ ಮೀಸಲಾದ ಉಪ ಮೇಯರ್ ಸ್ಥಾನಗಳಿಗೆ ಮಾ.4ರಂದು ಮಧ್ಯಾಹ್ನ 12ರಿಂದ 1ರವರೆಗೆ ನಾಮಪತ್ರಗಳನ್ನು ಸ್ವೀಕರಿಸಲಾಗುವುದು. ಮಧ್ಯಾಹ್ನ 3ರಿಂದ ಸಭೆ ಆರಂಭವಾಗಿ, ಹಾಜರಾತಿ ಪಡೆಯಲಾಗುವುದು ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಮಹಾನಗರ ಪಾಲಿಕೆ(Davanagere mahanagar corporation) ಸಭಾಂಗಣದಲ್ಲೇ ಮೇಯರ್-ಉಪ ಮೇಯರ್ ಸ್ಥಾನಗಳಿಗೆ ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕರಿಸಲಾಗುವುದು. ಮಧ್ಯಾಹ್ನ 3 ಗಂಟೆ ನಂತರ ನಾಮಪತ್ರಗಳ ಪರಿಶೀಲನೆ, ಕ್ರಮಬದ್ಧ ನಾಮಪತ್ರಗಳ ಘೋಷಣೆ, ನಾಮಪತ್ರ ಹಿಂಪಡೆಯಲು ಕಾಲಾವಕಾಶ, ಅಂತಿಮ ಉಮೇದುವಾರರ ಪಟ್ಟಿಘೋಷಿಸಲಾಗುವುದು ಎಂದು ಹೇಳಿದ್ದಾರೆ.
undefined
ಮುಳ್ಳಿನ ಮೇಲೆಯೇ ಕುಣಿತ, ಆದರೂ ರಕ್ತ ಬರಲ್ಲ!
ಕೈ ಎತ್ತುವ ಮೂಲಕ ಮತದಾನ:
ಅಂತಿಮ ಅಭ್ಯರ್ಥಿಗಳ ಪಟ್ಟಿಘೋಷಣೆ ನಂತರ ಅವಿರೋಧ ಆಯ್ಕೆಯಾದಲ್ಲಿ ಫಲಿತಾಂಶ ಘೋಷಣೆ ಮಾಡಲಾಗುವುದು. ಚುನಾವಣೆ ಅಗತ್ಯವಿದ್ದಲ್ಲಿ ಕೈ ಎತ್ತುವ ಮೂಲಕ ಮತದಾನ ಪ್ರಕ್ರಿಯೆ ಕೈಗೊಳ್ಳಲಾಗುವುದು. ನಂತರ ಸದಸ್ಯರ ಸಹಿ ದಾಖಲಿಸುವುದು, ಮತಗಳ ಎಣಿಕೆ ಹಾಗೂ ಫಲಿತಾಂಶ ಘೋಷಣೆ ಮಾಡಲಾಗುವುದು ಎಂದು ಪಾಲಿಕೆ(ಚುನಾವಣೆ) ಅಧ್ಯಕ್ಷಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿಗೆ ಮೇಯರ್ ಸ್ಥಾನ ಬಿಡುವ ಅನಿವಾರ್ಯತೆ; ಚುರುಕಾದ ವಿಪಕ್ಷ ಕಾಂಗ್ರೆಸ್ ಸದಸ್ಯರು
ದಾವಣಗೆರೆ: ಪಾಲಿಕೆಯಲ್ಲಿ ಬಿಜೆಪಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದರೂ, ಮೇಯರ್ ಸ್ಥಾನಕ್ಕೆ ಆಡಳಿತ ಪಕ್ಷದಲ್ಲಿ ಒಬ್ಬ ಅಭ್ಯರ್ಥಿಯೂ ಇಲ್ಲ. ಈಗಾಗಲೇ ಕಳೆದ ಸಲ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಪಕ್ಷೇತರ ಸದಸ್ಯನಾಗಿ ಆಯ್ಕೆಯಾಗಿ, ಕಾಂಗ್ರೆಸ್ಸಿನಲ್ಲಿ ಗುರುತಿಸಿಕೊಂಡಿದ್ದ ಸದಸ್ಯಗೆ ಅನಾಯಾಸವಾಗಿ ಒಲಿದಿತ್ತು. ಇದೀಗ ಮೇಯರ್ ಸ್ಥಾನವೂ ಪರಿಶಿಷ್ಟಪಂಗಡಕ್ಕೆ ಮೀಸಲಾದ ಹಿನ್ನೆಲೆಯಲ್ಲಿ ತನ್ನಲ್ಲಿ ಎಸ್ಟಿಸದಸ್ಯರಿಲ್ಲದ ಕಾರಣಕ್ಕೆ ಬಿಜೆಪಿ ಮೇಯರ್ ಪಟ್ಟವನ್ನು ಅನಿವಾರ್ಯವಾಗಿ ವಿಪಕ್ಷ ಕಾಂಗ್ರೆಸ್ಸಿಗೆ ಬಿಟ್ಟುಕೊಡಬೇಕಿದೆ. ಕಾಂಗ್ರೆಸ್ ಪಕ್ಷದ ಸದಸ್ಯರ ಪೈಕಿ ಐವರು ಪರಿಶಿಷ್ಟಪಂಗಡಕ್ಕೆ ಸೇರಿದ್ದಾರೆ. ಈ ಪೈಕಿ ಇಬ್ಬರು ಮಹಿಳೆಯರು. ಇಲ್ಲಿನ 7ನೇ ವಾರ್ಡ್ ಸದಸ್ಯ ವಿನಾಯಕ ಪೈಲ್ವಾನ್, 20ನೇ ವಾರ್ಡ್‌ನ ಮೀನಾಕ್ಷಿ ಜಗದೀಶ, 31ನೇ ವಾರ್ಡ್‌ನ ಪಾಮೇನಹಳ್ಳಿ ನಾಗರಾಜ, 35ನೇ ವಾರ್ಡ್‌ನ ಸವಿತಾ ಗಣೇಶ ಹುಲ್ಮನಿ ಹಾಗೂ 43ನೇ ವಾರ್ಡ್‌ನ ಶಾಮನೂರು ನಾಗರಾಜ ಕಲ್ಲಳ್ಳಿ ಹೀಗೆ ಐವರು ಸದಸ್ಯರು ಇದ್ದಾರೆ. ಐವರು ಪಕ್ಷೇತರರ ಪೈಕಿ ನಾಲ್ವರು ಬಿಜೆಪಿ ಜೊತೆಗೆ ಗುರುತಿಸಿಕೊಂಡರೆ, ಓರ್ವ ಸದಸ್ಯ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿದ್ದಾರೆ.
ಎಸ್ಸೆಸ್ಸೆಂ ಸೂಚಿಸಿದವರಿಗೆ ಮೇಯರ್ ಪಟ್ಟ
ವಿಧಾನಸಭೆ ಚುನಾವಣೆ(Assembly election) ಸಮೀಪಿಸುತ್ತಿರುವ ಬೆನ್ನಲ್ಲೇ ಉತ್ತರ-ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಒಳಗೊಂಡ ಮಹಾನಗರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ಮೇಯರ್(Congress mayor) ಸ್ಥಾನವು ಅನಾಯಾಸವಾಗಿ ಒಲಿದು ಬರುತ್ತಿರುವ ಸಂತೋಷದಲ್ಲಿದೆ. ಇಬ್ಬರು ಮಹಿಳೆಯರು ಸೇರಿ ಕಾಂಗ್ರೆಸ್‌ನ ಐವರು ಎಸ್‌ಟಿ ಸದಸ್ಯರ ಪೈಕಿ ಯಾರೆಂಬುದೇ ಸದ್ಯದ ಕುತೂಹಲ. ಪರಿಶಿಷ್ಟಪಂಗಡಕ್ಕೆ ಮೀಸಲಾದರೆ ಪುರುಷ ಅಥವಾ ಮಹಿಳಾ ಸದಸ್ಯರಾದರೂ ಸ್ಪರ್ಧಿಸಬಹುದು. ಸದ್ಯ ವಿಪಕ್ಷ ಕಾಂಗ್ರೆಸ್‌ಗೆ ಮೇಯರ್ ಪಟ್ಟತಂದು ಕೊಡಲು ಸಜ್ಜಾಗಿರುವ ಐವರು ಸದಸ್ಯರಲ್ಲಿ ತಮ್ಮ ನಾಯಕರಾದ ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ ಯಾರಿಗೆ ಸೂಚಿಸುತ್ತಾರೋ ಅವರೇ ಮೇಯರ್ ಆಗುತ್ತಾರೆ. ನಮ್ಮ ಐವರಲ್ಲಿ ಯಾರಿಗೆ ಮೇಯರ್ ಮಾಡಿದರೂ ನಾವು ಖುಷಿಪಡುತ್ತೇವೆ. ನಾನೇ ಆಗಬೇಕೆಂಬುದಾಗಿ ನಾಯಕರಿಗೆ ಒತ್ತಡ ಹೇರಿಲ್ಲ, ಪಕ್ಷಕ್ಕೆ ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಮೇಯರ್ ಪಟ್ಟಒಲಿದು ಬರುವುದು ಶುಭ ಸೂಚನೆ ಎನ್ನುತ್ತಾರೆ ಪರಿಶಿಷ್ಟಪಂಗಡದ ಕಾಂಗ್ರೆಸ್‌ನ ಸದಸ್ಯರು.
Karnataka Budget 2023: ಮಧ್ಯ ಕರ್ನಾಟಕ ಜಿಲ್ಲೆ ಮನ ತಣಿಸದ ಬಜೆಟ್
ಪಾಲಿಕೆಯಲ್ಲಿ ಪಕ್ಷಗಳ ಬಲಾಬಲ