ಹಿರಿಯ ಶಿಕ್ಷಣ ತಜ್ಞ ಗಣೇಶಮೂರ್ತಿ ಹೃದಯಾಘಾತದಿಂದ ನಿಧನ

By Kannadaprabha News  |  First Published Sep 12, 2021, 9:31 AM IST
  • ನ್ಯಾಷನಲ್ ಎಜುಕೇಷನ್ ಸೊಸೈಟಿ ಸಂಸ್ಥೆ ಸ್ಥಾಪನೆ ಮಾಡಿ ಮಲೆನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಗಿದ್ದ ಗಣೇಶ ಮೂರ್ತಿ 
  • ಹೃದಯಾಘಾತದಿಂದ ಶನಿವಾರ ಸಂಜೆ ಗಣೇಶ ಮೂರ್ತಿ ನಿಧನ

ತೀರ್ಥಹಳ್ಳಿ (ಸೆ.12): ನ್ಯಾಷನಲ್ ಎಜುಕೇಷನ್ ಸೊಸೈಟಿ ಸಂಸ್ಥೆ ಸ್ಥಾಪನೆ ಮಾಡಿ ಮಲೆನಾಡಿನ ಶಿಕ್ಷಣ ಕ್ಷೇತ್ರದಲ್ಲಿ ಹೆಸರಾಗಿದ್ದ ಗಣೇಶ ಮೂರ್ತಿ (74) ಹೃದಯಾಘಾತದಿಂದ ಶನಿವಾರ ಸಂಜೆ ಮೃತಪಟ್ಟಿದ್ದಾರೆ. 

ಗಣೇಶ್ ಮೂರ್ತಿ ಅವರು ಶಿವಮೊಗ್ಗದಲ್ಲಿ ಖಾಸಗಿ ಕಾರ್ಯಕ್ರಮಕ್ಕೆ ಭೇಟಿ ನೀಡಿ ಕೋಣಂದೂರು ತೆರಲುವ ವೇಳೆ ಆನಂದಪುರ ಸಮೀಪ ಎದೆ ನೋವು ಕಾಣಿಸಿಕೊಂಡಿದೆ. ಚಾಲಕ ಶಿವಮೊಗ್ಗ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.

Tap to resize

Latest Videos

7 ವರ್ಷದಲ್ಲಿ ದೇಶದ ಶಿಕ್ಷಣ ವ್ಯವಸ್ಥೆ ಚಿತ್ರಣವೇ ಬದಲಾಗಿದ್ದು ಹೀಗೆ!

ಹೊಸನಗರ ತಾಲೂಕು ಗರ್ತಿಕೆರೆ ಬಳಿಯ ಅಮೃತ ಮೂಲದ ಗಣೇಶಮೂರ್ತಿ ಶರಾವತಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕರಾಗಿ, ನ್ಯಾಷನಲ್ ರೆಸಿಡೆನ್ಸಿಯಲ್ ಸ್ಕೂಲ್ ಪ್ರಿನ್ಸಿಪಾಲ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕನ್ನಡ ಸಾಹಿತ್ಯ ಪರಿಷತ್ ಹಿರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಶಿಕ್ಷಣ, ಸಾಹಿತ್ಯ, ಕಲೆ, ಸಮಾಜ ಪರ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ನ್ಯಾಶನಲ್ ಎಜುಕೇಷನ್ ಸೊಸೈಟಿ ರಿಜಿಸ್ಟ್ರಾರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು. 

ಅವರ ಸಮಾಜ ಪರ ಸೇವೆಯನ್ನು ಸಲ್ಲಿಸಿದ್ದು, ಕನ್ನಡ ಸಾಹಿತ್ಯ ಪರಿಷತ್ತಿನ ಹಿರಿಯ ಸದಸ್ಯರು ಪರಿಷತ್ತಿನ‌ ಪೋಷಕರು‌ ಆಗಿದ್ದು ಶಿಕ್ಷಣ ಕ್ಷೇತ್ರದಲ್ಲಿ  ಕ್ರಾಂತಿಯನ್ನು ಮಾಡಿ ತೀರ್ಥಹಳ್ಳಿ ತಾಲೂಕಿನ ಕೋಣಂದೂರು ರಾಜ್ಯ ಮಟ್ಟದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ‌ ಕೇಂದ್ರ ಸ್ಥಾನ ಎಂಬ ಹೆಗ್ಗಳಿಕೆಗೆ ಕಾರಣರಾಗಿದ್ದರು.

ಗಣ್ಯರ ಕಂಬನಿ : ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮದನ್ ಸೇರಿದಂತೆ ಅನೇಕ ಗಣ್ಯರುಪ್ರೊ.ಗಣೇಶಮೂರ್ತಿ ನಿಧನಕ್ಕೆ  ಕಂಬನಿ ಮಿಡಿದಿದ್ದಾರೆ.  ಸಾಹಿತ್ಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ತೀರ್ಥಹಳ್ಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ  ಸತೀಶ್ ಆಡಿನಸರ ತಿಳಿಸಿದ್ದಾರೆ.   ಇನ್ನು ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಗಣಪತಿ ಅವರು ವಿಷಾಧಿಸಿದ್ದಾರೆ. 

click me!