ಕೋವಿಡ್‌ ವಿರುದ್ಧ ಹೋರಾಟ: 'ಕೊರೋನಾ ಜಾತಿ, ಧರ್ಮ ನೋಡಿ ಬರುವುದಿಲ್ಲ'

By Kannadaprabha NewsFirst Published Apr 27, 2020, 7:08 AM IST
Highlights

ವೈರಸ್‌ ರಾಜ್ಯದಲ್ಲಿ ಮೂರನೇ ಹಂತಕ್ಕೆ ಹೋಗಬಾರದು ಎಂಬ ಉದ್ದೇಶಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ| ಅದಕ್ಕಾಗಿ ಸಾರ್ವಜನಿಕರ ಅಂತರ ಮುಂಜಾಗ್ರತಾ ಕ್ರಮಗಳು ಬಹಳಷ್ಟು ಅವಶ್ಯಕ| ಎಲ್ಲ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು ಜಾತ್ರೆ ಜನಸಮೂಹ ಸೇರುವಂತಹ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದೆ| ಧಾರವಾಡ ಗ್ರಾಮೀಣ ಪೊಲೀಸ್‌ ಇಲಾಖೆಯ ಡಿವೈಎಸ್ಪಿ ರವಿ ನಾಯಕ್‌|

ಕುಂದಗೋಳ(ಏ.27): ಕೊರೋನಾ ವೈರಸ್‌ ಯಾವ ಜಾತಿ ಧರ್ಮ ಮತ ಪಂಥ ಜಾತಿ ನೋಡದೆ ಬರುವುದಿಲ್ಲ ಎಲ್ಲರಿಗೂ ವೈರಸ್‌ ಹರಡುತ್ತದೆ. ಅದಕ್ಕಾಗಿ ಸಾರ್ವಜನಿಕರ ಆರೋಗ್ಯ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮ ಕೈಗೊಂಡಿದ್ದೇವೆ ಎಂದು ಜಿಲ್ಲಾ ಧಾರವಾಡ ಗ್ರಾಮೀಣ ಪೊಲೀಸ್‌ ಇಲಾಖೆಯ ಡಿವೈಎಸ್ಪಿ ರವಿ ನಾಯಕ್‌ ಹೇಳಿದ್ದಾರೆ. 

ಅವರು ಪಟ್ಟಣದಲ್ಲಿ ಪೊಲೀಸ್‌ ಠಾಣೆ ಆವರಣದಲ್ಲಿ ರಂಜಾನ್‌ ಹಬ್ಬದ ಅಂಗವಾಗಿ ಮುಸ್ಲಿಂ ಸಮಾಜದ ಶಾಂತಿ ಸಭೆ ಹಾಗೂ ಕೊರೋನಾ ವೈರಸ್‌ ಮುಂಜಾಗ್ರತಾ ಕ್ರಮ ಕೈಗೊಳ್ಳುವುದರ ಬಗ್ಗೆ ಸಮಾಜ ಬಾಂಧವರೊಂದಿಗೆ ಮಾತನಾಡಿದರು.

ಕೋತಿಗಳಿಗೆ ಪ್ರತಿನಿತ್ಯ ಊಟ ಹಾಕುತ್ತಿರುವ ಪಿಎಸ್‌ಐ: ಖಾಕಿಧಾರಿಯ ಮಾನವೀಯತೆ

ವೈರಸ್‌ ರಾಜ್ಯದಲ್ಲಿ ಮೂರನೇ ಹಂತಕ್ಕೆ:

ಹೋಗಬಾರದು ಎಂಬ ಉದ್ದೇಶಕ್ಕಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಅದಕ್ಕಾಗಿ ಸಾರ್ವಜನಿಕರ ಅಂತರ ಮುಂಜಾಗ್ರತಾ ಕ್ರಮಗಳು ಬಹಳಷ್ಟು ಅವಶ್ಯಕವಾಗಿದೆ. ಅದಕ್ಕಾಗಿ ಎಲ್ಲ ಧರ್ಮದ ಧಾರ್ಮಿಕ ಕಾರ್ಯಕ್ರಮಗಳು ಜಾತ್ರೆ ಜನಸಮೂಹ ಸೇರುವಂತಹ ಕಾರ್ಯಕ್ರಮಗಳನ್ನು ರದ್ದು ಮಾಡಲಾಗಿದ್ದು ಅದಕ್ಕಾಗಿ ಈ ಬಾರಿ ಮುಸ್ಲಿಂ ಸಮಾಜ ಬಾಂಧವರು ತಮ್ಮ ಪವಿತ್ರ ಹಬ್ಬವಾದ ರಂಜಾನ್‌ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಆಚರಿಸಬೇಕು. ಅಂತರ ಕಾಯ್ದುಕೊಂಡು ತಮಗೆ ಬೇಕಾದಂತಹ ಹಣ್ಣುಹಂಪಲ ತರಕಾರಿಗಳನ್ನು ತಮ್ಮ ತಮ್ಮಓಣಿ ಗಳಿಗೆ ತಾಲೂಕು ಆಡಳಿತದಿಂದ ವ್ಯವಸ್ಥೆ ಮಾಡಲಾಗುವುದು ಎಂದರು.

ಅಲ್ಲದೆ ಇಫ್ತಾರ್‌ ಕೂಟ ಸಾರ್ವಜನಿಕ ಸ್ಥಳಗಳಲ್ಲಿ ಮಾಡುವುದು ಮಾಡಬಾರದು ರಂಜಾನ್‌ ಹಬ್ಬದ ಅಂಗವಾಗಿ ಪ್ರಾರಂಭ ಹಾಗೂ ಮುಕ್ತಾಯದ ಬೆಳಗಿನಜಾವ ಹಾಗೂ ಸಂಜೆ ಮಸೂತಿ ಎಲ್ಲಿ ಆಜಾದನ್ನು ಧ್ವನಿವರ್ಧಕ ಶಾಂತವಾಗಿ ಕೇಳುವಂತಾಗಬೇಕು ಅಲ್ಲದೆ ಮಸೀದಿಯಲ್ಲಿ ಮೌಲಾನ ಸೇರಿ 3 ಜನರಿಗೆ ಅವಕಾಶ ಉಳಿದವರಿಗೆ ಅವಕಾಶವಿರುವುದಿಲ್ಲ.

ಹಾಗೇನಾದರೂ ಕಂಡುಬಂದರೆ ಮಸುತಿಯ ಮೌಲಾನ ನೇರ ಹೊಣೆ ಆಗಬೇಕಾಗುತ್ತದೆ. ಪಟ್ಟಣದ ಪ್ರತಿಯೊಂದು ಮಸೂದೆಗಳಿಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗುವುದು ಪ್ರಾರ್ಥನೆಗೆ ಅವಕಾಶ ಇರುವುದಿಲ್ಲ. ಮುಸ್ಲಿಂ ಬಾಂಧವರಿಗೆ ಮೌಲಾನಾ ಹೊರತುಪಡಿಸಿ ಇದು ರಾಜ್ಯ ಸರ್ಕಾರದ ಆದೇಶವಾಗಿದ್ದು ಎಲ್ಲರೂ ಪಾಲಿಸಬೇಕು ನಿಮ್ಮ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಹೀಗಾಗಿ ಸಮುದಾಯವು ಅನ್ಯತಾ ಭಾವಿಸಬಾರದು ಸಾರ್ವಜನಿಕರು ನೀವೇ ನಿಮ್ಮ ಮನೆ ಹಾಗೂ ನಿಮ್ಮ ಓಣಿ ಗ್ರಾಮದಲ್ಲಿ ಪಟ್ಟಣದಲ್ಲಿ ಮುಂಜಾಗ್ರತಾ ಕ್ರಮ ಪೊಲೀಸರ ಅವಶ್ಯಕತೆ ಇರುವುದಿಲ್ಲ. ಎಲ್ಲವೂ ಪೊಲೀಸರಿಂದ ಸರಿ ಮಾಡಲು ಸಾಧ್ಯವಿಲ್ಲ. ನಿಮ್ಮ ಸಹಕಾರ ಬಹಳಷ್ಟುಅವಶ್ಯ ನಿಮ್ಮ ಜವಾಬ್ದಾರಿಯನ್ನು ನೀವು ಅರಿತುಕೊಂಡು ಜಾಗೃತರಾಗಿರಬೇಕು. ನಿಮ್ಮ ಮಕ್ಕಳ ಕೈಗೆ ಬೈಕ್‌ ಚಾವಿ ನೀಡಬೇಡಿ. 60 ವರ್ಷ ಮೇಲ್ಪಟ್ಟವರು ಹಾಗೂ ಚಿಕ್ಕ ಮಕ್ಕಳು ಜಾಗೃತಿವಹಿಸಬೇಕು.

ಈ ಸಂದರ್ಭದಲ್ಲಿ ಸಿಪಿಐ ಬಸವರಾಜ್‌ ಕಲ್ಲಮ್ಮನವರ ಪಪಂ ಸದಸ್ಯರಾದ ಮಲ್ಲಿಕಾರ್ಜುನ್‌ ಕಿರಸೊರ್‌ ಶಾಮ್‌ ಸುಂದರ ದೇಸಾಯಿ ಹನುಮಂತ ಮೇಲಿನಮನಿ ಬಸವರಾಜ್‌ ತಳವಾರ್‌ ದಿಲೀಪ್‌ ಕಲಾಲ್‌ ಮಲ್ಲಿಕ್‌ ಶಿರೂರು ಸಂಭಾಜಿ ತಡಸದ ಹಾಗೂ ಮುಸ್ಲಿಂ ಸಮಾಜದ ಮುಖಂಡರಾದ ರಾಜಸಾಬ್‌ ಕಳ್ಳಿಮನಿ ಜಲಾಲಿ ಹುಬ್ಬಳ್ಳಿ, ಸಲೀಂ ಕ್ಯಾಲಕೊಂಡ ಖಯಿಮ್‌ ನಲಬದ್‌ ಶರೀಫ್‌ ನೀಲ್ ಜಾರ್ಕೀ ಯರಗುಪ್ಪಿ ಮಕ್ತುಂ ಸಾಬ್‌ ಹುಲಗೂರು ನಾಗರಾಜ ದೇಶಪಾಂಡೆ ಸೇರಿದಂತೆ ಹಿಂದೂ ಮುಸ್ಲಿಂ ಬಾಂಧವರು ಭಾಗವಹಿಸಿದ್ದರು.

click me!