'ಸಿಂಧಗಿಗೆ ಸದ್ಯಕ್ಕೆ ಎಲೆಕ್ಷನ್ ಇಲ್ಲ' ಆಯೋಗ ಸ್ಪಷ್ಟನೆ

Published : May 05, 2021, 10:54 PM ISTUpdated : May 05, 2021, 11:04 PM IST
'ಸಿಂಧಗಿಗೆ ಸದ್ಯಕ್ಕೆ ಎಲೆಕ್ಷನ್ ಇಲ್ಲ' ಆಯೋಗ ಸ್ಪಷ್ಟನೆ

ಸಾರಾಂಶ

ಕೊರೋನಾ ಕಾರಣಕ್ಕೆ ಚುನಾವಣೆ ಮುಂದಕ್ಕೆ ಹಾಕಿದ ಆಯೋಗ/  ಪಂಚಾರಾಜ್ಯ ಚುನಾವಣೆ ಬಳಿಕ ಚುನಾವಣಾ ಆಯೋಗವನ್ನು ಮದ್ರಾಸ್ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು/ ಕೊರೋನಾ ಎರಡನೇ ಅಲೆ ಇಳಿದ ಮೇಲೆ ಚುನಾವಣೆ

ನವದೆಹಲಿ(ಮೇ 05)   ಕೊರೋನಾ ಕಾರಣಕ್ಕೆ ಕೊನೆಗೂ ಚುನಾವಣಾ ಆಯೋಗ ಬುದ್ಧಿ ಕಲಿತಂತೆ  ಕಾಣುತ್ತಿದೆ.  ಸದ್ಯಕ್ಕಿಲ್ಲ ಸಿಂಧಗಿ ಉಪಚುನಾವಣೆ ಎಂಬ ಸುದ್ದಿ ಹೊರಗೆ ಬಂದಿದೆ.

ಕೋರೋನಾ ಕಾರಣಕ್ಕಾಗಿ ಉಪಚುನಾವಣೆ ಗಳನ್ನು ಆಯೋಗ ಮುಂದಕ್ಕೆ ಹಾಕಿದೆ.  ಕೊರೋನಾ ಎರಡನೇ ಅಲೆ ಭೀಕರ ಪರಿಣಾಮಗಳನ್ನು ಉಂಟುಮಾಡುತ್ತಿದೆ.

ಪಂಚಾರಾಜ್ಯ ಚುನಾವಣೆ ಬಳಿಕ ಚುನಾವಣಾ ಆಯೋಗವನ್ನು ಮದ್ರಾಸ್ ಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ನಿಮ್ಮ ಮೇಲೆ ಯಾಕೆ ಕೊಲೆ ಪ್ರಕರಣ ದಾಖಲಿಸಬಾರದು ಎಂದು ಕೇಳಿತ್ತು.

ಬೆಳಗಾವಿ ಕಾಂಗ್ರೆಸ್ ಸೋಲಿಗೆ ಇದೇ ಕಾರಣ

ದೇಶದ ಮೂರು ಲೋಕಸಭೆ ಮತ್ತು ಎಂಟು ವಿಧಾನಸಭೆ ಸ್ಥಾನಗಳು ವಿವಿಧ ಕಾರಣಕ್ಕೆ ಖಾಳಿಯಾಗಿವೆ. ಕೊರೋನಾ ಪರಿಸ್ಥಿತಿಯನ್ನು ಗಮನದಲ್ಲಿ ಇರಿಸಿಕೊಂಡು ಮುಂದೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ಆಯೋಗ ತಿಳಿಸಿದೆ.
 
ಜೆಡಿಎಸ್ ಶಾಸಕ ಎಂಸಿ ಮನಗೂಳಿ ಅವರ ನಿಧನದಿಂದ ಸಿಂಧಗಿ ಕ್ಷೇತ್ರ ತೆರವಾಗಿತ್ತು. ಬಸವ ಕಲ್ಯಾಣ, ಮಸ್ಕಿ ಮತ್ತು  ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿದ್ದು ಫಲಿತಾಂಶವೂ ಹೊರಗೆ ಬಂದಿದೆ. 

PREV
click me!

Recommended Stories

ದ್ವೇಷ ಭಾಷಣ ಪ್ರಕರಣ; ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ಗೆ ನಿರೀಕ್ಷಣಾ ಜಾಮೀನು!
Uttara Kannada: ಆಸ್ಪತ್ರೆಗೆ ಹೋಗಿದ್ದ ಗರ್ಭಿಣಿ ಹುಟ್ಟುಹಬ್ಬದಂದೇ ಸಾವು; ಹೊಟ್ಟೆಯಲ್ಲೇ ಅಸುನೀಗದ ಮಗು!