ಬೆಂಗಳೂರಿನ 87 ವಾರ್ಡಲ್ಲಿ 100ಕ್ಕೂ ಹೆಚ್ಚು ಕೇಸ್‌, ಸೋಂಕಿತರ ಸಂಖ್ಯೆ 47000 ಗಡಿಗೆ

By Kannadaprabha News  |  First Published Jul 28, 2020, 8:57 AM IST

ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿದ್ದು, 198 ವಾರ್ಡ್‌ಗಳ ಪೈಕಿ 87 ವಾರ್ಡ್‌ಗಳಲ್ಲಿ 100ಕ್ಕೂ ಅಧಿಕ ಸೋಂಕು ಪ್ರಕರಣಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಇನ್ನು 50 ವಾರ್ಡ್‌ನಲ್ಲಿ 81 ರಿಂದ 100, 43 ವಾರ್ಡ್‌ನಲ್ಲಿ 61 ರಿಂದ 80 ಹಾಗೂ 18 ವಾರ್ಡ್‌ನಲ್ಲಿ 41 ರಿಂದ 60 ಪ್ರಕರಣಗಳಿವೆ ಎಂದು ತಿಳಿಸಿದೆ.


ಬೆಂಗಳೂರು(ಜು.28): ನಗರದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಅಟ್ಟಹಾಸ ಹೆಚ್ಚಾಗುತ್ತಿದ್ದು, 198 ವಾರ್ಡ್‌ಗಳ ಪೈಕಿ 87 ವಾರ್ಡ್‌ಗಳಲ್ಲಿ 100ಕ್ಕೂ ಅಧಿಕ ಸೋಂಕು ಪ್ರಕರಣಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ. ಇನ್ನು 50 ವಾರ್ಡ್‌ನಲ್ಲಿ 81 ರಿಂದ 100, 43 ವಾರ್ಡ್‌ನಲ್ಲಿ 61 ರಿಂದ 80 ಹಾಗೂ 18 ವಾರ್ಡ್‌ನಲ್ಲಿ 41 ರಿಂದ 60 ಪ್ರಕರಣಗಳಿವೆ ಎಂದು ತಿಳಿಸಿದೆ.

ಕಳೆದ 24 ಗಂಟೆಯಲ್ಲಿ (ಸೋಮವಾರ) 50 ವಾರ್ಡ್‌ನಲ್ಲಿ 11 ರಿಂದ 76 ಹೊಸ ಸೋಂಕು ಪ್ರಕರಣ ಪತ್ತೆಯಾಗಿವೆ. 25 ವಾರ್ಡ್‌ನಲ್ಲಿ 9 ರಿಂದ 10 ಪ್ರಕರಣ, 31 ವಾರ್ಡ್‌ನಲ್ಲಿ 7 ರಿಂದ 8 ಪ್ರಕರಣ, 31 ವಾರ್ಡ್‌ನಲ್ಲಿ 5 ರಿಂದ 6 ಪ್ರಕರಣ, 36 ವಾರ್ಡ್‌ನಲ್ಲಿ 3 ರಿಂದ 4 ಪ್ರಕರಣ, 16 ವಾರ್ಡ್‌ನಲ್ಲಿ 1 ರಿಂದ 2 ಪ್ರಕರಣ, 9 ವಾರ್ಡ್‌ನಲ್ಲಿ ಮಾತ್ರ ಯಾವುದೇ ಸೋಂಕು ಪ್ರಕರಣ ಪತ್ತೆಯಾಗಿಲ್ಲ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Latest Videos

undefined

ಸೋಂಕಿತರ ಸಂಖ್ಯೆ 47000 ಗಡಿಗೆ

ನಗರದಲ್ಲಿ ಸೋಮವಾರ 1,470 ಹೊಸ ಕೊರೋನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 46,923ಕ್ಕೆ ಏರಿಕೆಯಾಗಿದೆ. 26 ಮಂದಿ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ನಗರದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ ಒಟ್ಟು 917ಕ್ಕೆ ತಲುಪಿದೆ.

ಕರ್ನಾಟಕ ಶೀಘ್ರ ದೇಶದ ಕೊರೋನಾ ಹಾಟ್‌ಸ್ಪಾಟ್‌: ರಾಜ್ಯಕ್ಕೆ ಹೊಸ ಆತಂಕ!

ಇನ್ನು 784 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಈವರೆಗೆ ಬಿಡುಗಡೆಗೊಂಡರವರ ಸಂಖ್ಯೆ 12,189ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 33,816ಕ್ಕೆ ತಲುಪಿದೆ.

ಒಂದೇ ದಿನ 594 ಪ್ರದೇಶಗಳು ಕಂಟೈನ್ಮೆಂಟ್‌:

ನಗರದಲ್ಲಿ ಸೋಮವಾರ ಒಂದೇ ದಿನ ಬರೋಬ್ಬರಿ 594 ಪ್ರದೇಶಗಳು ಕಂಟೈನ್ಮೆಂಟ್‌ಗೆ ಒಳಗಾಗಿವೆ. ಇದರೊಂದಿಗೆ ನಗರದಲ್ಲಿ ಕಂಟೈನ್ಮೆಂಟ್‌ ಪ್ರದೇಶಗಳ ಸಂಖ್ಯೆ 15,411ರಿಂದ 16,005ಕ್ಕೆ ಏರಿಕೆಯಾಗಿದೆ. ಅದರಲ್ಲಿ 12,325 ಸಕ್ರಿಯ ಕಂಟೈನ್ಮೆಂಟ್‌ ಪ್ರದೇಶಗಳಿವೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

click me!