ತೂಫಾನ್ ಕಾಟದಿಂದ ಬಂದರಿನಲ್ಲಿ ಸಾವಿರಾರು ಬೋಟ್‌ಗಳು ಲಂಗರು: ಮೀನುಗಾರರಿಗೆ ಮತ್ತೆ ಸಂಕಷ್ಟ

By Govindaraj SFirst Published Sep 30, 2023, 9:43 PM IST
Highlights

ಅರಬ್ಬೀ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ತೂಫಾನ್ ಕಾಟ ಪ್ರಾರಂಭವಾಗಿರುವ ಹಿನ್ನೆಲೆ ಮೀನುಗಾರರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಆಳ‌ ಸಮುದ್ರಕ್ಕೆ‌ ಮೀನುಗಾರಿಕೆಗಾಗಿ‌ ತೆರಳಿದ್ದ ಸಾವಿರಾರು ಬೋಟುಗಳು ಹಿಂತಿರುಗಿ ಕಾರವಾರದ ಬಂದರು ಹಾಗೂ ತೀರ ಪ್ರದೇಶಗಳಲ್ಲಿ ಲಂಗರು ಹಾಕಿವೆ. 

ಮಂಗಳೂರು (ಸೆ.30): ಅರಬ್ಬೀ ಸಮುದ್ರದಲ್ಲಿ ಭಾರೀ ಪ್ರಮಾಣದಲ್ಲಿ ತೂಫಾನ್ ಕಾಟ ಪ್ರಾರಂಭವಾಗಿರುವ ಹಿನ್ನೆಲೆ ಮೀನುಗಾರರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಇದರಿಂದಾಗಿ ಆಳ‌ ಸಮುದ್ರಕ್ಕೆ‌ ಮೀನುಗಾರಿಕೆಗಾಗಿ‌ ತೆರಳಿದ್ದ ಸಾವಿರಾರು ಬೋಟುಗಳು ಹಿಂತಿರುಗಿ ಕಾರವಾರದ ಬಂದರು ಹಾಗೂ ತೀರ ಪ್ರದೇಶಗಳಲ್ಲಿ ಲಂಗರು ಹಾಕಿವೆ. ತೂಫಾನ್ ಕಾಟದಿಂದ ಸಮುದ್ರದಲ್ಲಿ ಎಲ್ಲಿ ನೋಡಿದ್ರೂ ಬೋಟುಗಳೇ ಬೋಟುಗಳು ಕಾಣುತ್ತಿದ್ದು, ಸಮುದ್ರದಲ್ಲಿ ಹೆಚ್ಚಾಗಿರುವ ಅಲೆಗಳ ಅಬ್ಬರ ಹಾಗೂ ಗಾಳಿಯ ವೇಗದಿಂದಾಗಿ ಮೀನುಗಾರಿಕಾ ಬೋಟುಗಳು ದಡದತ್ತ ಕೊಚ್ಚಿಕೊಂಡು ಬಂದು ಮರಳಿನಲ್ಲಿ ಸಿಲುಕಿಕೊಳ್ಳುತ್ತಿದೆ. 

ಈ ಬೋಟ್‌ಗಳನ್ನು ಮರಳಿ ಸಮುದ್ರದತ್ತ ಕೊಂಡೊಯ್ಯಲು ಮೀನುಗಾರರು ಪರದಾಡುತ್ತಿದ್ದು, ಒಂದೋ‌ ಅಲೆಗಳೇ ಬೋಟನ್ನು ಹಿಂದೊಯ್ಯಬೇಕು, ಇಲ್ಲವೇ ಟಗ್ ಮೂಲಕ ಎಳೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ತೂಫಾನ್ ಕಾಟದಿಂದ ಮೀನುಗಾರಿಕೆ ನಡೆಸಲಾಗದ ಕಾರಣ ಮೀನುಗಾರರಿಗೆ ಮತ್ತೆ ಭಾರೀ  ಆರ್ಥಿಕ ಏಟು ಬಿದ್ದಿದೆ. ಇನ್ನು ಸಮುದ್ರದಲ್ಲಿ ಭಾರೀ ಅಲೆಗಳು ಕಾಣಿಸಿಕೊಂಡರೂ ಬೀಚ್‌ಗೆ ಭೇಟಿ ನೀಡುವ ಯುವಕ, ಯುವತಿಯರ ಹುಚ್ಚಾಟ ಮಾತ್ರ ತಪ್ಪಿಲ್ಲ. ಜಿಲ್ಲಾಡಳಿತ ರೆಡ್ ಫ್ಲ್ಯಾಗ್ ಹಾಕಿದರೂ ಕೆಲವು ಯುವಕ, ಯುವತಿಯರು ಡೋಂಟ್ ಕೇರ್ ಅನ್ನುತ್ತಿದ್ದು, ದಡದತ್ತ ಭಾರೀ ಅಲೆಗಳು ಅಪ್ಪಳಿಸಿದರೂ ಅಲೆಗಳ ಜತೆಯೇ ಆಟ, ಸೆಲ್ಫಿ ತೆಗೆದುಕೊಂಡು ಅಪಾಯ ತಂದುಕೊಳ್ಳುತ್ತಿದ್ದಾರೆ.

ರಾಜಕಾರಣವು ಚುನಾವಣೆಗೆ ಮಾತ್ರ ಮೀಸಲಾಗಿರಲಿ: ಸಚಿವ ಬೈರತಿ ಸುರೇಶ್‌

ದೈತ್ಯ ಗಾತ್ರದ ಪಿಲಿ ತೊರಕೆ ಮೀನು ಬಲೆಗೆ: ಉಳ್ಳಾಲದ ಸೋಮೇಶ್ವರದಲ್ಲಿ ಬೃಹತ್‌ ಗಾತ್ರದ ಪಿಲಿ ತೊರಕೆ ಮೀನು ಉಚ್ಚಿಲ ಮೀನುಗಾರರ ಬಲೆಗೆ ಬಿದ್ದಿದೆ. ಸಮುದ್ರ ತಟದ ಸಮೀಪ ಬೀಸಿದ ಬಲೆಗೆ 75 ಕೆಜಿಯ ಮೀನು ಬಲೆಗೆ ಬಿದ್ದಿದೆ. ಉಚ್ಚಿಲ ಪೆರಿಬೈಲ್ ನಿವಾಸಿ ನಾಡದೋಣಿ ಮೀನುಗಾರರಾದ ಶೈಲೇಶ್ ಉಚ್ಚಿಲ, ಚಂದ್ರ ಉಚ್ಚಿಲ, ಅಝೀಝ್, ಕಲ್ಪೇಶ್ ಮತ್ತು ಶಂಭು ನ್ಯೂ ಉಚ್ಚಿಲ ಎಂಬವರು ಸಮುದ್ರ ತೀರದಲ್ಲಿ ಬಲೆ ಹಾಕಿದ್ದರು. ಈ ವರ್ಷದ ತಮ್ಮ ಮೀನುಗಾರಿಕೆಯಲ್ಲಿ ಸಿಕ್ಕ ಅತಿದೊಡ್ಡ ಮೀನು ಇದಾಗಿದೆ ಎಂದು ಮೀನುಗಾರರು ಸಂತಸಪಟ್ಟಿದ್ದಾರೆ. 

ರೈತರ ಹೊಲ-ಗದ್ದೆಗಳಿಗೆ ನೀರಿಲ್ಲ: ತಮಿಳುನಾಡಿಗೆ ಕಾವೇರಿ ನೀರನ್ನು ನಿಲ್ಲಿಸುವಂತೆ ಕರವೇ ಒತ್ತಾಯ

ಪ್ರತಿ ವರ್ಷದಂತೆ ಈ ಬಾರಿಯೂ ಸಮುದ್ರದಲ್ಲಿ ಕೆಸರಿನಂತೆ ಅಲೆಗಳು ಬರುತ್ತವೆ. ಈ ನೀರಿಗೆ ಮೀನುಗಾರಿಕೆಯಲ್ಲಿ ಅತ್ಯಂತ ಪಾವಿತ್ರ್ಯತೆಯೂ ಇದೆ. ಅದರಲ್ಲಿ ಹಲವು ಬಗೆಯ ಮೀನುಗಳು ಬರುವ ಐತಿಹ್ಯವಿದೆ. ಆದರೆ ಈ ಬಾರಿ ದೊಡ್ಡ ಗಾತ್ರದ ಪಿಲಿ ತೊರಕೆ ಬಂದಿರುವುದು ಮೀನುಗಾರರಲ್ಲಿ ಉತ್ಸಾಹ ಮೂಡಿಸಿದೆ. ಈ ಮೀನಿಗೆ ಮಾರುಕಟ್ಟೆಯಲ್ಲಿ 200 ರು. ಇದೆ. ಈಗ ಈದ್ ಹಬ್ಬ ಇರುವುದರಿಂದ ಈ ಮೀನನ್ನು ವ್ಯಾಪಾರ ಮಾಡದೇ ಮೀನುಗಾರರೇ ಹಂಚಿಕೊಂಡಿದ್ದಾರೆ.

click me!