ವಿಜಯಪುರದಲ್ಲಿ ಪದೇ ಪದೇ ಭೂಕಂಪ: 4 ಸೆಪ್ಟೆಂಬರ್ 2021ರಿಂದ ಈವರೆಗೆ 21ಬಾರಿ ಭೂಕಂಪನ

By Govindaraj SFirst Published Aug 23, 2022, 4:15 AM IST
Highlights

ಗುಮ್ಮಟನಗರಿ ವಿಜಯಪುರ ಭೂಕಂಪನ ನಗರವಾಗ್ತಿದ್ಯಾ ಅನ್ನೋ ಅನುಮಾನಗಳು ಶುರುವಾಗಿವೆ. ಕಾರಣ ಏನಂದ್ರೆ ಪದೇ ಪದೇ ಸಂಭವಿಸ್ತಿರೋ ಭೂಕಂಪನಗಳು.

ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ (ಆ.23): ಗುಮ್ಮಟನಗರಿ ವಿಜಯಪುರ ಭೂಕಂಪನ ನಗರವಾಗ್ತಿದ್ಯಾ ಅನ್ನೋ ಅನುಮಾನಗಳು ಶುರುವಾಗಿವೆ. ಕಾರಣ ಏನಂದ್ರೆ ಪದೇ ಪದೇ ಸಂಭವಿಸ್ತಿರೋ ಭೂಕಂಪನಗಳು.

2021ರಿಂದಲೂ ಭೂಕಂಪನ ಕಾಟ: 2021ರಿಂದ ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಆಗ್ತಿದೆ. ಇದೀಗ ಮೂರು ದಿನಗಳಲ್ಲಿ ಐದು ಬಾರಿ ಒಂದೇ ದಿನದಲ್ಲಿ ಮೂರು ಬಾರಿ ಭೂಮಿ ಕಂಪಿಸಿರೋದು ಮತ್ತಷ್ಟು ಜನರನ್ನ ಬೆಚ್ಚಿಬೀಳಿಸಿದೆ. 

ಆಲಮಟ್ಟಿ ಡ್ಯಾಂ ಸರಣಿ ಭೂಕಂಪನಗಳಿಗೆ ಕಾರಣವಾ?: ವಿಜಯಪುರ ಜಿಲ್ಲೆಗೆ ಆಲಮಟ್ಟಿ ಜಲಾಶಯವೇ ಕಂಟಕವಾಗ್ತಿದ್ಯಾ ಅನ್ನೋದು ಇದೀಗ ಪದೇ ಪದೇ ಭೂಕಂಪನ ಬೆನ್ನಲ್ಲೇ ಕೇಳಿ ಬಂದಿರೋ ಮಾತು. ಆಲಮಟ್ಟಿ ಡ್ಯಾಂಗೆ ಅಪಾರ ಪ್ರಮಾಣದಲ್ಲಿ ನೀರು ಶೇಖರಣೆಯಾದಾಗ ಹೀಗೆ ಭೂಕಂಪನಗಳು ಸಂಭವಿಸಿವೆ ಎಂದು ಕೆಲ ಬಲ್ಲವರು ಮಾತನಾಡ್ತಿದ್ದಾರೆ.

ಗುಮ್ಮಟನಗರಿಯಲ್ಲಿ ಮತ್ತೆ ಕಂಪಿಸಿದ ಭೂಮಿ: ಬೆಚ್ಚಿ ಬಿದ್ದ ವಿಜಯಪುರ ಜಿಲ್ಲೆಯ ಜನ!

ಒಂದೇ ದಿನ ಕಂಪನ ಮೂರು ಬಾರಿ, ಭಯದಲ್ಲಿರೋ ಜನ: ವಿಜಯಪುರ ಜಿಲ್ಲೆಯಲ್ಲಿ 2022 ಆಗಸ್ಟ್ 20ರಂದು ರಾತ್ರಿ 8-15ಕ್ಕೆ 3.5 ತೀವ್ರತೆಯಲ್ಲಿ ವಿಜಯಪುರ ನಗರದ ಹಲವೆಡೆ ಭೂಮಿ ಕಂಪಿಸಿತ್ತು ಆ ವೇಳೆ ಜನ್ರು ಮನೆಯಿಂದ ಹೊರಗಡೆ ಓಡಿ ಬಂದಿದ್ರು, ಆಮೇಲೆ 2022 ಆಗಸ್ಟ್ 21ರಂದು ಸಂಜೆ 6-26ಕ್ಕೆ 3.1ತೀವ್ರತೆಯಲ್ಲಿ ಉಕ್ಕಲಿ ಗ್ರಾಮದಲ್ಲಿ ಭೂಕಂಪಿಸಿತ್ತು. 2022 ಆಗಸ್ಟ್ 22ರಂದು ಸಾಯಂಕಾಲ 4-26ಕ್ಕೆ 2.6 ತೀವ್ರತೆ, ಹಾಗೂ ರಾತ್ರಿ 9-23ಕ್ಕೆ ಹಾಗೂ ರಾತ್ರಿ 11-2ಕ್ಕೆ  ಒಂದೇ ದಿನ ಮೂರು ಬಾರಿ ವಿಜಯಪುರ, ಉಕ್ಕಲಿ ಗ್ರಾಮದಲ್ಲಿ ಭೂಕಂಪನ ಅನುಭವವಾಗಿರೋದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ವರ್ಷದಿಂದ ಶುರುವಾಗಿದೆ ಈ ಕಂಪನ ಕಾಟ: ಇನ್ನೂ ಗುಮ್ಮಟ ನಗರಿ ವಿಜಯಪುರದಲ್ಲಿ ಈ ಹಿಂದೆಯೂ ಭೂಕಂಪನವಾಗಿದೆ. ಆದ್ರೆ 2021 ಸೆಪ್ಟಂಬರ್ 4ರಂದು ರಾತ್ರಿ 11-38ಕ್ಕೆ 3.9 ತೀವ್ರತೆಯಲ್ಲಿ ಭೂಕಂಪಿಸಿರೋ ಬೆನ್ನಲ್ಲೇ ಈವೆರೆಗೆ ಆಗಾಗ ಭೂಮಿ ಕಂಪಿಸ್ತಾನೆ ಇದೆ.

ಆಲಮಟ್ಟಿ ಡ್ಯಾಂ ಇಷ್ಟೆಲ್ಲ ಅವಾಂತರಕ್ಕೆ ಕಾರಣವಾ: ಇದೀಗ ಮೂರೇ ದಿನದಲ್ಲಿ ಐದು ಬಾರಿ ಭೂಮಿ ಕಂಪಿಸಿರೋದಕ್ಕೆ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಿದ್ದೇ ಕಾರಣ ಎನ್ನಲಾಗುತ್ತಿದೆ.. ವಿಜಯಪುರದಲ್ಲಿ ಭೂಕಂಪನ 2021ರಲ್ಲಾದ ಸಂದರ್ಭದಲ್ಲಿ ಹೈದ್ರಾಬಾದ್ ನ್ಯಾಶನಲ್ ಜಿಯೋಫಿಜಿಕಲ್ ರೀಸರ್ಚ್ ಇನ್ಸ್ಟಿಟ್ಯೂಟ್ ವಿಶೇಷ ತಂಡದ ರಮೇಶ್ ದಿಕ್ಪಾಲ್ ನೇತೃತ್ವದಲ್ಲಿ ಕೋಲ್ಹಾರ ತಾಲೂಕಿನ ಮಸೂತಿ ಗ್ರಾಮಕ್ಕೆ ಭೂ ವಿಜ್ಞಾನಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ವಿಜಯಪುರ ಜಿಲ್ಲೆಯಲ್ಲಿ ಪದೇ ಪದೇ ಭೂಕಂಪನ ಆಗ್ತಿರೋದಕ್ಕೆ ಭೂಮಿಯೊಳಗಿನ ಶಿಲಾಪದರಿನಲ್ಲಿ ಬಿರುಕು ಉಂಟಾಗಿದ್ದರಿಂದ ಇದು ಭೂಮಿಯಲ್ಲಿ ನೈಸರ್ಗಿಕ ಪ್ರಕ್ರಿಯೆಯಾಗಿದೆ ಎಂದು ಭೂಮಾಪಕ ಅಳವಡಿಸಿದರು.

ಆದ್ರೆ ನಿಖರ ಕಾರಣ ಬಹಿರಂಗ ಪಡಿಸಿಲ್ಲ. ವಿಜಯಪುರ ನಗರದಲ್ಲೇ ಹೆಚ್ಚಾಗಿ ಭೂಕಂಪಿಸ್ತಿದೆ ಜೊತೆಗೆ ಕೋಲ್ಹಾರ ತಾಲೂಕಿನ ಮಸೂತಿ, ಮಲಘಾಣ, ಮುಳವಾಡ, ವಿಜಯಪುರ ತಾಲೂಕಿನ ಉಕ್ಕಲಿ, ತಿಕೋಟಾ ತಾಲೂಕಿನ ಬಿಜ್ಜರಗಿ, ವಿಜಯಪುರ ಬಳಿಯ ಅಲಿಯಾಬಾದ್, ನಿಂಗನಾಳ,ಬರಟಗಿ09, ಜುಲೈ 2022ರಂದು ವಿಜಯಪುರದಲ್ಲಿ 4.6 ಹಾಗೂ 4.9 ತೀವ್ರತೆಯಲ್ಲಿ ಭಾರೀ ಸದ್ದಿನೊಂದಿಗೆ ಭೂಕಂಪಿಸಿ ಮನೆ ಗೋಡೆ ಬಿರುಕು ಬಿಟ್ಟಿದ್ದವು. ಆ ವೇಳೆ ಮನೆಯಿಂದ ಜನ ಓಡಿ ಬಂದಿರೋದು ಸಿಸಿಟಿವಿಯಲ್ಲಿ ಭೂಕಂಪನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದವು.

ಸರ್ಕಾರಕ್ಕೆ ಜಿಲ್ಲಾಧಿಕಾರಿ ಪತ್ರ: ಪದೇ ಪದೇ ಭೂಕಂಪನ ಆಗ್ತಿರೋದಕ್ಕೆ ವೈಜ್ಞಾನಿಕ ಅಧ್ಯಯನ ಮಾಡಲು ಸರ್ಕಾರಕ್ಕೆ ಡಿಸಿ ವಿಜಯಮಹಾಂತೇಶ ದಾನಮ್ಮನವರ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಸುಳ್ಯ, ಮಡಿಕೇರಿಯಲ್ಲಿ ಮತ್ತೆ ಭೂಕಂಪನ: ಬಿರುಕುಬಿಟ್ಟ ಭೂಮಿ

ಆಲಮಟ್ಟಿ ಡ್ಯಾಂ ಭರ್ತಿಯಾದ್ರೆ ಶುರುವಾಗುತ್ತೆ ಭೂ ನಡುಕದ ಕಂಟಕ: ಒಟ್ಟಿನಲ್ಲಿ ವಿಜಯಪುರದಲ್ಲಿ ಪದೇ ಪದೇ ಭೂಕಂಪನ ಆಗ್ತಿರೋದು ಜನರಲ್ಲಿ ಭಾರೀ ಆತಂಕ ತಂದಿದೆ. ವೈಜ್ಞಾನಿಕವಾಗಿ ಅಧ್ಯಯನ ಆಗಬೇಕಿದೆ. ವಿಜಯಪುರದಲ್ಲಿ ಇದೀಗ ಆಲಮಟ್ಟಿ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾದ ಮೇಲೆ ಪದೇ ಪದೇ ಭೂಕಂಪನ ಆಗ್ತಿದೆ ಎನ್ನಲಾಗ್ತಿದೆ.

click me!