ದೂಧಸಾಗರ ಜಲಾಶಯಕ್ಕೆ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೈಲಿನ ಮೂಲಕ ಆಗಲಿ ಇಲ್ಲವೇ ಕಾಲ್ನಡಿಯ ಮೂಲಕವಾಗಲಿ ದೂಧಸಾಗರ ಜಲಾಶಯಕ್ಕೆ ತೆರಳುವಂತಿಲ್ಲ. ಈ ನಿಯಮ ಉಲ್ಲಂಘಿಸಿ ಜಲಾಶಯ ವೀಕ್ಷಣೆಗೆ ತೆರಳುವರರ ವಿರುದ್ಧ ರೈಲ್ವೆ ಕಾಯಿದೆ 1989ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು. ಕಾಯ್ದೆ ಉಲ್ಲಂಘನೆಯು ಶಿಕ್ಷಾರ್ಹ ಅಪರಾಧವಾಗಿದೆ.
ಬೆಳಗಾವಿ(ಜು.23): ಗೋವಾ- ಕರ್ನಾಟಕ ಗಡಿಭಾಗದಲ್ಲಿರುವ ವಿಶ್ವ ಪ್ರಸಿದ್ಧ ದೂಧಸಾಗರ ಜಲಪಾತದ ಸಮೀಪ ವೀಕ್ಷಣೆಗೆ ನೈಋುತ್ಯ ರೈಲ್ವೆ ಇಲಾಖೆ ನಿಷೇಧಿಸಿದೆ. ಮಳೆಗಾಲ ಆರಂಭವಾಗಿದ್ದರಿಂದ ಗೋವಾ-ಕರ್ನಾಟಕ ಗಡಿಭಾಗದಲ್ಲಿರವ ದೂಧ ಸಾಗರ ವೀಕ್ಷಣೆಗೆ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ಇಲ್ಲಿ ರೈಲು ನಿಲುಗಡೆ ಸೌಲಭ್ಯ ಇಲ್ಲದ ಕಾರಣ ಬಹುತೇಕ ಪ್ರವಾಸಿಗರು ರೈಲ್ವೆ ಹಳಿಗಳ ಮೇಲೆಯೇ ನಡೆದುಕೊಂಡು ಬರುತ್ತಾದೆ. ಇದು ಬಹಳ ಅಪಾಯಕಾರಿಯಾಗಿದೆ.
ದೂಧಸಾಗರ ಜಲಾಶಯಕ್ಕೆ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ರೈಲಿನ ಮೂಲಕ ಆಗಲಿ ಇಲ್ಲವೇ ಕಾಲ್ನಡಿಯ ಮೂಲಕವಾಗಲಿ ದೂಧಸಾಗರ ಜಲಾಶಯಕ್ಕೆ ತೆರಳುವಂತಿಲ್ಲ. ಈ ನಿಯಮ ಉಲ್ಲಂಘಿಸಿ ಜಲಾಶಯ ವೀಕ್ಷಣೆಗೆ ತೆರಳುವರರ ವಿರುದ್ಧ ರೈಲ್ವೆ ಕಾಯಿದೆ 1989ರ ಪ್ರಕಾರ ಕಾನೂನು ಕ್ರಮ ಜರುಗಿಸಲಾಗುವುದು. ಕಾಯ್ದೆ ಉಲ್ಲಂಘನೆಯು ಶಿಕ್ಷಾರ್ಹ ಅಪರಾಧವಾಗಿದೆ. ಈ ನಿಯಮ ಉಲ್ಲಂಘಿಸಿದರೆ 6 ತಿಂಗಳು ಜೈಲುವಾಸ ಇಲ್ಲವೆ 1000 ರು ದಂಢ ಅಥವಾ ಎರಡನ್ನೂ ವಿಧಿಸಬಹುದಾಗಿದೆ ಎಂದು ನೈಋುತ್ಯ ರೈಲ್ವೆ ಇಲಾಖೆ ಎಚ್ಚರಿಕೆ ನೀಡಿದೆ.
undefined
ಧಾರಾಕಾರ ಮಳೆ: ಮಹಾರಾಷ್ಟ್ರದಿಂದ ಕೃಷ್ಣೆಗೆ 92,422 ಕ್ಯುಸೆಕ್ ನೀರು
ಇತ್ತೀಚೆಗಷ್ಟೇ ಗೋವಾ ಪೊಲೀಸರು ದೂಧಸಾಗರ ಜಲಾಶಯ ವೀಕ್ಷಣೆಗೆ ತೆರಳಿದ್ದ ಸಂದರ್ಭದಲ್ಲಿ ಬಸ್ಕಿ ಶಿಕ್ಷೆಯನ್ನು ವಿಧಿಸಿದ್ದರು. ಲಾಠಿ ಪ್ರಹಾರವನ್ನು ಮಾಡಿದ್ದರು. ಆದರೆ, ಪ್ರವಾಸಿಗರು ಮಾತ್ರ ಜಲಪಾತ ವೀಕ್ಷಣೆಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ಕೂಡ ದೂಧಸಾಗರ ಜಲಾಶಯ ಸಮೀಪದ ವೀಕ್ಷಣೆಗೆ ನಿರ್ಬಂಧ ಹೇರಿದೆ.