MLC Election: ಫಲಿತಾಂಶಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಹೈಕೋರ್ಟ್‌ಗೆ ಮೇಲ್ಮನವಿ

By Kannadaprabha NewsFirst Published Dec 11, 2021, 8:26 AM IST
Highlights

*   ಪರಿಷತ್‌ ಫಲಿತಾಂಶಕ್ಕೆ ತಡೆಯಾಜ್ಞೆ: ಚುನಾವಣಾ ಆಯೋಗ ಮೇಲ್ಮನವಿ
*   ಡಿ. 13ರಂದು ಮೇಲ್ಮನವಿ ವಿಚಾರಣೆಗೆ ವಿಭಾಗೀಯ ಪೀಠ ನಿರ್ಧಾರ
*   ಡಿ.14ರಂದು ಮತ ಎಣಿಕೆ 
 

ಬೆಂಗಳೂರು(ಡಿ.11):  ನ್ಯಾಯಾಲಯದ(Court) ಅನುಮತಿ ಇಲ್ಲದೆ ವಿಧಾನ ಪರಿಷತ್ತಿನ(Vidhan Parishat Election) ಬೆಂಗಳೂರು(Bengaluru) ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಚುನಾವಣೆಯ ಫಲಿತಾಂಶ(Result) ಪ್ರಕಟಿಸಬಾರದು ಎಂದು ಹೈಕೋರ್ಟ್‌(High Court) ಏಕ ಸದಸ್ಯ ನ್ಯಾಯಪೀಠ ಗುರುವಾರಷ್ಟೇ ಹೊರಡಿಸಿದ ಮಧ್ಯಂತರ ಆದೇಶ ಪ್ರಶ್ನಿಸಿ ಚುನಾವಣಾ ಆಯೋಗ ಮೇಲ್ಮನವಿ ಸಲ್ಲಿಸಿದೆ. ಶುಕ್ರವಾರ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಚುನಾವಣಾ ಆಯೋಗದ (Election Commission) ಪರ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು ಹಾಜರಾಗಿ, ತುರ್ತು ಇರುವುದರಿಂದ ಮೇಲ್ಮನವಿಯನ್ನು(Appeal) ಇಂದೇ (ಶುಕ್ರವಾರ) ವಿಚಾರಣೆಗೆ ಪರಿಗಣಿಸುವಂತೆ ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ವಿಭಾಗೀಯ ಪೀಠ, ಏಕಸದಸ್ಯ ನ್ಯಾಯಪೀಠದ ಆದೇಶದಿಂದ ಚುನಾವಣೆಗೆ ಅಡ್ಡಿ ಆಗಿಲ್ಲ. ನಿಗದಿಯಂತೆ ಚುನಾವಣೆ ನಡೆದಿದೆ. ಮತ ಎಣಿಕೆ ಡಿ.14ರಂದು ನಡೆಯಲಿದೆ. ಆದ್ದರಿಂದ ಇನ್ನೂ ಸಮಯವಿದ್ದು, ಡಿ.13ರಂದು ಮೇಲ್ಮನವಿಯ ವಿಚಾರಣೆ ನಡೆಸುವುದಾಗಿ ತಿಳಿಸಿತು.

ವಿಧಾನ ಪರಿಷತ್ತಿನ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕು ಕಲ್ಪಿಸಿ ಜಿಲ್ಲಾಧಿಕಾರಿ ಹೊರಡಿಸಿದ ಆದೇಶ ಪ್ರಶ್ನಿಸಿ ಸಲ್ಲಿಸಿದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಏಕಸದಸ್ಯ ನ್ಯಾಯಪೀಠ ಗುರುವಾರ (ಡಿ.9) ವಿಚಾರಣೆ ನಡೆಸಿತ್ತು. ಜತೆಗೆ, ನಾಮನಿರ್ದೇಶಿತ ಸದಸ್ಯರಿಗೆ ಮತದಾನಕ್ಕೆ(Vote) ಅವಕಾಶ ಮಾಡಿಕೊಟ್ಟಏಕಸದಸ್ಯ ನ್ಯಾಯಪೀಠ, ನ್ಯಾಯಾಲಯದ ಅನುಮತಿ ಇಲ್ಲದೆ ಫಲಿತಾಂಶ ಪ್ರಕಟಿಸಬಾರದು ಎಂದು ಮಧ್ಯಂತರ ಆದೇಶ ನೀಡಿತ್ತು.

Karnataka: ವಿಕಲಚೇತನರು, ವಿಧವೆಯರಿಗೆ ಸೈಟ್‌ ಹಂಚದ ಸರ್ಕಾರಕ್ಕೆ ಹೈಕೋರ್ಟ್‌ ಚಾಟಿ

ಹೀಗಾಗಿ ಮೇಲ್ಮನವಿ ಸಲ್ಲಿಸಿರುವ ಚುನಾವಣಾ ಆಯೋಗ, ಮತದಾನಕ್ಕೆ ಒಂದು ದಿನ ಬಾಕಿ ಇರುವಾಗ ಕೊನೆ ಕ್ಷಣದಲ್ಲಿ ಈ ತೀರ್ಪು ನೀಡಲಾಗಿದೆ. ಉಳಿದ 19 ಕ್ಷೇತ್ರಗಳ ಫಲಿತಾಂಶದ ವಿಚಾರದಲ್ಲೂ ಇದೇ ಆದೇಶ ಪಾಲಿಸುವಂತೆ ಕೆಲ ರಾಜಕೀಯ ಪಕ್ಷಗಳು(Political Parties) ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿವೆ. ಇದೇ ರೀತಿಯಾದರೆ ಚುನಾವಣಾ ವೇಳಾಪಟ್ಟಿಯಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ. ಡಿ.14ರಂದು ಮತ ಎಣಿಕೆ ನಡೆಯಲಿದೆ. ಅದೇ ದಿನ ಫಲಿತಾಂಶ ಪ್ರಕಟಿಸಬೇಕಾಗಿದೆ. ಆದ್ದರಿಂದ ಏಕ ಸದಸ್ಯ ನ್ಯಾಯಪೀಠದ ಆದೇಶವನ್ನು ತಡೆಹಿಡಿಯಬೇಕು ಎಂದು ಎಎಜಿ ಧ್ಯಾನ್‌ ಚಿನ್ನಪ್ಪ ಅವರು ವಿಭಾಗೀಯ ಪೀಠವನ್ನು ಕೋರಿದರು.

ವಿಧಾನ ಪರಿಷತ್ ಚುನಾವಣೆ, ಎಲ್ಲೆಲ್ಲಿ ಎಷ್ಟು ಮತದಾನ?

ಕರ್ನಾಟಕದಲ್ಲಿ(Karnataka) (ಶುಕ್ರವಾರ) 25 ಸ್ಥಾನಗಳಿಗೆ ವಿಧಾನ ಪರಿಷತ್ ಚುನಾವಣೆ ಮುಕ್ತಾಯಗೊಂಡಿದ್ದು, ಯಾವುದೇ ಅಹಿತರ ಘಟನೆ ನಡೆಯದೇ ಶಾಂತಿಯುತವಾಗಿ ಮತದಾನ ಅಂತ್ಯವಾಗಿದೆ. ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್ ಇತರೆ ಸದಸ್ಯರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದು, ಬಹುತೇಕ ಕಡೆಗಳಲ್ಲಿ ಶೇಕಡಾ 99ರಷ್ಟು  ಪ್ರಮಾಣದಲ್ಲಿ ಮತದಾನ (Voting) ಆಗಿರವುದು ವಿಶೇಷ.

ಕೆಲವೆಡೆ ಮತದಾನ ಪ್ರಕ್ರಿಯೆಯಲ್ಲಿ ಅಡಚಣೆ ಉಂಟಾದ ಘಟನೆಗಳು ನಡೆದಿದ್ದರೂ ಶಾಂತಿಯುತ ಮತದಾನವಾಗಿದ್ದು, ಇದೀಗ ಸೋಲು-ಗೆಲುವಿನ ಲೆಕ್ಕಾಚಾರ ಶುರುವಾಗಿದೆ. ಇನ್ನು ಕ್ಷೇತ್ರವಾರು ಶೇಕಡಾ ಮತದಾನದ ವಿವರ ಈ ಕೆಳಗಿನಂತಿದೆ ನೋಡಿ. 

* ಬೀದರ್-99.83
* ಧಾರವಾಡ- 99.68
* ದಕ್ಷಿಣ ಕನ್ನಡ- 99.71
* ಬೆಂಗಳೂರು ನಗರ- 99.86
*ಬೆಂಗಳೂರು ಗ್ರಾಮಾಂತರ-99.90
*ಕಲಬುರಗಿ- 99.73
*ರಾಯಚೂರು- 99.86
* ಚಿಕ್ಕಮಗಳೂರು-99.78
* ವಿಜಯಪುರ-99.55
* ಬಳ್ಳಾರಿ-99.81
*ಹಾಸನ- 99.78
* ಕೋಲಾರ- 99.96
*ಬೆಳಗಾವಿ- 99.98
* ಚಿತ್ರದುರ್ಗ-99.88
* ಕೊಡಗು- 99.70
* ತುಮಕೂರು- 99.78
* ಉತ್ತರ ಕನ್ನಡ- 99.76
* ಶಿವಮೊಗ್ಗ- 99.86
* ಮೈಸೂರು-99.73
* ಮಂಡ್ಯ- 99.85
 

click me!