ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ: ಬೆಚ್ಚಿಬಿದ್ದ ಜನತೆ..!

Published : Oct 29, 2022, 09:56 AM ISTUpdated : Oct 29, 2022, 09:58 AM IST
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪ: ಬೆಚ್ಚಿಬಿದ್ದ ಜನತೆ..!

ಸಾರಾಂಶ

ಮೇಲಿಂದ ಮೇಲೆ ಸಂಭವಿಸುತ್ತಿರುವ ಕಂಪನಗಳಿಂದ ಜನರು ಭಯಬಿದ್ದಿದ್ದಾರೆ. ಶುಕ್ರವಾರ ರಾತ್ರಿ 9.45 ಹಾಗೂ ನಸುಕಿನ ಜಾವ 4.40ಕ್ಕೆ ಭೂಕಂಪನದ ಅನುಭವ 

ವಿಜಯಪುರ(ಅ.29):  ಜಿಲ್ಲೆಯಲ್ಲಿ ಮತ್ತೆ ಎರಡು ಬಾರಿ ಭೂಕಂಪನವಾಗಿದೆ. ಎರಡು ಬಾರಿ ಭೂಮಿ ನಲುಗಿದ್ದರಿಂದ ಜನರು ಆತಂಕದಲ್ಲಿದ್ದಾರೆ. ಮೇಲಿಂದ ಮೇಲೆ ಸಂಭವಿಸುತ್ತಿರುವ ಕಂಪನಗಳಿಂದ ಜನರು ಭಯಬಿದ್ದಿದ್ದಾರೆ. ನಿನ್ನೆ(ಶುಕ್ರವಾರ) ರಾತ್ರಿ 9.45 ಹಾಗೂ ಇಂದು(ಶನಿವಾರ) ನಸುಕಿನ ಜಾವ 4.40ಕ್ಕೆ ಭೂಕಂಪನದ ಅನುಭವವಾಗಿದೆ. 

ವಿಜಯಪುರ ನಗರ, ಮನಗೂಳಿ, ಗೋಳಗುಮ್ಮಟ ಪ್ರದೇಶ ಸೇರಿ ನಗರದ ಸುತ್ತ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 2.8 ತೀವ್ರತೆ ಭೂಕಂಪನವಾಗಿದೆ. ನಸುಕಿನ ಜಾವ ಭಾರೀ ಸದ್ದಿನೊಂದಿಗೆ ಭೂಮಿ ನಡುಗಿದೆ. 5 ಗಂಟೆಗಳ ಅವಧಿಯಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. 

ವಿಜಯಪುರದಲ್ಲಿ ಸರಣಿ ಭೂಕಂಪನ: ವಿಜ್ಞಾನಿಗಳು ಬಂದಾಗಲೇ ಕಂಪಿಸಿದ ಭೂಮಿ..!

ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮ ಭೂಕಂಪನದ ಕೇಂದ್ರಬಿಂದುವಾಗಿದೆ. ಎರಡನೇ ಭೂಕಂಪನದ ಕೇಂದ್ರಬಿಂದು ವಿಜಯಪುರ ತಾಲೂಕಿನ ಹಂಚಿನಾಳ ಗ್ರಾಮವಾಗಿದೆ. ಎರಡೂ ಕಡೆಗಳಲ್ಲೂ 2.8 ತೀವ್ರತೆಯಲ್ಲಿ ಭೂಕಂಪನವಾಗಿದೆ. ಭೂಕಂಪನ ಬಗ್ಗೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ದೃಢಪಡಿಸಿದೆ. ಮೇಲಿಂದ ಮೇಲೆ ಸಂಭವಿಸುತ್ತಿರುವ ಭೂಕಂಪನಗಳಿಂದ ಜನರು ಬೆಚ್ಚಿಬಿದ್ದಿದ್ದಾರೆ. 
 

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ