ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಬೆಚ್ಚಿಬಿದ್ದ ಜನತೆ

Published : Feb 24, 2023, 11:34 PM ISTUpdated : Feb 25, 2023, 11:24 AM IST
ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ: ಬೆಚ್ಚಿಬಿದ್ದ ಜನತೆ

ಸಾರಾಂಶ

ವಿಜಯಪುರಜಿಲ್ಲೆಯ ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವ. 

ವಿಜಯಪುರ(ಫೆ.24): ಗುಮ್ಮಟನಗರಿ ವಿಜಯಪುರ ಜಿಲ್ಲೆಯಲ್ಲಿ ಇಂದು(ಶುಕ್ರವಾರ) ಮತ್ತೆ ಭೂಕಂಪನದ ಅನುಭವವಾಗಿದೆ. ಹೌದು, ಜಿಲ್ಲೆಯ ತಿಕೋಟಾ ಪಟ್ಟಣ ಸೇರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಕಂಪನದ ಅನುಭವವಾಗಿದೆ. 

ಕಳ್ಳಕವಟಗಿ, ಘೋಣಸಗಿ, ಬಾಬಾನಗರ, ಟಕ್ಕಳಕಿ, ಹುಬನೂರ, ಸೋಮದೇವರಹಟ್ಟಿ, ಮಲಕನದೇವರಹಟ್ಟಿ ಎಲ್ಲ ಗ್ರಾಮಗಳಲ್ಲಿ ಭೂಮಿ ಕಂಪಿಸಿದೆ. ಇಂದು ರಾತ್ರಿ 10.32 ರ ಸುಮಾರಿಗೆ ಭಯಾನಕ ಕಂಪನದ ಅನುಭವವಾಗಿದೆ.  ಸ್ಫೋಟದ ರೀತಿಯಲ್ಲಿ ಜೋರಾದ ಶಬ್ಧದ ಜೊತೆಗೆ ಭೂಮಿ ಕಂಪಿಸಿದ ಅನುಭವವಾಗಿದೆ. ಭಯಾನಕ ಸದ್ದಿಗೆ ಹೆದರಿ ಹೊರಗೆ ಜನರು ಮನೆ ಬಿಟ್ಟು ಓಡಿ ಬಂದಿದ್ದಾರೆ. 

ಭೂಕಂಪ ಪೀಡಿತ ಟರ್ಕಿಗೆ ಪರಿಹಾರ ಕಳುಹಿಸಿ ಅ.ರಾಷ್ಟ್ರೀಯ ಮಟ್ಟದಲ್ಲಿ ಮಾನ ಕಳೆದುಕೊಂಡ ಪಾಕ್

ಈ ಹಿಂದಿನಿಗಿಂತಲೂ ಅತೀ ಭಯಾನಕವಾಗಿ ಸ್ಫೋಟದ ರೀತಿಯ ಸದ್ದು ಹಾಗೂ ಕಂಪನ ಅನುಭವವಾಗಿದೆ. ಭೂಕಂಪನ ಸದ್ದಿಗೆ ಮೂಖ ಪ್ರಾಣಿಗಳೂ ಕೂಡ ಜೋರಾಗಿ ಊಳಿಟ್ಟಿವೆ ಅಂತ ತಿಳಿದು ಬಂದಿದೆ. 

PREV
Read more Articles on
click me!

Recommended Stories

ಭದ್ರಾವತಿ: ಜೈ ಭೀಮ್ ನಗರದಲ್ಲಿ ಪ್ರೇಮಿಗಳ ವಿಚಾರಕ್ಕೆ ರಕ್ತಪಾತ: ಇಬ್ಬರು ದುರ್ಮರಣ!
'ನಿಮ್ಮ ಸುರಕ್ಷತೆ ನನಗೂ ಮುಖ್ಯ..' ಮಹಿಳಾ ಪ್ರಯಾಣಿಕರ ಮನ ಗೆದ್ದ ಆಟೋ ಚಾಲಕ, ಸಂದೇಶ ವೈರಲ್ ಮಾಡಿದ ಬೆಂಗಳೂರು ಪೊಲೀಸರು!