ಶಿಕ್ಷಣ ಬದಲಾವಣೆಯ ಸಾಧನ: ವೆಂಕಯ್ಯ ನಾಯ್ಡು

By Govindaraj S  |  First Published Nov 12, 2022, 1:07 PM IST

‘ಶಿಕ್ಷಣ ಬದಲಾವಣೆಯ ಶಕ್ತಿಯುತ ಸಾಧನವಾಗಿದ್ದು, ದೇಶದ ಭವಿಷ್ಯದ ದಿಕ್ಸೂಚಿಯನ್ನು ಸಕಾರಾತ್ಮಕವಾಗಿ ಬದಲಿಸುತ್ತದೆ’ ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು. 


ಬೆಂಗಳೂರು (ನ.12): ‘ಶಿಕ್ಷಣ ಬದಲಾವಣೆಯ ಶಕ್ತಿಯುತ ಸಾಧನವಾಗಿದ್ದು, ದೇಶದ ಭವಿಷ್ಯದ ದಿಕ್ಸೂಚಿಯನ್ನು ಸಕಾರಾತ್ಮಕವಾಗಿ ಬದಲಿಸುತ್ತದೆ’ ಎಂದು ಮಾಜಿ ಉಪರಾಷ್ಟ್ರಪತಿ ಎಂ.ವೆಂಕಯ್ಯನಾಯ್ಡು ಹೇಳಿದರು. ರೇವಾ ವಿಶ್ವವಿದ್ಯಾನಿಲಯದ 7ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಶೈಕ್ಷಣಿಕ ಕ್ಷೇತ್ರದಲ್ಲಿ ಭ್ರಷ್ಟಾಚಾರಕ್ಕಾಗಲಿ, ಆಮಿಷಕ್ಕಾಗಲಿ ಅವಕಾಶ ನೀಡಬಾರದು. ಶಿಕ್ಷಣ ಕ್ಷೇತ್ರದ ಉನ್ನತಿಗಾಗಿ ಸರ್ಕಾರಿ, ಖಾಸಗಿ ಕ್ಷೇತ್ರಗಳು ಒಗ್ಗಟ್ಟಾಗಿ ಶ್ರಮಿಸಬೇಕು. ದೇಶವನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಹೆಚ್ಚು ಶಕ್ತಿಯುತಗೊಳಿಸಲು ಸಂಶೋಧನೆಗೆ ಹೆಚ್ಚು ಒತ್ತು ನೀಡಬೇಕಿದೆ. 

ಉನ್ನತ ಶೈಕ್ಷಣಿಕ ಮೌಲ್ಯ ಹೊಂದಿರುವ ರೇವಾ ವಿ.ವಿಯಂತಹ ಹಲವು ಖಾಸಗಿ ವಿವಿಗಳು ದೇಶದಲ್ಲಿದ್ದು, ದೇಶ ಕಟ್ಟುವ ಕಾಯಕದಲ್ಲಿ ಕೈ ಜೋಡಿಸಬೇಕು’ ಎಂದು ಕರೆ ನೀಡಿದರು. ಶಿಕ್ಷಣ ಕೇವಲ ಪದವಿ, ಉದ್ಯೋಗಕ್ಕಾಗಿ ಮಾತ್ರ ಇರುವಂಥದ್ದಲ್ಲ. ಶಿಕ್ಷಣದಿಂದ ಜ್ಞಾನ ವೃದ್ಧಿಪಡಿಸಿಕೊಳ್ಳಬಹುದು. ನಮ್ಮ ಬದುಕನ್ನು ಸಾರ್ಥಕ ರೀತಿಯಲ್ಲಿ ಶಕ್ತಿಯುತಗೊಳಿಸಲು ಶಿಕ್ಷಣಕ್ಕಿಂತ ಅನ್ಯ ಸಾಧನವಿಲ್ಲ. ಪ್ರಜ್ಞೆ ಮತ್ತು ಜ್ಞಾನ ಭಿನ್ನವಾದ ಅಂಶಗಳಾಗಿದ್ದು, ಇವೆರಡನ್ನು ಸಮ್ಮಿಳಿತಗೊಳಿಸಿಕೊಂಡು ಮುಂದುವರಿದರೆ ಯಶಸ್ಸು ಸಾಧಿಸಬಹುದು. ಕನಿಷ್ಠ 5ನೇ ತರಗತಿವರೆಗೆ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯಬೇಕು ಎಂದು ಅವರು ಪ್ರತಿಪಾದಿಸಿದರು ಎಂದರು.

Tap to resize

Latest Videos

ಲಿಂಗರಾಜು ಹತ್ಯೆ: ಮಾಜಿ ಕಾರ್ಪೋರೇಟರ್‌ ಖುಲಾಸೆ

ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಮಾತನಾಡಿ, ‘2004ರಲ್ಲಿ ಸ್ಥಾಪಿತವಾದ ರೇವಾ ವಿವಿ ಸಮರ್ಥ ರೀತಿಯ ಶೈಕ್ಷಣಿಕ ಸೇವೆಯ ಮೂಲಕ ಪ್ರಸ್ತುತ ದೇಶದ 50 ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಮುಂಚೂಣಿಯ ಹೆಸರು ಗಳಿಸಿರುವುದು ಸಂತಸದ ವಿಚಾರ. ಕೇವಲ 150 ವಿದ್ಯಾರ್ಥಿಗಳಿಂದ ಆರಂಭಗೊಂಡ ವಿವಿ ಎರಡು ದಶಕದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣ ನೀಡಿರುವುದು ಶ್ಲಾಘನೀಯ’ ಎಂದರು. ಮುಂದಿನ ವರ್ಷದ ವೇಳೆಗೆ ಈ ಪದವಿ ಪಡೆವವರ ಸಂಖ್ಯೆ 5 ಸಾವಿರ ತಲುಪಬಹುದು. ರೇವಾ ವಿವಿ ಕೇವಲ ಶಿಕ್ಷಣ ಮಾತ್ರವಲ್ಲದೆ, ಶೇ.90ರಷ್ಟು ಉದ್ಯೋಗದ ಅವಕಾಶವನ್ನೂ ಕಲ್ಪಿಸಿಕೊಡುವ ಮೂಲಕ ವಿದ್ಯಾರ್ಥಿಗಳ ಬದುಕಿಗೆ ಭದ್ರತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು. ರೇವಾ ವಿ.ವಿ. ಸಹಕುಲಪತಿ ಉಮೇಶ್‌ರಾಜು, ಉಪಕುಲಪತಿ ಡಾ.ಎಂ.ಧನಂಜಯ, ರಿಜಿಸ್ಟ್ರಾರ್‌ಡಾ.ಎನ್‌.ರಮೇಶ್‌ ಸೇರಿ ಸಿಬ್ಬಂದಿಯಿದ್ದರು.

ಯಾವ ಆಕಾರದಲ್ಲಿ ಟಿಪ್ಪು ಪ್ರತಿಮೆ ಮಾಡಬೇಕೆಂದು ನಿರ್ಧಾರವಾಗಿಲ್ಲ: ತನ್ವೀರ್ ಸೇಠ್

4633 ವಿದ್ಯಾರ್ಥಿಗಳಿಗೆ ಪದವಿ: ರೇವಾ ವಿವಿಯ 7ನೇ ಘಟಿಕೋತ್ಸವದಲ್ಲಿ 4633 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗಿದೆ. ಈ ಪೈಕಿ 52 ವಿದ್ಯಾರ್ಥಿಗಳಿಗೆ ಪಿಎಚ್‌ಡಿ, 60 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ವಿತರಿಸಿದ್ದೇವೆ. ಕೋವಿಡ್‌-19ರ ಕಾರಣಕ್ಕಾಗಿ ಕಳೆದ ಎರಡು ವರ್ಷ ಅದ್ಧೂರಿ ಘಟಿಕೋತ್ಸವ ಆಚರಿಸಲಾಗಿರಲಿಲ್ಲ. ಈ ಬಾರಿ 7-8 ಸಾವಿರ ವಿದ್ಯಾರ್ಥಿಗಳ ಸಮಕ್ಷಮದಲ್ಲಿ ಕಾರ್ಯಕ್ರಮ ನಡೆದಿದ್ದು ಸಂತೋಷದ ಸಂಗತಿ. ಪೋಷಕರ ಸಹಕಾರದಿಂದ ವಿವಿ ಯಶಸ್ವು ಸಾಧಿಸಿದೆ ಎಂದು ರೇವಾ ವಿವಿ ಕುಲಪತಿ ಡಾ.ಪಿ.ಶ್ಯಾಮರಾಜು ಹೇಳಿದರು.

click me!