ಗ್ಯಾರೆಂಟಿ ಭರವಸೆ ಯಥಾವತ್ತಾಗಿ ಜಾರಿಗೊಳಿಸಿ: ಗೌಡ

By Kannadaprabha News  |  First Published May 16, 2023, 4:25 AM IST

ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್‌ ಭರವಸೆ ಮತದಾರರ ಮನಸ್ಸಿನಲ್ಲಿ ನೇರವಾದ ಪ್ರಭಾವ ಬೀರಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ಆದ್ದರಿಂದ ಜನರಿಗೆ ಕೊಟ್ಟಆಶ್ವಾಸನೆಗಳನ್ನು ಕಾಂಗ್ರೆಸ್‌ ಪಕ್ಷ ಸಂಪೂರ್ಣವಾಗಿ ಯಥಾವತ್ತಾಗಿ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಹೇಳಿದರು


 ಶಿರಾ ;  ವಿಧಾನಸಭಾ ಚುನಾವಣೆಯಲ್ಲಿ ಗ್ಯಾರಂಟಿ ಕಾರ್ಡ್‌ ಭರವಸೆ ಮತದಾರರ ಮನಸ್ಸಿನಲ್ಲಿ ನೇರವಾದ ಪ್ರಭಾವ ಬೀರಿ ಕಾಂಗ್ರೆಸ್‌ ಪಕ್ಷಕ್ಕೆ ಹೆಚ್ಚು ಮತ ನೀಡಿದ್ದಾರೆ. ಆದ್ದರಿಂದ ಜನರಿಗೆ ಕೊಟ್ಟಆಶ್ವಾಸನೆಗಳನ್ನು ಕಾಂಗ್ರೆಸ್‌ ಪಕ್ಷ ಸಂಪೂರ್ಣವಾಗಿ ಯಥಾವತ್ತಾಗಿ ಶೀಘ್ರವಾಗಿ ಜಾರಿಗೊಳಿಸಬೇಕು ಎಂದು ವಿಧಾನ ಪರಿಷತ್‌ ಸದಸ್ಯ ಚಿದಾನಂದ್‌ ಎಂ.ಗೌಡ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಮಾನವೇ ಅಂತಿಮ. ಶಿರಾ ಕ್ಷೇತ್ರದ ಮತದಾರರು 42329 ಸಾವಿರಕ್ಕೂ ಹೆಚ್ಚು ಮತ ನೀಡಿ ಬೆಂಬಲ ಸೂಚಿಸಿದ್ದಾರೆ. ಮತದಾರರು ಕೊಟ್ಟಿರುವ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇವೆ. ನಾನು ಶಿರಾ ತಾಲೂಕಿನಲ್ಲಿ ವಿರೋಧ ಪಕ್ಷದ ಶಾಸಕನಾಗಿ ಕೆಲಸ ಮಾಡುತ್ತೇನೆ. ಅವರಿಗೆ ಅಭಿವೃದ್ಧಿ ಕೆಲಸಗಳಿಗೆ ಸಂಪೂರ್ಣ ಬೆಂಬಲ ನೀಡುತ್ತೇವೆ. ತಪ್ಪು ದಾರಿಗೆ ಹೋದರೆ ವಿರೋಧಿಸುತ್ತೇವೆ. ಶಿರಾ ತಾಲೂಕಿನ ಅಭಿವೃದ್ಧಿಯನ್ನು ಕಡೆಗಣಿಸಬಾರದು. ಮದಲೂರು ಕೆರೆಗೆ ನೀರು ಕೊಡುವುದನ್ನು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು, ತುಮಕೂರು-ದಾವಣಗೆರೆ ಯೋಜನೆಯನ್ನು ಪೂರ್ಣಗೊಳಿಸಬೇಕು, ಕೋವಿಡ್‌ ಸಂದರ್ಭದಲ್ಲಿ ತಾಲೂಕಿನಲ್ಲಿ ಸಾಕಷ್ಟುಶಾಲಾ ಕಾಲೇಜುಗಳ ಕಟ್ಟಗಳು ಶಿಥಿಲವಾಗಿವೆ. ಅವುಗಳನ್ನು ಸರಿಪಡಿಸಿ ಹೊಸ ಕೊಠಡಿಗಳನ್ನು ನಿರ್ಮಿಸಬೇಕು ಎಂದು ತಿಳಿಸಿದರು.

Tap to resize

Latest Videos

ಪತ್ರಿಕಾಗೋಷ್ಠಿಯಲ್ಲಿ ನಗರಸಭಾ ಮಾಜಿ ಸದಸ್ಯ ಸಂತೇಪೇಟೆ ನಟರಾಜ್‌, ಗ್ರಾ.ಪಂ. ಮಾಜಿ ಅಧ್ಯಕ್ಷ ಈರಣ್ಣ ಪಟೇಲ್‌, ಮುಖಂಡರಾದ ಹನುಮಂತೇಗೌಡ, ಗ್ರಾಮ ಪಂಚಾಯತಿ ಸದಸ್ಯರಾದ ಶಿವಲಿಂಗಯ್ಯ, ನಾದೂರ್‌ ಕುಮಾರ್‌, ಕರೂರು ರೇಣುಕ ಪ್ರಸಾದ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಕರಿಯಣ್ಣ, ಡಿ.ಎಚ್‌.ಗೌಡ, ಕ್ಯಾದಿಗುಂಟೆ ಮಂಜುನಾಥ್‌ ಸೇರಿದಂತೆ ಹಲವರು ಹಾಜರಿದ್ದರು.

ಜೆಡಿಎಸ್‌ ಗೆಲುವಿನಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಶ್ರಮ

  ತುರುವೇಕೆರೆ :  ತುರುವೇಕೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಗೆಲುವಿನಲ್ಲಿ ಸ್ವಾಭಿಮಾನಿ ಕಾರ್ಯಕರ್ತರ ಶ್ರಮ ಇದೆ ಎಂದು ನೂತನ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಪತ್ರಕರ್ತರೊಂದಿಗೆ ಮಾತನಾಡಿದ ಅವರು ಇದು ತಮ್ಮ ಗೆಲುವಲ್ಲ. ಅದು ಜೆಡಿಎಸ್‌ ಕಾರ್ಯಕರ್ತರ ಗೆಲುವು. ಗೆಲುವನ್ನು ಜೆಡಿಎಸ್‌ ಕಾರ್ಯಕರ್ತರಿಗೆ ಸಮರ್ಪಿಸುವುದಾಗಿ ಹೇಳಿದರು

ತುರುವೇಕೆರೆ ಕ್ಷೇತ್ರದ ಜನತೆ ತಮ್ಮ ಮೇಲೆ ಅಭಿಮಾನವಿಟ್ಟು 10 ಸಾವಿರ ಅಂತರದಿಂದ ಗೆಲ್ಲಿಸಿದ್ದಾರೆ. ಇದೊಂದು ಅಭೂತಪೂರ್ವ ಗೆಲುವು. ತಮ್ಮ ಗೆಲುವಿಗೆ ಹಗಲಿರುಳು ಹೋರಾಡಿದ ಜೆಡಿಎಸ್‌ ಕಾರ್ಯಕರ್ತರು ಮತ್ತು ನಮಗೆ ಆಶೀರ್ವಾದ ಮಾಡಿದ ಕ್ಷೇತ್ರದ ಜನತೆಗೆ ಹೃದಯಪೂರ್ವಕವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.

ಈ ಬಾರಿಯ ಚುನಾವಣೆ ಹಣ ಬಲವೋ, ಜನ ಬಲವೋ ಎಂಬಂತೆ ಬಿಂಬಿತವಾಗಿತ್ತು. ಆದರೆ ಕ್ಷೇತ್ರದ ಜನ ಹಣಕ್ಕೆ ಬೆಲೆ ನೀಡದೆ ಜನ ಬಲಕ್ಕೆ ಗೆಲುವು ನೀಡಿದ್ದಾರೆ. ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿಯವರು ನೀಡಿದ ಪಂಚರತ್ನ ಯೋಜನೆಗಳಿಗೂ ಕ್ಷೇತ್ರದ ಜನರ ಸ್ಪಂದನೆ ಸಿಕ್ಕಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕ್ಷೇತ್ರದ ದಬ್ಬೇಗಟ್ಟಹಾಗೂ ಸಿ.ಎಸ್‌.ಪುರ ಹೋಬಳಿಗಳಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿದ್ದು ಸಹ ತಾವು ಗೆಲುವು ಸಾಧಿಸಲು ಕಾರಣವಾಯಿತು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಪೂರ್ಣ ಬಹುಮತ ನೀಡಿದ್ದರು ನಮ್ಮ ಪಕ್ಷಕ್ಕೆ ರಾಜ್ಯದಲ್ಲಿ 19 ಸ್ಥಾನ ಲಭಿಸಿದೆ. ವಿರೋಧ ಪಕ್ಷದಲ್ಲಿದ್ದರೂ ಸಹ ಕ್ಷೇತ್ರದಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತೇನೆ. ಭ್ರಷ್ಟಾಚಾರ ರಹಿತ ಆಡಳಿತ ಮಾಡುವ ಭರವಸೆ ನೀಡಿದ ಕೃಷ್ಣಪ್ಪ ಸರ್ಕಾರ ಸಂಪೂರ್ಣ ಕಾರ್ಯಾರಂಭ ಮಾಡಿದ ನಂತರ ಎಲ್ಲಾ ಸರ್ಕಾರಿ ಕಚೇರಿಗಳ ಅಧಿಕಾರಿಗಳೊಂದಿಗೆ ಸಭೆ ನಡೆಸುವುದಾಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಹೆಡಿಗಿಹಳ್ಳಿ ವಿಶ್ವನಾಥ್‌, ಪಕ್ಷದ ವಕ್ತಾರ ವೆಂಕಟಾಪುರ ಯೋಗೀಶ್‌, ಬಿ.ಎಸ್‌.ದೇವರಾಜು, ವೆಂಕಟೇಶ್‌, ಕೃಷ್ಣಪ್ಪ, ವಿಜಯೇಂದ್ರ, ಬಸವರಾಜು, ಪುನೀತ್‌, ಮುನಿಯೂರು ರಂಗಸ್ವಾಮಿ, ಕೃಷ್ಣಯ್ಯ, ರಾಮಕೃಷ್ಣ, ಚೇತನ್‌, ಜುಂಜಪ್ಪ ಸೇರಿದಂತೆ ಮುಖಂಡರು ಇದ್ದ

click me!